IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆಸ್ಟ್ರೇಲಿಯಾ ಮಡಿಲಿಗೆ ಅಜ್ಲಾನ್ ಷಾ ಹಾಕಿ ಕಪ್

ಆಸ್ಟ್ರೇಲಿಯಾ ಮಡಿಲಿಗೆ ಅಜ್ಲಾನ್ ಷಾ ಹಾಕಿ ಕಪ್

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಹಾಕಿ ತಂಡ 27ನೇ ಸುಲ್ತಾನ್ ಅಜ್ಲಾನ್ ಶಾ ಕಪ್-2018ರಲ್ಲಿ ಪ್ರಶಸ್ತಿ ಜಯಿಸಿದೆ. ದಾಖಲೆ 10ನೇ ಬಾರಿಗೆ ಆಸ್ಟ್ರೇಲಿಯಾ ತಂಡ ಸಾಧನೆ ಮಾಡಿದೆ. ಮಲೇಷ್ಯಾದ ಇಪೋಹ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಇಂಗ್ಲೆಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿತು. ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ವರ್ಗೀಕರಣ ಪಂದ್ಯದಲ್ಲಿ ಅರ್ಜೆಂಟೀನಾ, ಅತಿಥೆಯ ಮಲೇಷ್ಯಾ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು.

ಅಜ್ಲಾನ್ ಶಾ ಹಾಕಿ ಟೂರ್ನಿ

ಇದು ವಾರ್ಷಿಕ ಅಂತರರಾಷ್ಟ್ರೀಯ ಪುರುಷರ ಹಾಕಿ ಟೂರ್ನಿಯಾಗಿದ್ದು, ಮಲೇಷ್ಯಾದಲ್ಲಿ ನಡೆಯುತ್ತದೆ. ಇದಕ್ಕೆ ಮಲೇಷ್ಯಾದ 9ನೇ ರಾಜ ಮತ್ತು ಮಲೇಷ್ಯಾ ಹಾಕಿಯ ಪಿತಾಮಹ ಮತ್ತು ಅಪೂರ್ವ ಅಭಿಮಾನಿ ಎನಿಸಿಕೊಂಡ ಸುಲ್ತಾನ್ ಅಜ್ಲಾನ್ ಶಾ ಹೆಸರನ್ನು ಇಡಲಾಗಿದೆ. ಇದು 1983ರಲ್ಲಿ ಆರಂಭವಾಗಿದ್ದು, ಎರಡು ವರ್ಷಗಳಿಗೊಮ್ಮೆ ನಡೆಯುತ್ತಿತ್ತು. ಆದರೆ 1998 ಬಳಿಕ ಇದನ್ನು ವಾರ್ಷಿಕ ಟೂರ್ನಿಯಾಗಿ ಆಯೋಜಿಸಲಾಗುತ್ತಿದೆ. ಹಾಕಿ ಕ್ರೀಡೆಯ ಪ್ರಗತಿ ಮತ್ತು ಜನಪ್ರಿಯತೆ ಹಿನ್ನೆಲೆಯಲ್ಲಿ ವಾರ್ಷಿಕ ಟೂರ್ನಿಯಾಗಿ ಪರಿವರ್ತಿಸಲಾಗಿದೆ. ಪ್ರತಿಷ್ಠಿತ ಟೂರ್ನಿಯನ್ನು ಆಸ್ಟ್ರೇಲಿಯಾ ತಂಡ ದಾಖಲೆ 10ನೇ ಬಾರಿಗೆ ಗೆದ್ದುಕೊಂಡಿದೆ. 1983, 1998, 2004, 2005, 2007, 2011, 2013, 2014, 2016 ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದಿದೆ. ಭಾರತ 1985, 1991, 1995 ಮತ್ತು 2009 ಹೀಗೆ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದು, 2010ರಲ್ಲಿ ದಕ್ಷಿಣ ಕೊರಿಯಾ ಜತೆ ಪ್ರಶಸ್ತಿ ಹಂಚಿಕೊಂಡಿದೆ.

Comment