IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಎನ್‍ಸಿಆರ್‍ಬಿಯಿಂದ 33ನೇ ಸಂಸ್ಥಾಪನಾ ದಿನ

ಎನ್‍ಸಿಆರ್‍ಬಿಯಿಂದ 33ನೇ ಸಂಸ್ಥಾಪನಾ ದಿನ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ತನ್ನ 33ನೇ ಸಂಸ್ಥಾಪನಾ ದಿನವನ್ನು 2018 ಮಾರ್ಚ್ 11ರಂದು ಆಚರಿಸಿಕೊಂಡಿತು. ಸಂದರ್ಭದಲ್ಲಿ "ಸಿಟಿಜನ್ ಸರ್ವೀಸಸ್" ಎಂಬ ಮೊಬೈಲ್ ಅಪ್ಲಿಕೇಶನ್ಗೆ ಚಾಲನೆ ನೀಡಲಾಯಿತು. ಇದನ್ನು ಸ್ವತಃ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಅಭಿವೃದ್ಧಿಪಡಿಸಿದೆ. ಮೊಬೈಲ್ ಅಪ್ಲಿಕೇಶನ್ ಅನ್ನು ನಾಗರಿಕರು ಬಳಸಬಹುದಾಗಿದ್ದು, ಇದರ ಮೂಲಕ ದೂರು ನೋಂದಣಿ ಮತ್ತು ಸ್ಥಿತಿಗತಿ ಪರೀಕ್ಷೆ, ಎಸ್ಓಎಸ್ ಸುರಕ್ಷೆ, ಎಫ್ಐಆರ್ ವಿವರ ವೀಕ್ಷಣೆ, ಪೊಲೀಸ್ ಠಾಣೆಗಳನ್ನು ಗುರುತಿಸುವುದು, ವಾಹನ ಸಮನ್ವಯ, ತುರ್ತು ಸಂಪರ್ಕ ಪಟ್ಟಿ, ಪೊಲೀಸ್ ಠಾಣೆ ದೂರವಾಣಿ ಡೈರೆಕ್ಟರಿ ಮತ್ತಿತರ ಸೇವೆಗಳನ್ನು ಪಡೆಯಬಹುದಾಗಿದೆ.

ಎನ್ಸಿಆರ್ಬಿ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಕೇಂದ್ರ ಗೃಹ ಸಚಿವಾಲಯದ ನೋಡೆಲ್ ಏಜೆನ್ಸಿಯಾಗಿದ್ದು, ಹಲವು ಬಗೆಯ ಅಪರಾಧಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಅಂಕಿ ಅಂಶಗಳ ಮೂಲವಾಗಿದೆ. ವಿವಿಧ ಮಾನದಂಡಗಳಾದ ಅಪಘಾತಗಳು, ಆತ್ಮಹತ್ಯೆ, ಅಸಹಜ ಸಾವು ಮತ್ತಿತರ ಅಂಶಗಳ ಬಗ್ಗೆ ರಾಜ್ಯವಾರು ಹಾಗೂ ಇಡೀ ದೇಶದ ಅಂಕಿ ಅಂಶಗಳನ್ನು ಇದು ಒದಗಿಸಲಿದೆ. ದೇಶದ ಜೈಲುಗಳ ಅಂಕಿ ಅಂಶಗಳು ಕೂಡಾ ನೀತಿಗಳನ್ನು ರೂಪಿಸಲು ಮತ್ತು ಸಂಶೋಧನಾ ಉದ್ದೇಶಕ್ಕಾಗಿ ಇಲ್ಲಿ ಲಭ್ಯ. ಇದನ್ನು 1986 ಮಾರ್ಚ್ 11ರಂದು ಕೇಂದ್ರೀಯ ಪೊಲೀಸ್ ಸಂಸ್ಥೆಯಾಗಿ ಆರಂಭಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.

ಇದು ಎಲ್ಲ ಅಪರಾಧಗಳ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಂ (ಸಿಸಿಟಿಎನ್ಎಸ್), ಕೇಂದ್ರ ಸರ್ಕಾರದ ರಾಷ್ಟ್ರೀಯ - ಆಡಳಿತ ಯೋಜನೆಯಡಿ ಮಿಷನ್ ಮೋಡ್ ಪ್ರಾಜೆಕ್ಟ್ ಅನುಷ್ಠಾನ ಮತ್ತು ಮೇಲುಸ್ತುವಾರಿ ಏಜೆನ್ಸಿಯಾಗಿಯೂ ಇದು ಕಾರ್ಯ ನಿರ್ವಹಿಸಲಿದೆ. ಇದು ಮಾಹಿತಿ ತಂತ್ರಜ್ಞಾನ (ಐಟಿ_ ಮತ್ತು ಬೆರಳಚ್ಚು ವಿಜ್ಞಾನ ವಿಚಾರದಲ್ಲಿ ಭಾರತೀಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ವಿದೇಶಿ ಪೊಲೀಸ್ ಅಧಿಕಾರಿಗಳಿಗೆ ಕೂಡಾ ಸೂಕ್ತ ತರಬೇತಿಯನ್ನು ನೀಡುತ್ತದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ದೇಶದ ಅಪರಾಧಗಳ ಬಗ್ಗೆ ನಾಲ್ಕು ವಾರ್ಷಿಕ ಪ್ರಕಟಣೆಗಳನ್ನು ಹೊರತರುತ್ತದೆ. ಅವುಗಳೆಂದರೆ ಅಪರಾಧ, ಜೈಲು ಅಂಕಿ ಅಂಶ, ಅಪಘಾತದಲ್ಲಿ ಸಾವು & ಆತ್ಮಹತ್ಯೆ ಮತ್ತು ಬೆರಳಚ್ಚು. ಇದು ದೇಶದ ಅಪರಾಧ ಅಂಕಿ ಅಂಶಗಳಿಗೆ ಅತ್ಯಂತ ಪ್ರಮುಖವಾದ ಪರಾಮರ್ಶನಾ ದಾಖಲೆಯಾಗಿ ಕೆಲಸ ಮಾಡುತ್ತದೆ.

Comment