IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮೊಟ್ಟಮೊದಲ ಭಾರತ- ಫ್ರಾನ್ಸ್ ಜ್ಞಾನಶೃಂಗ

ಮೊಟ್ಟಮೊದಲ ಭಾರತ- ಫ್ರಾನ್ಸ್ ಜ್ಞಾನಶೃಂಗ

ವಿಶ್ವವಿದ್ಯಾನಿಲಯ, ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಹಕಾರಕ್ಕಾಗಿ ಮೊಟ್ಟಮೊದಲ ಭಾರತ- ಫ್ರಾನ್ಸ್ ಜ್ಞಾನಶೃಂಗ ಯಶಸ್ವಿಯಾಗಿ ನವದೆಹಲಿಯಲ್ಲಿ ನಡೆಯಿತು. ಎರಡು ದಿನಗಳ ಶೃಂಗಸಭೆಯನ್ನು ಭಾರತದಲ್ಲಿರುವ ಫ್ರಾನ್ಸ್ ದೂತಾವಾಸ ಆಯೋಜಿಸಿತ್ತು. ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇದಕ್ಕೆ ಸಹಯೋಗ ನೀಡಿತ್ತು.

ಪ್ರಮುಖ ಅಂಶಗಳು

ಶೃಂಗಸಭೆಯ ವಿಸ್ತøತವಾದ ಉದ್ದೇಶವೆಂದರೆ, ಭಾರತ- ಫ್ರಾನ್ಸ್ ಸಹಕಾರಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನೀಲಿನಕಾಶೆಯನ್ನು ಸಿದ್ಧಪಡಿಸುವುದು ಮತ್ತು ಉಭಯ ದೇಶಗಳ ನಡುವಿನ ಕಂಪನಿಗಳ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುವುದು. ಇದು ಸಾಮಾನ್ಯ ಗುರಿಯನ್ನು ತಲುಪುವ ಸಲುವಾಗಿ ಸಾಮನ್ಯ ವೇದಿಕೆಯನ್ನು ಒದಗಿಸಿಕೊಡುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ಪರಸ್ಪರ ದೇಶಗಳಿಗೆ ಅಧ್ಯಯನಕ್ಕೆ ತೆರಳಲು ಅವಕಾಶ ಮಾಡಿಕೊಡುವುದು, ಸಂಶೋಧನೆ ಮತ್ತು ಅಭಿವೃದ್ಧಿ ಸಹಭಾಗಿತ್ವವನ್ನು ವಿಸ್ತøತಗೊಳಿಸುವುದು ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುವ ದೃಷ್ಟಿಯಿಂದ ಕ್ಯಾಂಪಸ್ ಮತ್ತು ಕಂಪನಿಗಳ ನಡುವೆ ಸಂಪರ್ಕ ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಭಾರತದ 80 ಸಂಸ್ಥೆಗಳಿಂದ ಮತ್ತು ಫ್ರಾನ್ಸ್ 70 ಸಂಸ್ಥೆಗಳಿಂದ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಎಲ್ಲ ಪ್ರಮುಖ ಉದ್ದಿಮೆಗಳು ಪಾಲ್ಗೊಂಡಿವೆ. ಇದಕ್ಕೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಕ್ಯಾಂಪಸ್ ಫ್ರಾನ್ಸ್ ಮತ್ತು ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಸಹಯೋಗವನ್ನು ನೀಡಿವೆ.

ಶೃಂಗಸಭೆ ಐರಿಹಾಸಿಕ ಒಪ್ಪಂದದೊಂದಿಗೆ ಕೊನೆಗೊಂಡಿತು. ಇದರ ಅನ್ವಯ ಉಭಯ ದೇಶಗಳ ನಡುವೆ ಶೈಕ್ಷಣಿಕ ಅರ್ಹತೆಯನ್ನು ಪರಸ್ಪರ ಗುರುತಿಸುವುದು ಮತ್ತು ಮಾನ್ಯ ಮಾಡಲು ಅವಕಾಶವಿದೆ. ಇದರ ಜತೆಗೆ ದಾಖಲೆ ಸಂಖ್ಯೆಯ ಅಂದರೆ 15 ಒಡಂಬಡಿಕೆಗಳನ್ನು ಉಭಯ ದೇಶಗಳ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಮಾಡಿಕೊಂಡವು. ಬಹುತೇಕ ಒಪ್ಪಂದಗಳು ಜಂಟಿ ಯೋಜನೆಗಳು ಮತ್ತು ಪಾಲುದಾರಿಕೆ ಬಗ್ಗೆ ಕೇಂದ್ರಿತವಾಗಿವೆ. ಶೃಂಗಸಭೆಯಲ್ಲಿ ಹಲವು ಅಧಿವೇಶನಗಳು ಮತ್ತು ದುಂಡುಮೇಜಿನ ಸಭೆಗಳು ನಡೆದವು. ಉಭಯ ದಶಗಳ ನಡುವಿನ ಸಾಮಾನ್ಯ ಆಸಕ್ತಿಯ ವಿಷಯಗಳಾದ ವಾಯುಯಾನ, ಕೃಷಿ ಮತ್ತು ಆಹಾರ ಸಂಸ್ಕರಣೆ, ಪರಿಸರ ಸ್ನೇಹಿ ವಿದ್ಯುತ್, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ, ಉದ್ಯೋಗಾವಕಾಶವನ್ನು ಬಲಗೊಳಿಸುವುದು ಮತ್ತಿತರ ಅಂಶಗಳ ಬಗ್ಗೆ ಚರ್ಚೆ ನಡೆಯಿತು.

Comment