IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಬರ್ಲಿನ್ ಐಟಿಬಿಯಲ್ಲಿ ಭಾರತಕ್ಕೆ ಉತ್ತಮ ಪ್ರದರ್ಶಕ ಪ್ರಶಸ್ತಿ

ಬರ್ಲಿನ್ ಐಟಿಬಿಯಲ್ಲಿ ಭಾರತಕ್ಕೆ ಉತ್ತಮ ಪ್ರದರ್ಶಕ ಪ್ರಶಸ್ತಿ

ಜರ್ಮನಿಯ ಬರ್ಲಿನ್ನಲ್ಲಿ ನಡೆದ ವಿಶ್ವ ಪ್ರವಾಸಿ ಮೇಳದಲ್ಲಿ ಭಾರತ ಉತ್ತಮ ಪ್ರದರ್ಶಕ ಪ್ರಶಸಿಯನ್ನು ಪಡೆದುಕೊಂಡಿದೆ. ವಿಶ್ವದ ಮೂಲೆ ಮೂಲೆಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ದೇಶಗಳು ಮೆಗಾ ಮೇಳದಲ್ಲಿ ಭಾಗವಹಿಸಿದ್ದವು. ಎಲ್ಲ ದೇಶಗಳ ಪ್ರವಾಸೋದ್ಯಮ ಸಚಿವರು ಕೂಡಾ ವಿಶ್ವ ಪ್ರವಾಸಿ ಮೇಳದಲ್ಲಿ ಪಾಲ್ಗೊಂಡಿದ್ದರು.

ಭಾರತವನ್ನು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆ) ಕೆ.ಜೆ.ಅಲ್ಫೋನ್ಸ್ ಪ್ರತಿನಿಧಿಸಿದ್ದರು. ದೇಶದ ಹಲವು ಮಂದಿ ಉನ್ನತ ಪ್ರವಾಸೋದ್ಯಮ ಅಧಿಕಾರಿಗಳು ಕೂಡಾ ಇದರಲ್ಲಿ ಭಾಗವಹಿಸಿದ್ದರು. ಭಾರತದ ಇನ್ಕ್ರೆಡಿಬಲ್ ಇಂಡಿಯಾ (ಭಾರತದ ಪ್ರವಾಸೋದ್ಯಮ ಸಚಿವಾಲಯ), ಯೋಗಿ ಆಫ್ ರೇಸ್ಟ್ರ್ಯಾಕ್ ಎಂಬ ಕಿರುಚಿತ್ರವನ್ನು ಪ್ರಸ್ತುತಪಡಿಸಿತ್ತು. ಕಿರು ಚಿತ್ರಕ್ಕೆ 60 ಗಂಟೆಗಳಲ್ಲಿ 32 ಲಕ್ಷ ಹಿಟ್ಗಳು ಬಂದು ದಾಖಲೆ ನಿರ್ಮಿಸಿದವು.

ಐಟಿಬಿ ಬರ್ಲಿನ್

ಐಟಿಬಿ ಬರ್ಲಿನ್ (ಇಂಟರ್ನ್ಯಾಷನಲ್ ಟೂರಿಸಮ್ ಬೋರ್ಸ್- ಬರ್ಲಿನ್) ವಿಶ್ವದ ಅತಿದೊಡ್ಡ ಪ್ರವಾಸೋದ್ಯಮ ಮೇಳವಾಗಿದೆ. ಇದರಲ್ಲಿ ಹೋಟೆಲ್ಗಳು, ಪ್ರವಾಸಿ ಮಂಡಳಿಗಳು, ಪ್ರವಾಸಿ ಆಪರೇಟರ್ಗಳು, ವ್ಯವಸ್ಥೆಗಳನ್ನು ಒದಗಿಸುವವರು, ಏರ್ಲೈನ್ಸ್ ಮತ್ತು ಕಾರು ಬಾಡಿಗೆಗೆ ನೀಡುವ ಕಂಪನಿಗಳು ಬೃಹತ್ ಮೇಳದಲ್ಲಿ ಪಾಲ್ಗೊಳ್ಳುತ್ತವೆ. ಮೇಳವು ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ಮೆಸ್ಸೆ ಬರ್ಲಿನ್ನಲ್ಲಿ ನಡೆಯುತ್ತದೆ. ಪ್ರತಿ ಬಾರಿ ಅಧಿಕೃತ ಪಾಲುದಾರ ದೇಶ ಇರುತ್ತದೆ.

Comment