IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತದ ಮೊಟ್ಟಮೊದಲ ನೌಕಾ ಪೊಲೀಸಿಂಗ್ ಅಕಾಡೆಮಿ ಸ್ಥಾಪನೆ

ಭಾರತದ ಮೊಟ್ಟಮೊದಲ ನೌಕಾ ಪೊಲೀಸಿಂಗ್ ಅಕಾಡೆಮಿ ಸ್ಥಾಪನೆ

ದೇಶದ ಮೊಟ್ಟಮೊದಲ ರಾಷ್ಟ್ರೀಯ ನೌಕಾ ಪೊಲೀಸಿಂಗ್ ಅಕಾಡೆಮಿ, ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ (ಎನ್ಎಸಿಪಿ) ಅನ್ನು ಗುಜರಾತ್ನಲ್ಲಿ ಸ್ಥಾಪಿಸಲಾಗುತ್ತಿದೆ. ದೇಶದ ಕರಾವಳಿ ಪ್ರದೇಶಕ್ಕೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸರಿಗೆ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದ್ದು, 2018 ಏಪ್ರಿಲ್ನಲ್ಲಿ ಇದು ಕಾರ್ಯಾರಂಭ ಮಾಡಲಿದೆ. ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ (ಎನ್ಎಸಿಪಿ), ಗುಜರಾತ್ ದ್ವಾರಕ ಜಿಲ್ಲೆಯ ದೇವಭೂಮಿಯಲ್ಲಿರುವ ಓಖಾ ಪಟ್ಟಣದ ಮೀನುಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಆರಂಭವಾಗಲಿದೆ.

ಪ್ರಮುಖ ಅಂಶಗಳು

ಇದು ದೇಶದಲ್ಲೇ ಪ್ರಪ್ರಥಮ ಕರಾವಳಿ ಪೊಲೀಸಿಂಗ್ ಅಕಾಡೆಮಿಯಾಗಿದ್ದು, ಇದನ್ನು ಬಹು ಏಜೆನ್ಸಿ ತಂಡ ಸೃಷ್ಟಿಸಿ ನಿರ್ವಹಿಸುತ್ತದೆ. ಅರೆಮಿಲಿಟರಿ ಪಡೆ ಮತ್ತು ರಕ್ಷಣಾ ಪಡೆಗಳು ತಮ್ಮ ಕೌಶಲವನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಇದು ನೆರವಾಗಲಿದೆ. ಕರಾವಳಿಯನ್ನು ಹೊಂದಿರುವ ರಾಜ್ಯಗಳ ಸಾಗರ ಭದ್ರತಾ ಪಡೆಗಳು ಇದರಲ್ಲಿ ತರಬೇತಿ ಪಡೆಯಲಿವೆ.

ಇದು ಪೊಲೀಸರು ಹಾಗೂ ಇತರ ಭದ್ರತಾ ಏಜೆನ್ಸಿಗಳ ಸಿಬ್ಬಂದಿಗೆ ಸಾಗರ ಕಾನೂನುಗಳು, ಸಾಗರಕೌಶಲ, ದೋಣಿಯ ಕೆಲಸ, ಪಥದರ್ಶಕ ವ್ಯವಸ್ಥೆ, ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು, ಸಮುದ್ರ ಮಾರ್ಗದರ್ಶನ ವ್ಯವಸ್ಥೆ ಬಳಕೆ, ಮೇಲ್ವಿಚಾರಣಾ ಸಾಧನಗಳ ಬಳಕೆ, ಸುಧೀರ್ಘ ಕಾರ್ಯಾಚರಣೆಗಳನ್ನು ನಡೆಸುವ ವೇಳೆ ಜೀವರಕ್ಷಣೆ ಕೌಶಲ, ಒತ್ತಡದ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಬಗೆ ಮತ್ತಿತರ ಅಂಶಗಳ ಬಗ್ಗೆ ತರಬೇತಿ ಪಡೆಯಲಿದ್ದಾರೆ. ಇದು ಸಮುದ್ರ ಕಿನಾರೆಯಿಂದ 12 ನಾಟಿಕಲ್ ಮೈಲು ದೂರದ ವರೆಗಿನ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಗೆ ತರಬೇತಿಯನ್ನು ನೀಡಲಿದೆ.

ಬ್ಯೂರೊ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್ಮೆಂಟ್ (ಬಿಪಿಆರ್ಡಿ) ಪ್ರಾಯೋಗಿಕವಾಗಿ ಕೇಂದ್ರವನ್ನು ಆರಂಭಿಸಿ, ನಿರ್ವಹಿಸಲಿದೆ. ಗಡಿಭದ್ರತಾ ಪಡೆ (ಬಿಎಸ್ಎಫ್), ಭಾರತೀಯ ನೌಕಾ ಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆಯ ಪ್ರಮುಖ ತಂಡಗಳು ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತವೆ. ಗಡಿಭದ್ರತಾ ಪಡೆಯು ಕ್ಯಾಂಪಸ್ಗೆ ಭದ್ರತೆ ಒದಗಿಸುವ ಹೊಣೆಯನ್ನೂ ಹೊಂದಿದೆ. ಭಾರತದ ನೌಕಾಪಡೆ ಮತ್ತು ಭಾರತದ ಕರಾವಳಿ ಕಾವಲು ಪಡೆ, ತರಬೇತಿಯ ಪಠ್ಯಕ್ರಮಗಳನ್ನು ರೂಪಿಸುವ, ಕೌಶಲ ಹೊಂದಿದ ತರಬೇತಿದಾರರನ್ನು ಒದಗಿಸುವ ಮತ್ತು ತರಬೇತಿಗೆ ಅಗತ್ಯಯವಾದ ನಾವೆಗಳು ಮತ್ತು ಜೆಟ್ಟಿಗಳನ್ನು ಒದಗಿಸಬೇಕಾಗುತ್ತದೆ. ಓಖ್ಲಾದಲ್ಲಿ ನೆಲೆ ನಿಂತಿರುವ ಎರಡು ಇಂಟರ್ಸೆಪ್ಟರ್ ದೋಣಿಗಳನ್ನು ಅಕಾಡೆಮಿಗಾಗಿ ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ ಭಾರತೀಯ ನೌಕಾಪಡೆ, ಭಾರತದ ಕರಾವಳಿ ಕಾವಲು ಪಡೆ ಮತ್ತು ಗಡಿಭದ್ರತಾ ಪಡೆಯ ಸಿಬ್ಬಂದಿ ಬೋಧಕರಾಗಿ ಪಾಲ್ಗೊಳ್ಳುವರು.

ಹಿನ್ನೆಲೆ

ಭಾರತ ಒಟ್ಟು 7517 ಕಿಲೋಮೀಟರ್ ಉದ್ದದ ಕರಾವಳಿ ತೀರವನ್ನು ಹೊಂದಿದ್ದು, 12 ಪ್ರಮುಖ ಬಂದರುಗಳು ಮತ್ತು 187 ಸಣ್ಣ ಅಥವಾ ಮಧ್ಯಂತರ ಬಂದರುಗಳು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಭಾರತದ ಜಲ ಗಡಿ 12 ನಾಟಿಕಲ್ ಮೈಲಿ ಅಂತರದಲ್ಲಿ ಕೊನೆಗೊಳ್ಳುತ್ತದೆ. ಆದರೆ ಇಇಝೆಡ್ಗಳು ಕರಾವಳ ತೀರದಿಂದ 200 ನಾಟಿಕಲ್ ಮೈಲು ವರೆಗೆ ಇರುತ್ತವೆ. ಪ್ರಸ್ತುತ ಭಾರತದಲ್ಲಿ ಸಾಗರ ಅಥವಾ ಕರಾವಳಿ ಪೊಲೀಸ್ ಪಡೆಗೆ ತರಬೇತಿ ನೀಡುವ ಯಾವುದೇ ಸಂಘ ಸಂಸ್ಥೆಗಳು ಇಲ್ಲ. ಪೊಲೀಸರಿಗೆ ಕರಾವಳಿ ಪೊಲೀಸಿಂಗ್ ಮತ್ತು ಕರಾವಳಿ ಭದ್ರತೆ ಬಗ್ಗೆ ವೃತ್ತಿಪರವಾಗಿ ತರಬೇತಿ ನೀಡುವ ವ್ಯವಸ್ಥೆ ಇರಲಿಲ್ಲ. 2008 ನವೆಂಬರ್ನಲ್ಲಿ ದೇಶದ ಹಣಕಾಸು ರಾಜಧಾನಿ ಎನಿಸಿದ ಮುಂಬೈ ಮೇಲೆ ಸಮುದ್ರದ ಮೂಲಕ ಬಂದ ಉಗ್ರಗಾಮಿಗಳು ದಾಳಿ ಮಾಡಿದ ಬಳಿಕ, ಇಂಥ ಸ್ಥಿತಿಯನ್ನು ನಿಭಾಯಿಸಲು ಕೌಶಲಯುತ ಸಿಬ್ಬಂದಿ ಬೇಕು. ಇದಕ್ಕಾಗಿ ಪ್ರತ್ಯೇಕ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂಬ ಅಗತ್ಯ ಕಂಡುಬಂದಿತ್ತು. ಪಾಕಿಸ್ತಾನದ ಜತೆಗೆ ಕೂಡಾ ಭಾರತ ಜಲಗಡಿಯನ್ನು ಹಂಚಿಕೊಂಡಿರುವುದರಿಂದ ಇದು ಅಗತ್ಯವಾಗಿದೆ.

Comment