IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮೈಲ್ಸ್-18: ಮೊಟ್ಟಮೊದಲ ಬಹುದೇಶಗಳ ನೌಕಾ ಕಾರ್ಯಾಚರಣೆ

ಮೈಲ್ಸ್-18: ಮೊಟ್ಟಮೊದಲ ಬಹುದೇಶಗಳ ನೌಕಾ ಕಾರ್ಯಾಚರಣೆ

ಮೊಟ್ಟಮೊದಲ ಬಹುದೇಶಗಳ ನೌಕಾ ಕಾರ್ಯಾಚರಣೆ ಮೈಲ್ಸ್- 18 ಅಂಡಮಾನ್ ಸಮುದ್ರದಲ್ಲಿ ನಡೆದಿದೆ. ಮೂರು ದಿನಗಳ ಕಾರ್ಯಾಚರಣೆಯನ್ನು ಮಿಲನ್-2018 ಅಂಗವಾಗಿ ಆಯೋಜಿಸಲಾಗಿತ್ತು.

ಮಿಲನ್-2018 ಎನ್ನುವುದು ಬಹುರಾಷ್ಟ್ರೀಯ ಮೆಗಾ ಸಮಾರಂಭವಾಗಿದ್ದು, ಅಂಡಮಾನ್ ನಿಕೋಬಾರ್ ನೌಕಾ ಕಮಾಂಡ್ ಇದನ್ನು ಆಯೋಜಿಸಿದೆ. ಕಾರ್ಯಾಚರಣೆಯ ಧ್ಯೇಯವಾಕ್ಯ "ಫ್ರೆಂಡ್ಶಿಪ್ ಅಕ್ರಾಸ್ ಸೀಸ್" ಎಂದಾಗಿದೆ. ಇದರ ಮುಖ್ಯ ಉದ್ದೇಶ ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಮುಖ ಸಮುದ್ರ ಲೇನ್ಗಳಲ್ಲಿ ತಡೆಯುವುದು.

ಮೈಲ್ಸ್-18: ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಮಲೇಷ್ಯಾ, ಮ್ಯಾನ್ಮಾರ್, ಸಿಂಗಾಪುರ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಹೀಗೆ ಎಂಟು ದೇಶಗಳ 11 ನೌಕಾ ಹಡಗುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಇದರ ಜತೆಗೆ ಭಾರತದ ಒಂಬತ್ತು ಹಡಗುಗಳು ಮೈಲ್ಸ್-18 ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಇದರ ಉದ್ದೇಶವೆಂದರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ದೇಶಗಳ ನಡುವೆ ಅಂತರ ಕಾರ್ಯಾಚರಣೆಯನ್ನು ವಿಸ್ತøತಗೊಳಿಸುವದು. ಇದು ಪರಿಹಾರ ಮತ್ತು ಶೋಧ ಕಾರ್ಯಾಚರಣೆಯನ್ನು ವಿಸ್ತರಿಸುವ ಉದ್ದೇಶವನ್ನೂ ಹೊಂದಿದೆ. ಸಾಗರ ನಿಷೇಧ ಕಾರ್ಯಾಚರಣೆ, ಪ್ರಮುಖ ಕಾರ್ಯಾಚರಣೆ ಕೌಶಲ ಮತ್ತು ಅಭ್ಯಾಸಗಳನ್ನು ಇದು ಒಳಗೊಂಡಿದೆ. ಜತೆಗೆ ವೈವಿಧ್ಯಮಯ ಭದ್ರತಾ ಪರಿಸ್ಥಿತಿಗಳಿಗೆ ತಕ್ಕ ಅಭ್ಯಾಸವನ್ನೂ ಜಂಟಿ ಕಾರ್ಯಾಚರಣೆಯಲ್ಲಿ ನಡೆಸಲಾಗುತ್ತದೆ.

ಹಿನ್ನೆಲೆ

ಮಿಲನ್ ಕಾರ್ಯಾಚರಣೆ ಮೊಟ್ಟಮೊದಲ ಬಾರಿಗೆ 1995ರಲ್ಲಿ ಆರಂಭವಾಗಿದ್ದು, ಆರಂಭಿಕ ವರ್ಷ ಕೇವಲ ಐದು ದೇಶಗಳ ನೌಕಾಪಡೆಗಳು ಮಾತ್ರ ಇದರಲ್ಲಿ ಭಾಗವಹಿಸಿದ್ದವು. ಇದರ ಮುಖ್ಯವಾದ ಉದ್ದೆಶವೆಂದರೆ, ಹಿಂದೂ ಮಹಾಸಾಗರ ಪ್ರದೇಶದ ಸಾಮಾನ್ಯ ಕಳಕಳಿಯ ಅಂಶಗಳನ್ನು ಪರಿಣಾಮಕಾರಿ ವೇದಿಕೆಯಲ್ಲಿ ಚರ್ಚಿಸುವುದು ಮತ್ತು ಸ್ನೇಹದೇಶಗಳ ನಡುವಿನ ನೌಕಾಪಡೆಗಳ ನಡುವೆ ಇನ್ನೂ ಆಳವಾದ ಸಹಕಾರವನ್ನು ಆಯೋಜಿಸುವುದು. ಬಹುದೇಶೀಯ ಕಾರ್ಯಾಚರಣೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಭಾರತದ ನೌಕಾಪಡೆ ಆಯೋಜಿಸುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಆಶ್ರಯದಲ್ಲಿ ಇದು ನಡೆಯುತ್ತದೆ.

Comment