IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ರಾಜ್ಯ ಧ್ವಜ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ಒಪ್ಪಿಗೆ

ರಾಜ್ಯ ಧ್ವಜ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ಒಪ್ಪಿಗೆ

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಚಿಸಿದ್ದ ಒಂಬತ್ತು ಮಂದಿ ತಜ್ಞರ ಸಮಿತಿ ಪ್ರಸ್ತಾವಿಸಿ, ವಿನ್ಯಾಸಗೊಳಿಸಿದ ರಾಜ್ಯ ಧ್ವಜವನ್ನು ಸ್ವೀಕರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದು ಅನಧಿಕೃತವಾದ ಕೆಂಪು ಮತ್ತು ಹಳದಿ ಧ್ವಜದ ಬದಲು ಕರ್ನಾಟಕ ರಾಜ್ಯದ ಅಧಿಕೃತ ಧ್ವಜ ಎನಿಸಿಕೊಳ್ಳಲಿದೆ. ಪ್ರಸ್ತುತ ಕೆಂಪು ಮತ್ತು ಹಳದಿ ಧ್ವಜವನ್ನು ಸ್ಥಳೀಯ ಹೆಮ್ಮೆಯ ಪ್ರತೀಕವಾಗಿ ಅನಧಿಕೃತವಾಗಿ ಬಳಸಲಾಗುತ್ತಿದೆ.

ಪ್ರಮುಖ ಅಂಶಗಳು

ಸಮಿತಿ ಹೊಸದಾಗಿ ತ್ರಿವರ್ಣ ಧ್ವಜವನ್ನು ಶಿಫಾರಸ್ಸು ಮಾಡಿದೆ. ಇದರ ಮೇಲುತುದಿಯಲ್ಲಿ ಹಳದಿ ಬಣ್ಣ, ಮಧ್ಯದಲ್ಲಿ ಬಿಳಿ ಹಾಗೂ ತಳಭಾಗದಲ್ಲಿ ಕೆಂಪು ಬಣ್ಣ ಇರುತ್ತದೆ. ಧ್ವಜದ ಮಧ್ಯದಲ್ಲಿ ರಾಜ್ಯಲಾಂಛನವಾದ ಗಂಡಬೇರುಂಡ (ಎರಡು ತಲೆಯ ಪೌರಾಣಿಕ ಪಕ್ಷಿ) ಇರುತ್ತದೆ. ಹೊಸ ಧ್ವಜದ ಬಿಳಿಬಣ್ಣವು ಶಾಂತಿಯನ್ನು ಸಾಂಕೇತಿಸುತ್ತದೆ. ಇದು ಕರ್ನಾಟಕದ ಬಗ್ಗೆ ಇರುವ ಒಳ್ಳೆಯ ಪ್ರತಿಷ್ಠೆಯನ್ನು ಬಿಂಬಿಸುತ್ತದೆ. ಇತರ ಎರಡು ಬಣ್ಣಗಳಾದ ಹಳದಿ ಮತ್ತು ಕೆಂಪು ಕರ್ನಾಟಕದ ಐಡೆಂಟಿಟಿಯ ಪ್ರತಿರೂಪವಾಗಿರುತ್ತವೆ. ಇದೀಗ ರಾಜ್ಯ ಸರ್ಕಾರವು ಅಧಿಕೃತವಾದ ಪ್ರಸ್ತಾವನೆಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿಕೊಡಲಿದೆ. ಏಕೆಂದರೆ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯದಡಿ ಧ್ವಜಸಂಹಿತೆ-2002ನ್ನು ತಿದ್ದುಪಡಿ ತಂದು ರಾಜ್ಯ ಧ್ವಜವನ್ನು ಅದರಲ್ಲಿ ಸೇರಿಸಬೇಕಾಗುತ್ತದೆ. ಹೊಸ ತಿದ್ದುಪಡಿಯು, ಕರ್ನಾಟಕದ ಧ್ವಜವನ್ನು ಧ್ವಜಸಂಹಿತೆಯಲ್ಲಿ ಒಂದು ಸಂಕೇತವಾಗಿ ಬಿಂಬಿಸಲಿದೆ.

ಪ್ರಸ್ತಾವನೆಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅನುಮೋದನೆ ಸಿಕ್ಕಿ, ಧ್ವಜವನ್ನು ಸ್ವೀಕರಿಸಿದರೆ, ರಾಜ್ಯಕ್ಕೆ ಪ್ರತ್ಯೇಕ ಧ್ವಜವನ್ನು ಹೊಂದಿರುವ ಎರಡನೇ ರಾಜ್ಯವಾಗಿ ಕರ್ನಾಟಕ ಪರಿಗಣಿಸಲ್ಪಡುತ್ತದೆ. ಈಗಾಗಲೇ ಕಾಶ್ಮೀರ ರಾಜ್ಯ ತನ್ನ ಪ್ರತ್ಯೇಕ ಧ್ವಜವನ್ನು ಹೊಂದಿದೆ. ಕರ್ನಾಟಕ ಅನಧಿಕೃತವಾಗಿ 1960 ದಶಕದ ಮಧ್ಯಭಾಗದಿಂದಲೂ ಕೆಂಪು- ಹಳದಿ ಧ್ವಜವನ್ನು ಬಳಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕನ್ನಡೇತರ ಚಲನಚಿತ್ರಗಳ ಪ್ರದರ್ಶನವನ್ನು ವಿರೋಧಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುವ ವೇಳೆ ಕೆಂಪು- ಹಳದಿ ಧ್ವಜವನ್ನು ಬಳಸಲು ಆರಂಭಿಸಿದ್ದರು. ಮೊದಲು ಅಸ್ತಿತ್ವದಲಲಿದ್ದ ಕೆಂಪು ಹಾಗೂ ಹಳದಿ ಧ್ವಜವನ್ನು ಕನ್ನಡ ಲೇಖಕ ಹಾಗೂ ಹೋರಾಟಗಾರ ಮಾ.ರಾಮಮೂರ್ತಿ ವಿನ್ಯಾಸಗೊಳಿಸಿದ್ದರು. ಕನ್ನಡ ಪಕ್ಷ ಎಂಬ ಕನ್ನಡಪರ ರಾಜಕೀಯ ಪಕ್ಷಕ್ಕಾಗಿ ಅನಧಿಕೃತ ಧ್ವಜವನ್ನು ರೂಪಿಸಿದ್ದರು. ಅನಧಿಕೃತ ಧ್ವಜವನ್ನು ಪ್ರತಿವರ್ಷದ ನವೆಂಬರ್ 1ರಂದು ಅಂದರೆ ಕರ್ನಾಟಕ ರಾಜ್ಯೋತ್ಸವ ದಿನದಂದು ಹಾರಿಸಲಾಗುತ್ತದೆ. ಇಡೀ ನವೆಂಬರ್ ತಿಂಗಳಲ್ಲಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ರಾಜ್ಯೋತ್ಸವ ಆಚರಿಸುವ ವೇಳೆ ಧ್ವಜವನ್ನು ಹಾರಿಸಲಾಗುತ್ತದೆ.

ಕರ್ನಾಟಕ ಈಗಾಗಲೇ ಅಧಿಕೃತವಾದ ರಾಜ್ಯಗೀತೆಯನ್ನು ಹೊಂದಿದ್ದು, ಪ್ರತ್ಯೇಕ ರಾಜ್ಯ ಧ್ವಜವನ್ನೂ ಹೊಂದುವುದರಲ್ಲಿ ಯಾವ ತಪ್ಪೂ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.

Comment