IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತ- ಬಾಂಗ್ಲಾ ಗಡಿಯಲ್ಲಿ ಅಪರಾಧ ಮುಕ್ತ ವಲಯ

ಭಾರತ- ಬಾಂಗ್ಲಾ ಗಡಿಯಲ್ಲಿ ಅಪರಾಧ ಮುಕ್ತ ವಲಯ

ಭಾರತದ ಗಡಿಭದ್ರತಾ ಪಡೆ (ಬಿಎಸ್ಎಫ್) ಮತ್ತು ಬಾಂಗ್ಲಾದೇಶದ ಬಾರ್ಡರ್ ಗಾರ್ಡ್ (ಬಿಜಿಬಿ) ಮಹಾನಿರ್ದೇಶಕರು ಭಾರತ- ಬಾಂಗ್ಲಾದೇಶ ಗಡಿಯ 8.3 ಕಿಲೋಮೀಟರ್ ಪ್ರದೇಶವನ್ನು ಮೊಟ್ಟಮೊದಲ ಬಾರಿಗೆ ಅಪರಾಧ ಮುಕ್ತ ವಲಯ ಎಂದು ಘೋಷಿಸಿದ್ದಾರೆ. ಭಾಗದಲ್ಲಿ ಮುಖ್ಯವಾಗಿ ಭಾರತದ ಗುನರ್ಮತ್ ಮತ್ತು ಕಲ್ಯಾಣಿ ಗಡಿ ಹೊರಠಾಣೆಗಳು ಮತ್ತು ಬಾಂಗ್ಲಾದೇಶದ ಪುತ್ಖಲಿ ಮತ್ತು ದೌಲತ್ಪುರ ಠಾಣೆಯ ವ್ಯಾಪ್ತಿಯ ಪ್ರದೇಶಗಳು ಸೇರುತ್ತವೆ.

ಪ್ರಮುಖ ಅಂಶಗಳು

ಭಾರತ ಹಾಗೂ ಬಾಂಗ್ಲಾದೇಶ 4156 ಕಿಲೋಮೀಟರ್ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಳ್ಳುತ್ತವೆ. ಇದು ಭಾರತ ಯಾವುದೇ ನೆರೆಯ ದೇಶಗಳ ಜತೆ ಹಂಚಿಕೊಂಡಿರುವ ಅತಿಉದ್ದದ ಗಡಿಯಾಗಿದೆ. ಇದು ಐದು ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿದೆ. ಅಸ್ಸಾಂನಲ್ಲಿ 262 ಕಿಲೋಮೀಟರ್, ತ್ರಿಪುರಾದಲ್ಲಿ 856 ಕಿಲೋಮೀಟರ್, ಮಿಜೋರಾಂನಲ್ಲಿ 180 ಕಿಲೋಮೀಟರ್, ಮೇಘಾಲಯದಲ್ಲಿ 443 ಕಿಲೋಮೀಟರ್ ಹಾಗೂ ಪಶ್ಚಿಮ ಬಂಗಾಳದಲ್ಲಿ 2217 ಕಿಲೋಮೀಟರ್ ಗಡಿ ಹಂಚಿಕೊಂಡಿದೆ.

ಮೊಟ್ಟಮೊದಲ ಅಪರಾಧ ಮುಕ್ತ ವಲಯವು, ಅತ್ಯಧಿಕ ಅಪರಾಧ ಕೃತ್ಯಗಳು ನಡೆಯುತ್ತಿದ್ದ ಪ್ರದೇಶವಾಗಿದ್ದು, ಹಸುಗಳ ಕಳ್ಳಸಾಗಾಣಿಕೆ ಮತ್ತು ಇತರ ಅಪರಾಧಗಳಿಗೆ ಕುಖ್ಯಾತವಾಗಿದೆ. ಎರಡೂ ಗಡಿಭದ್ರತಾ ಪಡೆಗಳು ಉಭಯ ದೇಶಗಳ ಸ್ಥಳೀಯ ನಾಗರಿಕ ಆಡಳಿತಗಾರರ ಸಹಾಯದಿಂದ, ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಹಾಯದಿಂದ ಭಾಗದಲ್ಲಿ ಯಾವುದೇ ಅಪರಾಧಗಳು ಸಂಭವಿಸಿದಂತೆ ಪರಿಣಾಮಕಾರಿಯಾಗಿ ತಡೆಯಲಿದ್ದಾರೆ.

ಎರಡೂ ದೇಶಗಳ ಗಡಿಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಿ, ಯಾವುದೇ ಅಪರಾಧ ಕೃತ್ಯಗಳು ಅಥವಾ ಸಮಾಜ ವಿರೋಧಿ ಚಟುವಟಿಕೆಗಳು ಭಾಗದಲ್ಲಿ ನಡೆಯದಂತೆ ಎಚ್ಚರ ವಹಿಸಲಿವೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, 5-6 ತಿಂಗಳ ಬಳಿಕ ಮತ್ತೆ ಇದನ್ನು ಪರಿಶೀಲಿಸಲಾಗುವುದು. ಇದನ್ನು ಅಧಿಕ ತೊಂದರೆ ಇರುವ ಇತರ ಪ್ರದೇಶಗಳಿಗೂ ವಿಸ್ತರಿಸಲು ಉದ್ದೇಶಿಸಿದ್ದು, ಅತ್ಯಂತ ಕಠಿಣ ಪ್ರದೇಶ ಎನಿಸಿದ, ಬಿಎಸ್ಎಫ್ ದಕ್ಷಿಣ ಬಂಗಾಳ ಫ್ರಾಂಟಿಯರ್ ಭಾಗದಲ್ಲಿ ಬರುವ 913 ಕಿಲೋಮೀಟರ್ ಭಾರತ- ಬಾಂಗ್ಲಾ ಗಡಿಯವರೆಗೆ ವಿಸ್ತರಿಸಲಾಗುತ್ತದೆ.

Comment