IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ದಯಾಮರಣಕ್ಕೆ ಸುಪ್ರೀಂಕೋರ್ಟ್ ಅಸ್ತು

ದಯಾಮರಣಕ್ಕೆ ಸುಪ್ರೀಂಕೋರ್ಟ್ ಅಸ್ತು

ನಿಷ್ಕ್ರಿಯ ದಯಾಮರಣಕ್ಕೆ ಮತ್ತು ಮುಂಗಡವಾಗಿ ವೈದ್ಯಕೀಯ ನಿರ್ದೇಶನಗಳನ್ನು ನೀಡುವ ಹಕ್ಕು ಅಥವಾ ಜೀವಿತ ಉಯಿಲು ವ್ಯವಸ್ಥೆ ಆರಂಭಿಸಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ. ಮನುಷ್ಯರಿಗೆ ಗೌರವಯುತವಾಗಿ ಸಾಯುವ ಹಕ್ಕು ಇದೆ. ಇದು ಮೂಲಭೂತ ಹಕ್ಕಾಗಿದೆ. ಆದರೆ ಇದಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ರಚಿಸಬೇಕಿದ್ದು, ಮಾರ್ಗಸೂಚಿ ಅನ್ವಯವೇ ಅನುಮತಿ ನೀಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿದೆ. ನಿಷ್ಕ್ರಿಯ ದಯಾಮರಣ ಎಂದರೆ, ಪುನಶ್ಚೇತನದ ನಿರೀಕ್ಷೆಯೇ ಇಲ್ಲದ ಅಥವಾ ರೋಗದಿಂದ ಗುಣಮುಖವಾಗುವ ಸಾಧ್ಯತೆಯೇ ಇಲ್ಲದಾಗ ರೋಗಿಯ ಇಚ್ಛೆಯಂತೆ ಸಾಯಲು ಅನುವು ಮಾಡಿಕೊಡುವ ಸಲುವಾಗಿ ವೈದ್ಯಕೀಯ ಬೆಂಬಲವನ್ನು ಹಿಂತೆಗೆದುಕೊಳ್ಳುವುದು ಅಥವಾ ಬೆಂಬಲವನ್ನು ತಡೆಹಿಡಿಯುವುದು.

ಸುಪ್ರೀಂ ಆದೇಶ

ಭಾರತದ ಸಂವಿಧಾನದ 21ನೆ ವಿಧಿಯಲ್ಲಿ ನೀಡಿರುವ ಬದುಕುವ ಹಕ್ಕು ಹಾಗೂ ಗೌರವಯುತವಾಗಿ ಬದುಕುವ ಹಕ್ಕು ವಾಸ್ತವವಾಗಿ ಗೌರವಯುತವಾಗಿ ಸಾಯುವ ಹಕ್ಕನ್ನೂ ಒಳಗೊಂಡಿದೆ. ಮನುಷ್ಯ ನೋವು ಅನುಭವಿಸಲು ಅವಕಾಶ ನೀಡುವುದು ಅಥವಾ ಬಲವಂತ ಮಾಡುವುದು ಹಾಗೂ ಅನಗತ್ಯವಾದ ವೈದ್ಯಕೀಯ ಬೆಂಬಲದೊಂದಿಗೆ ನರಳಲು ಅವಕಾಶ ನೀಡುವುದು ಆತನ ಘನತೆಯನ್ನು ಕಿತ್ತುಕೊಂಡಂತೆ.

ಇದು ನಿಷ್ಕ್ರಿಯ ದಯಾಮರಣವನ್ನು ಆತ್ಮಹತ್ಯೆಯಿಂದ ಮತ್ತು ಕ್ರಿಯಾತ್ಮಕ ಇಚ್ಛಾಮರಣದಿಂದ ಪ್ರತ್ಯೇಕಿಸಿದೆ. ದಯಾಮರಣ ಎಂದರೆ ಅನಿವಾರ್ಯವಾದ ನಿರ್ಣಯವನ್ನು ಮತ್ತಷ್ಟು ವೇಗಗೊಳಿಸುವ ಪ್ರಕ್ರಿಯೆಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಕ್ರಿಯಾತ್ಮಕ ಇಚ್ಛಾಮರಣ ಕಾನೂನುಬಾಹಿರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆತ್ಮಹತ್ಯೆಯು ವಾಸ್ತವವಾಗಿ ಅತಿರೇಕದ ಕ್ರಿಯೆಯಾಗಿದ್ದು, ಇದು ಅಸಹಜ ಸಾವಿನಲ್ಲಿ ಅಂತ್ಯವಾಗುತ್ತದೆ. ಮೌಲಿಕವಾದ ಜೀವನದ ಉಯಿಲು ಸೌಲಭ್ಯವು ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ಕಲ್ಪಿಸುತ್ತದೆ. ಕಾನೂನುಬದ್ಧವಾಗಿ ಮುಂಗಡ ವೈದ್ಯಕೀಯ ನಿರ್ದೇಶನಗಳನ್ನು ಕಾನೂನುಬದ್ಧವಾಗಿ ಗೌರವಿಸಲು ವಿಫಲವಾದಲ್ಲಿ, ಸಾಯುವ ಪ್ರಕ್ರಿಯೆಯನ್ನು ಸುಲಲಿತಗೊಳಿಸುವ ಪ್ರಕ್ರಿಯೆಗೆ ತಡೆಯಾಗಲಿದೆ. ತೀವ್ರವಾಗಿ ಅನಾರೋಗ್ಯಪೀಡಿತವಾಗಿರುವ ಅಥವಾ ಕಾಯಂ ಆಗಿ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದ ರೋಗಿಗಳು, ಪುನಶ್ಚೇತನಗೊಳ್ಳುವ ನಿರೀಕ್ಷೆಯೇ ಇಲ್ಲ ಎಂದಾದಲ್ಲಿ, ಜೀವಿತ ಉಯಿಲಿಗೆ ಆದ್ಯತೆ ನೀಡಬೇಕು ಹಾಗೂ ಸ್ವಯಂ ನಿರ್ಧಾರದ ಹಕ್ಕಿಗೆ ಅವಕಾಶ ಮಾಡಿಕೊಡಬೇಕು.

ಮುಂಗಡ ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ಸೂಕ್ತ ನೀತಿ ನಿರ್ದೇಶನಗಳನ್ನು ಕೂಡಾ ಇದು ನಿಗದಿಪಡಿಸಿದೆ. ಇದು ಮಾರ್ಗಸೂಚಿಗಳನ್ನು ನಿಗದಿಪಡಿಸಿರುವುದು ಮಾತ್ರವಲ್ಲದೇ, ನಿಷ್ಕ್ರಿಯ ದಯಾಮರಣವನ್ನು ಜಾರಿಗೊಳಿಸಲು ಸುರಕ್ಷಾ ಕ್ರಮಗಳನ್ನು ಕೂಡಾ ಸೂಚಿಸಿದೆ. ಕ್ಷೇತ್ರದಲ್ಲಿ ಸಂಸತ್ತು ಶಾಸನವನ್ನು ತರುವವರೆಗೂ ಮಾರ್ಗದರ್ಶಿ ಸೂತ್ರಗಳು ಹಾಗೂ ನಿರ್ದೇಶನಗಳು ಜಾರಿಯಲ್ಲಿರುತ್ತವೆ.

ಅಂತ್ಯದ ಭಾವನೆ: ನಿಷ್ಕ್ರಿಯ ದಯಾಮರಣವನ್ನು ಗುರುತಿಸುವಲ್ಲಿ ಸುಪ್ರೀಂಕೋರ್ಟ್, ಮುಂಗಡ ನಿರ್ದೇಶನಗಳನ್ನು ಅಥವಾ ಜೀವಿತ ಉಯಿಲಿಗೆ ಅವಕಾಶ ಕಲ್ಪಿಸಿದೆ. ಇದರ ಅನ್ವಯ ರೋಗಿಗಳು ತೀವ್ರ ಅನಾರೋಗ್ಯಪೀಡಿತರಾದಾಗ ಚಿಕಿತ್ಸೆಯನ್ನು ವಾಪಾಸು ಪಡೆಯಲು ಅಥವಾ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಚಿಕಿತ್ಸೆಯನ್ನು ವಾಪಾಸು ಪಡೆಯುವಂತೆ ಮುಂಗಡವಾಗಿ ತಿಳಿಸಲು ಅವಕಾಶವಿದೆ.

ಜೀವಿತ ಉಯಿಲು ಯಾರು, ಏನು ಹಾಗೂ ಹೇಗೆ ಮಾಡಬಹುದು?

ಉತ್ತಮ ಹಾಗೂ ಆರೋಗ್ಯಕರ ಮನಸ್ಸು ಹೊಂದಿರುವ ವ್ಯಕ್ತಿ ಇಂಥ ಉಯಿಲು ಮಾಡಬಹುದಾಗಿದೆ. ಇದನ್ನು ಸ್ವಯಂಪ್ರೇರಿತವಾಗಿ ಜಾರಿಗೊಳಿಸಬೇಕು ಹಾಗೂ ಒಪ್ಪಿಗೆಯ ಬಗ್ಗೆ ಮಾಹಿತಿ ನೀಡಬೇಕು. ಇದನ್ನು ಸ್ಪಷ್ಟ ಹಾಗೂ ಯಾವುದೇ ಗೊಂದಲವಿಲ್ಲದ ರೀತಿಯಲ್ಲಿ ಅಭಿವ್ಯಕ್ತಗೊಳಿಸಬೇಕಾಗುತ್ತದೆ.

ಉಯಿಲಿನ ಅಂಶಗಳು

  • ಯಾವ ಪರಿಸ್ಥಿತಿಯಲ್ಲಿ ಚಿಕಿತ್ಸೆಯನ್ನು ನಿಲ್ಲಿಸಬಹುದು ಅಥವಾ ವಾಪಾಸು ಪಡೆಯಬಹುದು, ಯಾವುದೇ ಸಮಯದಲ್ಲಿ ಉಯಿಲು ರದ್ದು ಮಾಡಬಹುದು ಹಾಗೂ ಯಾರು ದಯಾಮರಣ ಪ್ರಕ್ರಿಯೆಯನ್ನು ಆರಂಭಿಸಬಹುದು ಎಂಬ ಬಗ್ಗೆ ಪೋಷಕರ ಹೆಸರನ್ನು ಅಥವಾ ನಿಕಟ ಸಂಬಂಧಿಗಳ ಹೆಸರನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
  • ಉಯಿಲನ್ನು ಇಬ್ಬರು ಸಾಕ್ಷಿಗಳು ದೃಢೀಕರಿಸಿರಬೇಖು ಮತ್ತು ಪ್ರಥಮದರ್ಜೆ ಮ್ಯಾಜಿಸ್ಟ್ರೇಟರು ಇದಕ್ಕೆ ಮೇಲು ಸಹಿ ಮಾಡಿರಬೇಕು. ಮ್ಯಾಜಿಸ್ಟ್ರೇಟರು ಒಂದು ಹಾರ್ಡ್ಕಾಪಿ ಮತ್ತು ಸಾಫ್ಟ್ಕಾಪಿ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಮತ್ತು ಇದನ್ನು ಜಿಲ್ಲಾ ನ್ಯಾಯಾಲಯ ನೋಂದಣಿಗೆ ಕಳುಹಿಸಬೇಕು. ಒಂದು ಪ್ರತಿಯನ್ನು ಇದನ್ನು ಸಂರಕ್ಷಿಸಿ ಇಡುವ ಸ್ಥಳೀಯ ಸರ್ಕಾರ, ಅಧಿಕಾರಿಗೆ ಕಳುಹಿಸಬೇಕು.

Comment