IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಐಆರ್‍ಇಡಿಎ & ಯೂರೋಪಿಯನ್ ಹೂಡಿಕೆ ಬ್ಯಾಂಕ್ ಸಾಲ ಒಪ್ಪಂದ

ಐಆರ್‍ಇಡಿಎ & ಯೂರೋಪಿಯನ್ ಹೂಡಿಕೆ ಬ್ಯಾಂಕ್ ಸಾಲ ಒಪ್ಪಂದ

ಭಾರತದ ನವೀಕರಿಸಬಹುದಾದ ವಿದ್ಯುತ್ ಅಭಿವೃದ್ಧಿ ಏಜೆನ್ಸಿ (ಐಆರ್ಇಡಿಎ) ಮತ್ತು ಯೂರೋಪಿಯನ್ ಹೂಡಿಕೆ ಬ್ಯಾಂಕ್ (ಇಐಎ) 150 ದಶಲಕ್ಷ ಯೂರೊ ಸಾಲ ಒಪ್ಪಂದಕ್ಕೆ ಸಹಿ ಮಾಡಿವೆ. ಭಾರತದಲ್ಲಿ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ಸಾಲದ ಮೊತ್ತ ಬಳಕೆಯಾಗಲಿದೆ. ಒಪ್ಪಂದವು 15 ವರ್ಷ ಅವಧಿಯದ್ದಾಗಿದ್ದು, ಮೂರು ವರ್ಷದ ವಿನಾಯ್ತಿ ಅವಧಿಯೂ ಇದರಲ್ಲಿ ಸೇರುತ್ತದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ವಿದ್ಯತ್ ಕ್ಷಮತೆ ಹೆಚ್ಚಿಸುವ ಯೋಜನೆಗಳಿಗೆ ಇದನ್ನು ಹೂಡಿಕೆ ಮಾಡಲಾಗುತ್ತದೆ. ಯೋಜನೆಯಿಂದ ಸುಮಾರು 11 ಲಕ್ಷ ಕುಟುಂಬಗಳಿಗೆ ನೆರವಾಗಲಿದ್ದು, ಅನುದಾನದಲ್ಲಿ ಸ್ವಚ್ಛ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿದೆ.

ಯೂರೋಪಿಯನ್ ಹೂಡಿಕೆ ಬ್ಯಾಂಕ್ (ಇಐಬಿ)

ಯೂರೋಪಿಯನ್ ಹೂಡಿಕೆ ಬ್ಯಾಂಕ್ (ಇಐಬಿ) ಎನ್ನುವುದು ಧೀರ್ಘಾವಧಿ ಸಾಲ ನೀಡುವ ಸಂಸ್ಥೆಯಾಗಿದ್ದು, ಯೂರೋಪಿಯನ್ ಒಕ್ಕೂಟದ ಸದಸ್ಯ ದೇಶಗಳ ಮಾಲೀಕತ್ವ ಹೊಂದಿದೆ. ಇದು ಬಹುಪಕ್ಷೀಯ ಸಾಲ ನೀಡಿಕೆ ಯೋಜನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಯೂರೋಪಿಯನ್ ಯೂನಿಯನ್ ಸಂಸ್ಥೆಗಳ ಜತೆ ಯೂರೋಪಿಯನ್ ಯೂನಿಯನ್ ನೀತಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲೂ ಶ್ರಮಿಸುತ್ತದೆ. ಇದರ ಶೇಕಡ 90ರಷ್ಟು ಚಟುವಟಿಕೆಗಳು ಯೂರೋಪ್ ಖಂಡದಲ್ಲಿದ್ದು, ಇದು ಜಾಗತಿಕ ಮಟ್ಟದಲ್ಲೂ ದೊಡ್ಡ ಹೂಡಿಕೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಯೂರೋಪಿಯನ್ ಹೂಡಿಕೆ ಬ್ಯಾಂಕ್ (ಇಐಬಿ) ಚಟುವಟಿಕೆಗಳು ಮುಖ್ಯವಾಗಿ ನಾಲ್ಕು ಆದ್ಯತಾ ವಲಯಗಳತ್ತ ದೃಷ್ಟಿ ಕೇಂದ್ರೀಕರಿಸಿದ್ದು, ಅನುಶೋಧನೆ ಮತ್ತು ಕೌಶಲ, ಮೂಲಸೌಕರ್ಯಕ್ಕೆ ಹಣಕಾಸು ಲಭ್ಯತೆ, ಸಣ್ಣ ವ್ಯಾಪಾರ ಮತ್ತು ಹವಾಮಾನ & ಪರಿಸರ ಯೋಜನೆಗಳು ಪ್ರಮುಖ ಕಾರ್ಯಕ್ಷೇತ್ರಗಳಾಗಿವೆ.

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ (ಐಆರ್ಇಡಿಎ)

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ (ಐಆರ್ಇಡಿಎ) ಕೇಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ಹಣಕಾಸು ವಿಭಾಗವಾಗಿದ್ದು, ಇದು ನವೀಕರಿಸಬಹುದಾದ ಮೂಲದ ವಿದ್ಯುತ್ ಹಾಗೂ ವಿದ್ಯುತ್ ಕ್ಷಮತೆ ಹೆಚ್ಚಿಸುವ ಯೋಜನೆಗಳಿಗೆ ನೆರವು ನೀಡುತ್ತದೆ. ಇದು ದೇಶಾದ್ಯಂತ ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್ತನ್ನು ಮೂರು ದಶಕಗಳಿಂದ ಉತ್ತೇಜಿಸುತ್ತಾ ಬಂದಿದೆ. ಹಣಕಾಸು ಅಗತ್ಯತೆಯನ್ನು ಪೂರೈಸುವ ಸಲುವಾಗಿ, ಹಲವಾರು ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಏಜೆನ್ಸಿಗಳಿಂದ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತದೆ. ಜತೆಗೆ ಮಸಾಲಾ ಬಾಂಡ್ ಹಾಗೂ ದೇಶೀಯ ಮೂಲಗಳಿಂದ ಅಂದರೆ ತೆರಿಗೆಗೆ ಅರ್ಹವಾದ ಮತ್ತು ತೆರಿಗೆ ಮುಕ್ತ ಬಾಂಡ್ಗಳ ಮೂಲಕ ಸಂಪನ್ಮೂಲ ಕ್ರೋಢೀಕರಿಸುತ್ತದೆ. ಇದುವರೆಗೆ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ (ಐಆರ್ಇಡಿಎ) 34534 ಕೊಟಿ ರೂಪಾಯಿ ಅಂದಾಜು ವೆಚ್ಚದ ನೆರವನ್ನು ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್ ಹಾಗೂ ವಿದ್ಯುತ್ ಕ್ಷಮತೆ ಹೆಚ್ಚಿಸುವ ಯೋಜನೆಗಳಿಗೆ ನೀಡಿದೆ.

Comment