IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ದೇಶದ ಮೆಟ್ರೊ ಕಂಪನಿಗಳ ಸಂಘ ಐ-ಮೆಟ್ರೊ ಅಸ್ತಿತ್ವಕ್ಕೆ

ದೇಶದ ಮೆಟ್ರೊ ಕಂಪನಿಗಳ ಸಂಘ ಐ-ಮೆಟ್ರೊ ಅಸ್ತಿತ್ವಕ್ಕೆ

ಕೇಂದ್ರದ ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ಸಚಿವಾಲಯ -ಮೆಟ್ರೊ ಎಂಬ ದೇಶದ ಮೆಟ್ರೊ ಕಂಪನಿಗಳ ಸಂಘಟನೆಗೆ ಚಾಲನೆ ನೀಡಿದೆ. ಇದು ಭಾರತದ ಎಲ್ಲ ಮೆಟ್ರೊ ರೈಲು ಕಂಪನಿಗಳನ್ನು ಒಳಗೊಂಡಿದ್ದು, ಪರಸ್ಪರ ಯೋಚನೆಗಳನ್ನು ಹಂಚಿಕೊಳ್ಳಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಇದು ಬಳಕೆಯಾಗಲಿದೆ. ಮೂಲಕ ತಮ್ಮ ಕ್ಷಮತೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಹಾಗೂ ಪೋಷಿಸುವುದು ಇದರ ಗುರಿ. ನವದೆಹಲಿಯ ಮೆಟ್ರೊ ಭವನದಲ್ಲಿ ನಡೆದ "ಇಂಡಿಯನ್ ಮೆಟ್ರೋಸ್: ಕೊಲ್ಯಾಬರೇಟಿಂಗ್ ಫಾರ್ ಎಕ್ಸಲೆನ್ಸ್" ಸಮಾವೇಶದಲ್ಲಿ ಕೇಂದ್ರದ ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ವಿನೂತನ ಸಂಘಟನೆಗೆ ಚಾಲನೆ ನೀಡಿದರು.

ಪ್ರಮುಖ ಅಂಶಗಳು

-ಮೆಟ್ರೊ ಪ್ಲಾಟ್ಫಾರಂ, ದೇಶದ ಮೆಟ್ರೊ ರೈಲು ಕಂಪನಿಗಳ ಯೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು, ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಜ್ಞಾನವನ್ನು ಕ್ರೋಢೀಕರಿಸಲು, ಉತ್ತಮ ರೂಢಿಗಳು ಎಲ್ಲರಿಗೂ ತಿಳಿಯುವಂತೆ ಮಾಡಲು ಮತ್ತು ಅನುಶೋಧನೆಗಳ ಪ್ರಯೋಜನ ಎಲ್ಲ ಮೆಟ್ರೋಗಳಿಗೂ ಆಗುವಂತೆ ಪೂರಕ ವಾತಾವರಣವನ್ನು ಸೃಷ್ಟಿಸುವುದು ಇದರ ಪ್ರಮುಖ ಗುರಿಯಾಗಿದೆ. ಮೂಲಕ ತಮ್ಮ ಕ್ಷಮತೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಹಾಗೂ ಪೋಷಿಸುವುದು ಇದರ ಗುರಿ.

"ಇಂಡಿಯನ್ ಮೆಟ್ರೋಸ್: ಕೊಲ್ಯಾಬರೇಟಿಂಗ್ ಫಾರ್ ಎಕ್ಸಲೆನ್ಸ್" ಸಮಾವೇಶದಲ್ಲಿ ಪ್ರಮುಖವಾಗಿ, ವಿಶ್ವದ ವಿವಿಧೆಡೆಗಳಿಂದ ಆಗಮಿಸಿದ ಎಲ್ಲ ಮೆಟ್ರೊ ವ್ಯವಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮೆಟ್ರೊ ಸಮುದಾಯಗಳ ವ್ಯವಸ್ಥಾಪನಾ ಸಭೆ ಕೂಡಾ ನಡೆಯಿತು. ಇಂಗ್ಲೆಂಡಿನ ಲಂಡನ್ ಇಂಪೀರಿಯಲ್ ಕಾಲೇಜು ಹೊರತಂದಿರುವ " ಅಪರೇಟರ್ಸ್ ಸ್ಟೋರಿ"- ಎಂಬ ವರದಿಯನ್ನು ವಿಶ್ವಬ್ಯಾಂಕ್ ಮತ್ತು ರೈಲ್ವೆ ಮತ್ತು ಸಾರಿಗೆ ಕಾರ್ಯತಂತ್ರ ಕೇಂದ್ರ (ಆರ್ಟಿಎಸ್ಸಿ) ಬಿಡುಗಡೆ ಮಾಡಲಾಯಿತು. ವರದಿಯಲ್ಲಿ ಪ್ರಮುಖವಾಗಿ ಮೆಟ್ರೋಗಳು ಯಶಸ್ವಿಯಾಗಲು ಏನು ಮಾಡಬೇಕು ಎಂಬ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ಆಧರಿತ ಅಂಶಗಳನ್ನು ಪ್ರತಿಪಾದಿಸಲಾಗಿದೆ.

Comment