IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಲಕ್ನೋದಲ್ಲಿ ಸ್ವಚ್ಛಶಕ್ತಿ- 2018 ಅಭಿಯಾನ

ಲಕ್ನೋದಲ್ಲಿ ಸ್ವಚ್ಛಶಕ್ತಿ- 2018 ಅಭಿಯಾನ

ಸ್ವಚ್ಛಭಾರತ ಮಿಷನ್ ಮಹತ್ವಾಕಾಂಕ್ಷಿ ಸ್ವಚ್ಛಶಕ್ತಿ- 2018 ಅಭಿಯಾನವನ್ನು ಲಕ್ನೋದಲ್ಲಿ ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲಿ ಸ್ವಚ್ಛಶಕ್ತಿ- 2018 ಅಭಿಯಾನ ನಡೆಸಲಾಯಿತು. ಬಾರಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಸ್ವಚ್ಛಶಕ್ತಿ- 2018 ಅಭಿಯಾನಕ್ಕೆ ಸಹಯೋಗ ನೀಡಿತ್ತು. ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವುದರಿಂದ ಮತ್ತು ದೊಡ್ಡ ಸಂಖ್ಯೆಯ ಗ್ರಾಮೀಣ ಜನ ಇಲ್ಲಿರುವುದರಿಂದ ರಾಜ್ಯಕ್ಕೆ ಸಹಯೋಗ ನೀಡಲಾಗಿತ್ತು.

ಪ್ರಮುಖ ಅಂಶಗಳು

ಸ್ವಚ್ಛಶಕ್ತಿ- 2018 ಅಭಿಯಾನದಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದ 800 ಮಂದಿ ಮಹಿಳಾ ಸರಪಂಚರು, ಮಹಿಳಾ ಸ್ವಚ್ಛಗ್ರಾಹಿಗಳು ಮತ್ತು ಮಹಿಳಾ ಚಾಂಪಿಯನ್ಗಳು ಪಾಲ್ಗೊಂಡಿದ್ದರು. ಸ್ವಚ್ಛಭಾರತ ಅಭಿಯಾನಕ್ಕೆ ಗಣನೀಯ ಸೇವೆ ಸಲ್ಲಿಸಿದ ಆಧಾರದಲ್ಲಿ ದೇಶದ ವಿವಿಧೆಡೆಗಳಿಂದ ಇಂಥ ಸ್ವಚ್ಛ ಮಹಿಳಾ ಚಾಂಪಿಯನ್ಗಳನ್ನು ಆಯ್ಕೆ ಮಾಡಲಾಗಿತ್ತು. ಸ್ವಚ್ಛಶಕ್ತಿ- 2018 ಅಭಿಯಾನದಲ್ಲಿ ಪ್ರಮುಖವಾಗಿ ವಿಶೇಷ ವಸ್ತುಪ್ರದರ್ಶನ, ಸ್ವಚ್ಛಶಕ್ತಿಯ ಮಹತ್ವವನ್ನು ಸಾರುವ ಚಲನಚಿತ್ರಕ್ಕೆ ಚಾಲನೆ ಮತ್ತು 30 ಸ್ವಚ್ಛತಾ ರಥಗಳಿಗೆ ಹಸಿರು ನಿಶಾನೆ ತೋರುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತಾ ರಥಗಳು ರಾಜ್ಯಾದ್ಯಂತ ಸಂಚರಿಸಿ, ತಳಮಟ್ಟದಲ್ಲಿ ನೈರ್ಮಲ್ಯದ ಸಂದೇಶವನ್ನು ಪ್ರಸಾರ ಮಾಡುತ್ತದೆ.

ಹಿನ್ನೆಲೆ

ಸ್ವಚ್ಛಶಕ್ತಿ ಅಭಿಯಾನವು ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2017ರಲ್ಲಿ ಇದಕ್ಕೆ ಚಾಲನೆ ನೀಡಲಾಗಿತ್ತು. ಇದು ದೇಶದ ಮೂಲೆ ಮೂಲೆಗಳ ಮಹಿಳಾ ಸರಪಂಚರು, ಮಹಿಳಾ ಸ್ವಚ್ಛಗ್ರಾಹಿಗಳು ಮತ್ತು ಮಹಿಳಾ ಚಾಂಪಿಯನ್ಗಳನ್ನು ಗುರುತಿಸಿ ಗೌರವಿಸುವ ಯೋಜನೆಯಾಗಿದೆ. ಸ್ವಚ್ಛಭಾರತ ಅಭಿಯಾನಕ್ಕೆ ಗಣನೀಯ ಸೇವೆ ಸಲ್ಲಿಸಿದ ಆಧಾರದಲ್ಲಿ ದೇಶದ ವಿವಿಧೆಡೆಗಳಿಂದ ಇಂಥ ಸ್ವಚ್ಛ ಮಹಿಳಾ ಚಾಂಪಿಯನ್ಗಳನ್ನು ಆಯ್ಕೆ ಮಾಡಲಾಗುತ್ತದೆ. 2017 ಸ್ವಚ್ಛಶಕ್ತಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು. ಕಳೆದ ವರ್ಷದ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಗುಜರಾತ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧೆಡೆಗಳಿಂದ ಬಂದಿದ್ದ 6 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಗೌರವಿಸಿದ್ದರು.

ಸ್ವಚ್ಛ ಭಾರತ ಮಿಷನ್

ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು 2014 ಗಾಂಧಿಜಯಂತಿಯ ದಿನ ಅಂದರೆ ಅಕ್ಟೋಬರ್ 2ರಂದು ಆರಂಭಿಸಲಾಗಿದೆ. ದೇಶದಲ್ಲಿ ಸಾರ್ವತ್ರಿಕ ನೈರ್ಮಲ್ಯವನ್ನು ಸಾಧಿಸುವುದು ಇದರ ಮುಖ್ಯ ಉದ್ದೇಶ. ಸಾರ್ವತ್ರಿಕವಾಗಿ ಎಲ್ಲರಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಬಯಲು ಶೌಚಾಲಯದ ಅನಿಷ್ಟ ಪದ್ಧತಿಯನ್ನು ಕೊನೆಗೊಳಿಸುವುದು ಇದರ ಉದ್ದೇಶವಾಗಿದೆ. ಬಯಲುಶೌಚ ಮುಕ್ತ ಭಾರತ ಅಥವಾ ಸ್ವಚ್ಛ ಭಾರತವನ್ನು 2019 ಒಳಗಾಗಿ ಸೃಷ್ಟಿಸುವ ಗುರಿಯನ್ನು ಇದು ಹೊಂದಿದೆ. ಮೂಲಕ ಶೌಚಾಲಯ ಮತ್ತು ನೈರ್ಮಲ್ಯದ ಅಗತ್ಯತೆಯನ್ನು ಪ್ರತಿಪಾದಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಿಗೆ 150ನೇ ಜಯಂತಿ ಸಂದರ್ಭದಲ್ಲಿ ಸೂಕ್ತ ಗೌರವ ನೀಡುವುದು ಇದರ ಉದ್ದೇಶವಾಗಿದೆ.

ಸ್ವಚ್ಛ ಭಾರತ ಮಿಷನ್ ಮುಖ್ಯವಾಗಿ ಎರಡು ಉಪ ಮಿಷನ್ಗಳನ್ನು ಒಳಗೊಂಡಿದೆ. ಅವುಗಳೆಂದರೆ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಹಾಗೂ ಸ್ವಚ್ಛ ಭಾರತ ಮಿಷನ್ (ನಗರ). ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಹಾಗೂ ಸ್ವಚ್ಛ ಭಾರತ ಮಿಷನ್ (ನಗರ) ಯೋಜನೆಯನ್ನು ನಗರ ಪ್ರದೇಶದಲ್ಲಿ ಜಾರಿಗೆ ತರಲಾಗುತ್ತದೆ. ಇದು ಸಮುದಾಯಗಳು ಸುಸ್ಥಿರವಾದ ನೈರ್ಮಲ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಉತ್ತೇಜಿಸುವ ಸಲುವಾಗಿ ಜಾಗೃತಿ ಮೂಡಿಸುತ್ತದೆ. ಜತೆಗೆ ದೇಶದಲ್ಲ ನೈರ್ಮಲ್ಯಕ್ಕೆ ಸೂಕ್ತವಾದ ತಂತ್ರಜ್ಞಾನಗಳನ್ನು ಬಳಕೆ ಮಾಡಲು ಉತ್ತೇಜಿಸುವುದು ಕೂಡಾ ಇದರ ಉದ್ದೇಶವಾಗಿದೆ.

Comment