IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸರ್ಕಾರದಿಂದ ಉದ್ಯಮಸಖಿ ಪೋರ್ಟೆಲ್‍ಗೆ ಚಾಲನೆ

ಸರ್ಕಾರದಿಂದ ಉದ್ಯಮಸಖಿ ಪೋರ್ಟೆಲ್‍ಗೆ ಚಾಲನೆ

ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವಾಲಯ ಉದ್ಯಮ ಸಖಿ ಪೋರ್ಟೆಲ್ (www.udyamsakhi.org <http://www.udyamsakhi.org>)ಗೆ ಚಾಲನೆ ನೀಡಿದೆ. ಮಹಿಳಾ ಉದ್ಯಮಿಗಳು ಹಾಗೂ ಉದ್ಯಮಶೀಲರಿಗಾಗಿ ವಿಶಿಷ್ಟ ಪೋರ್ಟೆಲ್ ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಆರಂಭಿಸಲಾಯಿತು. ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆ) ಗಿರಿರಾಜ್ ಸಿಂಗ್ ಅವರು ನವದೆಹಲಿಯ ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

ಉದ್ಯಮ ಸಖಿ ಪೋರ್ಟೆಲ್

ಪೋರ್ಟೆಲ್, ಉದ್ಯಮಶೀಲ ಮಹಿಳೆಯರ ಉದ್ಯಮವನ್ನು ಪೋಷಿಸುವ ಜಾಲವಾಗಿದ್ದು, ಅಗ್ಗದ ವೆಚ್ಚದ ಉತ್ಪನ್ನಗಳಿಗೆ ವ್ಯಾಪಾರ ಮಾದರಿಯನ್ನು ಸೃಷ್ಟಿಸುವುದು ಇದರ ಮುಖ್ಯ ಕಾರ್ಯವಾಗಿದೆ. ಮಹಿಳೆಯರನ್ನು ಸಬಲೀಕರಿಸುವ ನಿಟ್ಟಿನಲ್ಲಿ ಮತ್ತು ಮಹಿಳೆಯರನ್ನು ಸುಸ್ಥಿರ, ಸ್ವಾವಲಂಬಿ ಮತ್ತು ಪರಿಪೂರ್ಣರಾಗಿ ಬೆಳೆಸುವ ನಿಟ್ಟಿನಲ್ಲಿ ಇದು ಮಹತ್ವದ್ದಾಗಿದೆ. ಇದು ಮಹಿಳಾ ಉದ್ಯಮಶೀಲರಿಗೆ ತನ್ನ ಉದ್ಯಮಶೀಲತೆ ಪ್ಲಾಟ್ಫಾರಂ ಮೂಲಕ ವೈವಿಧ್ಯಮಯ ಶ್ರೇಣಿಯ ಸೌಲಭ್ಯಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಮುಖ್ಯವಾಗಿ ಕಲಿಕಾ ಸಾಧನಗಳು, ನಿಧಿ ಕ್ರೋಢೀಕರಿಸಲು ವಿನೂತನ ತರಬೇತಿ ಕಾರ್ಯಕ್ರಮಗಳು, ಪಾಲನಾ ಸೌಲಭ್ಯ (ಇನ್ಕ್ಯುಬೇಶನ್ ಸೆಂಟರ್), ಮಾರ್ಗದರ್ಶನ ನೀಡುವುದು, ಮುಖತಃ ಹೂಡಿಕೆದಾರರನ್ನು ಮುಖಾಮುಖಿ ಭೇಟಿಯಾಗುವುದು, ಮಾರುಕಟ್ಟೆ ಸಮೀಕ್ಷೆ ಸೌಲಭ್ಯವನ್ನು ಒದಗಿಸುವುದು ಮತ್ತು ತಾಂತ್ರಿಕ ನೆರವು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ದೇಶದ ಉದ್ದಗಲಕ್ಕೂ ಸುಮಾರು 80 ಲಕ್ಷ ಉದ್ಯಮಶೀಲ ಮಹಿಳೆಯರ ಅಗತ್ಯತೆಗಳನ್ನು ಪೂರೈಸಲಿದೆ. ಮೂಲಕ ಇಷ್ಟು ಸಂಖ್ಯೆಯ ಮಹಿಳೆಯರು ತಮ್ಮದೇ ವಹಿವಾಟು ನಡೆಸಲು ಉತ್ತೇಜಿಸುವುದು ಮತ್ತು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರು ಕೂಡಾ ಗಣನೀಯ ಕೊಡುಗೆ ನೀಡುವಂತೆ ಮಾಡುವುದು ಇದರ ಉದ್ದೇಶ.

Comment