IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ನೀತಿ ಆಯೋಗದಿಂದ ಮಹಿಳಾ ಉದ್ಯಮಶೀಲತೆ ಪ್ಲಾಟ್‍ಫಾರಂ

ನೀತಿ ಆಯೋಗದಿಂದ ಮಹಿಳಾ ಉದ್ಯಮಶೀಲತೆ ಪ್ಲಾಟ್‍ಫಾರಂ

ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ (ಎನ್ಐಟಿಐ) ಆಯೋಗವು ಅಂತರರಾಷ್ಟ್ರೀಯ ಮಹಿಳಾ ದಿನದಂದು, (2018 ಮಾರ್ಚ್ 08) ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂ (ಡಬ್ಲ್ಯುಇಪಿ)ಗೆ ಚಾಲನೆ ನೀಡಿದೆ. ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂನ ಧ್ಯೇಯಗೀತೆಯಾದ ನಾರಿ ಶಕ್ತಿಯನ್ನು ಖ್ಯಾತ ಗಾಯಕ ಕೈಲಾಶ್ಖೇರ್ ಸಂಯೋಜಿಸಿ ಹಾಡಿದ್ದು, ಇದನ್ನು ಕೂಡಾ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂ (ಡಬ್ಲ್ಯುಇಪಿ)

ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂ (ಡಬ್ಲ್ಯುಇಪಿ) ಮುಖ್ಯ ಉದ್ದೇಶಗಳು ಕೆಳಗಿನಂತಿವೆ:

  • ಮಹಿಳೆಯರ ಉದ್ಯಮಶೀಲತಾ ಆಕಾಂಕ್ಷೆಗಳನ್ನು ವಾಸ್ತವಗೊಳಿಸುವ ನಿಟ್ಟಿನಲ್ಲಿ ನೆರವಾಗುವ ಸಲುವಾಗಿ ದೇಶಾದ್ಯಂತ ಮಹಿಳೆಯರಿಗೆ ಆಕರ್ಷಕ ವಾತಾವರಣವನ್ನು ನಿರ್ಮಿಸಿಕೊಡುವುದು ಹಾಗೂ ವಿನೂತನ ಅನುಶೋಧನೆಗಳನ್ನು ಉತ್ತೇಜಿಸುವುದು ಮತ್ತು ಸುಸ್ಥಿರ, ಧೀರ್ಘಾವಧಿ ಕಾರ್ಯತಂತ್ರಗಳನ್ನು ಅವರ ವ್ಯವಹಾರಕ್ಕಾಗಿ ರೂಪಿಸುವುದು ಇದರ ಪ್ರಮುಖ ಉದ್ದೇಶ.
  • ಕೈಗಾರಿಕಾ ಸಹಭಾಗಿತ್ವ, ಪಾಲ್ಗೊಳ್ಳುವಿಕೆ, ಮಾರ್ಗದರ್ಶಕರು ಮತ್ತು ಮಹಿಳಾ ಉದ್ಯಮಿಗಳ ನಡುವೆ ನಿಕಟ ಸಂಪರ್ಕ ಏರ್ಪಡಿಸುವ ಮೂಲಕ, ಆಕರ್ಷಕವಾದ ಉದ್ಯಮಶೀಲತಾ ಪರಿಸರವನ್ನು ದೇಶದಲ್ಲಿ ಮಹಿಳೆಯರಿಗಾಗಿ ನಿರ್ಮಿಸಿಕೊಡುವುದು.
  • ಉದ್ಯಮಶೀಲತಾ ಆಕಾಂಕ್ಷಿ ಮಹಿಳೆಯರು ಮತ್ತು ಉದ್ಯಮರಂಗದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು, ಎದುರಿಸುವ ಸಮಸ್ಯೆಗಳನ್ನು ಮತ್ತು ಇತಿಮಿತಿಗಳನ್ನು ಪರಿಹರಿಸುವುದು. ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಮಾಹಿತಿಯನ್ನು ಕ್ರೋಢೀಕರಿಸಿ ನೀಡುವ ಉದ್ದೇಶವನ್ನೂ ಹೊಂದಿದೆ. ಜ್ಞಾನ ಹಿನ್ನೆಲೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಸಂಪನ್ಮೂಲ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮಾಹಿತಿ ಮತ್ತು ಸಂವಾದಾತ್ಮಕ ವೆಬ್ಸೈಟ್ ಅಭಿವೃದ್ಧಿಪಡಿಸುವುದು.

ಪ್ರಮುಖ ಅಂಶಗಳು

ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂ (ಡಬ್ಲ್ಯುಇಪಿ) ದೇಶದಲ್ಲಿ ಉದ್ಯಮಶೀಲ ಮಹಿಳೆಯರ ಸಂಖ್ಯೆಯನ್ನು ಗಣನೀಯವಾಗಿ ಹಾಗೂ ಸುಸ್ಥಿರವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮಹಿಳೆಯರಿಗೆ ಅವಕಾಶದ ಬಾಗಿಲು ತೆರೆದುಕೊಡುವ ಮೂಲಕ ಕ್ರಿಯಾಶೀಲ ನವ ಭಾರತವನ್ನು ರಚಿಸುವುದು ಮತ್ತು ಸಬಲೀಕರಣ ಮಾಡುವುದು ಇದರ ಉದ್ದೇಶ. ಮೂಲಕ ಉದ್ಯಮಶೀಲ ಮಹಿಳೆಯರಿಗೆ ಪ್ರಗತಿಯ ಅವಕಾಶವನ್ನು ಕಲ್ಪಸಿಕೊಡುವ ನಿಟ್ಟಿನಲ್ಲೂ ಇದು ನೆರವಾಗಲಿದೆ. ಉದ್ಯಮಶೀಲ ಮಹಿಳೆಯರ ಮೂರು ಆಕಾಂಕ್ಷೆಗಳು ಮೂರು ಪ್ರಮುಖ ಆಧಾರಸ್ತಂಭಗಳ ಮೇಲೆ ನಿಂತಿದ್ದು, ಇದರ ಆಧಾರದಲ್ಲಿ ಉದ್ಯಮಶೀಲ ಮಹಿಳೆಯರಿಗೆ ನೆರವಾಗಲು ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂ (ಡಬ್ಲ್ಯುಇಪಿ) ಅಭಿವೃದ್ಧಿಪಡಿಸಲಾಗಿದೆ.

  • ಇಚ್ಛಾಶಕ್ತಿ: ಉದ್ಯಮಶೀಲ ಮಹಿಳೆಯರು ತಮ್ಮ ಉದ್ದಿಮೆಗಳನ್ನು ಆರಂಭಿಸುವಂತೆ ಉತ್ತೇಜನ ಹಾಗೂ ಸ್ಫೂರ್ತಿ ನೀಡುವುದು.
  • ಜ್ಞಾನಶಕ್ತಿ: ಉದ್ಯಮಶೀಲ ಮಹಿಳೆಯರು ತಮ್ಮ ಉದ್ದಿಮೆಗಳನ್ನು ಬೆಳೆಸಲು ಅನುಕೂಲವಾಗುವಂತೆ ಜ್ಞಾನ ಮತ್ತು ಸೂಕ್ತ ಪರಿಸರದ ಬೆಂಬಲವನ್ನು ಒದಗಿಸುವುದು.
  • ಕರ್ಮಶಕ್ತಿ: ಉದ್ಯಮವನ್ನು ರೂಪಿಸಲು ಮತ್ತು ವಹಿವಾಟನ್ನು ಬೆಳೆಸಲು ಅಗತ್ಯವಾದ ನೆರವನ್ನು ಮಹಿಳಾ ಉದ್ಯಮಿಗಳಿಗೆ ಒದಗಿಸುವುದು.

ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂ (ಡಬ್ಲ್ಯುಇಪಿ) ವಿಸ್ತøತವದ ಚೌಕಟ್ಟಿನ ಒಳಗೆ ಕಾರ್ಯನಿರ್ವಹಿಸಲಿದ್ದು, ಕೈಗಾರಿಕಾ ಸಹಭಾಗಿತ್ವ ಮತ್ತು ಪಾಲುದಾರಿಕೆಯ ಆಯಾಮದಲ್ಲಿ ಕಾರ್ಯಾಚರಿಸುತ್ತದೆ. ಆಥಿಕತೆಯ ಎಲ್ಲ ವಲಯಗಳನ್ನು ಇದು ಒಳಗೊಳ್ಳಲಿದೆ. ಇದು ಮಹಿಳಾ ಉದ್ಯಮಿಗಳಿಗೆ ವಿಶೇಷ ಸೇವೆಗಳನ್ನು ಒದಗಿಸಲಿದ್ದು, ಅವುಗಳೆಂದರೆ, ಕ್ರಿಸಿಲ್ನಿಂದ ಮಹಿಳಾ ಸಾರಥ್ಯದ ಸ್ಟಾರ್ಟ್ ಅಪ್ ಉದ್ದಿಮೆಗಳ ಸಾಲ ಮೌಲ್ಯಮಾಪನ ಮತ್ತು ಜಿಲ್ಲಾ ತರಬೇತಿ ಕೇಂದ್ರಗಳ ಮೂಲಕ 10 ಕೋಟಿ ರೂಪಾಯಿ ನಿಧಿಯಿಂದ ಸಂಭಾವ್ಯ ಷೇರು ಬಂಡವಾಳ ಹೂಡಿಕೆಯಂಥ ಸೇವೆಗಳು ಪ್ರಮುಖವಾದವು.

ಮಹಿಳಾ ಉದ್ಯಮಶೀಲತೆ ಪ್ಲಾಟ್ಫಾರಂ ಪಾಲುದಾರರು

ಶಾಪ್ಕ್ಲೂಸ್.ಕಾಮ್ ಆಸಕ್ತ ಉದ್ಯಮಶೀಲ ಮಹಿಳೆಯರಿಗೆ ಇಂಟರ್ನ್ಶಿಪ್ ಮತ್ತು ಅವರಿಗೆ ಸೀಮಿತವಾದ ಸೂಕ್ತ ಮಾರ್ಗದರ್ಶನ ಸೇವೆಯನ್ನು ಒದಗಿಸುತ್ತದೆ. ಇದರ ಜತೆಗೆ ಮನ್ ದೇಶಿ ಫೌಂಡೇಷನ್, ಡಿಜಿಟಲ್ ಮತ್ತು ಹಣಕಾಸು ಸಾಕ್ಷರತೆಯನ್ನು ಮಹಿಳಾ ಉದ್ಯಮಶೀಲರಿಗೆ ಒದಗಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇತರ ಹಲವು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಉದ್ಯಮ ಸಂಘಟನೆಗಳಾದ ನ್ಯಾಸ್ಕಾಮ್, ಸಿಐಐ, ಎಫ್ಸಿಸಿಐ, ಎಸ್ಐಡಿಬಿಐ ಮತ್ತು ಫೇಸ್ಬುಕ್ಗಳು ವ್ಯಾಪಾರ ವೇಗವರ್ಧನೆ, ಮಾರ್ಗದರ್ಶನ ಮತ್ತು ಮಹಿಳಾ ಉದ್ಯಮಶೀಲರಿಗೆ ಸ್ಟಾರ್ಟ್ ಅಪ್ ಬೆಂಬಲವನ್ನು ಒದಗಿಸಲಿವೆ.

Comment