IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಹಣಕಾಸು ತಂತ್ರಜ್ಞಾನ ವಲಯ ನಿಯಂತ್ರಣಕ್ಕೆ ಸಮಿತಿ ನೇಮಕ

ಹಣಕಾಸು ತಂತ್ರಜ್ಞಾನ ವಲಯ ನಿಯಂತ್ರಣಕ್ಕೆ ಸಮಿತಿ ನೇಮಕ

ಕೇಂದ್ರ ಸರ್ಕಾರವು ಭಾರತದಲ್ಲಿ ಹಣಕಾಸು ತಂತ್ರಜ್ಞಾನ (ಫಿನ್ಟೆಕ್) ವಲಯದ ಅಭಿವೃದ್ಧಿ ಮತ್ತು ನಿಯಂತ್ರಣದ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಎಂಟು ಮಂದಿಯ ಚಾಲನಾ ಸಮಿತಿಯನ್ನು ನೇಮಕ ಮಾಡಿದೆ. ಅತ್ಯುನ್ನತ ಅಧಿಕಾರದ ಸಮಿತಿಗೆ ಆರ್ಥಿ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸುಭಾಶ್ ಗರ್ಗ್ ಅವರು ಮುಖ್ಯಸ್ಥರಾಗಿರುತ್ತಾರೆ. 2018-19ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲೆಯವರು ಬಗ್ಗೆ ಘೋಷಣೆ ಮಾಡಿದ್ದರು. ಸಚಿವರ ಘೋಷಣೆಗೆ ಅಗುನುಣವಾಗಿ ಫಿನ್ಟೆಕ್ ವಲಯದ ಸಮಗ್ರ ಅಧ್ಯಯನಕ್ಕೆ ಸಮಿತಿ ರಚಿಸಲಾಗಿದೆ.

ಸದಸ್ಯರು: ಕೇಂದ್ರ ಸರ್ಕಾರ ನೇಮಕ ಮಾಡಿರುವ ಉನ್ನತಾಧಿಕಾರ ಸಮಿತಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ, ಹಣಕಾಸು ಸೇವೆಗಳ ಕಾಯ್ದದರ್ಶಿ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕಾರ್ಯದರ್ಶಿ, ಕೇಂದ್ರೀಯ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷರು, ಭಾರತೀಯ ರಿಸರ್ವ್ ಬ್ಯಾಂಕಿನ ಉಪ ಗವರ್ನರ್, ಭಾರತದ ವಿಶಿಷ್ಟ ಗುರುತಿಸುವಿಕೆ ಪ್ರಾಧಿಕಾರ (ಯುಐಡಿಎಐ) ಮುಖ್ಯ ಕಾರ್ಯನಿರ್ವಹಣಾಧಿಖಾರಿ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಹೀಗೆ ಎಂಟು ಮಂದಿ ಸದಸ್ಯರು ಕಾರ್ಯ ನಿರ್ವಹಿಸಲಿದ್ದಾರೆ.

ಕಾರ್ಯಸೂಚಿ

ಸಮಿತಿಯ ಪ್ರಮುಖವಾದ ಉದ್ದೇಶ ಭಾರತದಲ್ಲಿ ಹಣಕಾಸು ತಂತ್ರಜ್ಞಾನದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಹಾಗೂ ವೈವಿಧ್ಯಮಯ ಸಮಸ್ಯೆಗಳನ್ನು ಪರಿಶೀಲಿಸುವುದು. ಇದು ಹಣಕಾಸು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಸಲುವಾಗಿ ನಿಬಂಧನೆಗಳನ್ನು ರೂಪಿಸುವ ಬಗ್ಗೆಯೂ ಪರಿಶೀಲನೆ ನಡೆಸಲಿದೆ. ನಿಬಂಧನೆಗಳು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಹೊಂದಿ, ಉದ್ಯಮಶೀಲತೆಯನ್ನು ಸೃಷ್ಟಿಸುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸಲಿದೆ. ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ವಲಯದಲ್ಲಿ ಭಾರತಕ್ಕೆ ವಿಶಿಷ್ಟ ಸಾಮಥ್ರ್ಯ ಇದೆ.

ಆರ್ಥಿಕತೆಯ ಪ್ರಮುಖ ವಲಯಗಳಲ್ಲಿ ಹಣಕಾಸು ತಂತ್ರಜ್ಞಾನವನ್ನು ಬಳಸುವ ಮಾರ್ಗಗಳನ್ನು ಇದು ಕಂಡುಹಿಡಿಯಲಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಹಣಕಾಸು ಒದಗಿಸುವುದೂ ಸೇರಿದಂತೆ ಹಲವು ವಲಯಗಳಿಗೆ ಇದು ಪೂರಕವಾಗಲಿದೆ. ಇದರ ಜತೆಗೆ ಸಮಾಜದ ದುರ್ಬಲ ವರ್ಗಗಳಿಗೆ - ಸೇವೆಗಳನ್ನು ಒದಗಿಸುವುದು, ಭೂ ದಾಖಲೆಗಳನ್ನು ನಿರ್ವಹಿಸುವುದು ಮತ್ತು ಇತರ ಸರ್ಕಾರಿ ಸೇವೆಗಳನ್ನು ಸೌಲಭ್ಯದ ನೆರವಿನೊಂದಿಗೆ ನೀಡುವುದು ಇದರ ಉದ್ದೇಶ. ಇದು ಹೇಗೆ ದೇಶದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳು ಹಣಕಾಸು ತಂತ್ರಜ್ಞಾನದ ಲಾಭವನ್ನು ಪಡೆದುಕೊಳ್ಳಲು ಸಾಧ್ಯ ಎಂಬ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಿದೆ.

ಸರಕು ಮತ್ತು ಸೇವಾ ತೆರಿಗೆ ಜಾಲದ ಮೂಲಕ ಲಭ್ಯವಾಗುವ ಅಂಕಿ ಅಂಶಗಳನ್ನು ಬಳಸುವ ಹಾಗೂ ಪರಿಶೀಲಿಸುವ ವಿಧಾನಗಳ ಬಗ್ಗೆಯೂ ಪರಿಶೀಲಿಸಲಿದೆ. ಸಾಲ ಮಾಹಿತಿ ಕಂಪನಿಗಳು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಹಣಕಾಸು ನೆರವು ನೀಡಲು ಇದನ್ನು ಅನ್ವಯಿಸುವ ಕಾರ್ಯಸಾಧ್ಯತೆಗಳ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದೆ. ಇದು ಭಾರತದ ವಿಶಿಷ್ಟ ಗುರುತಿಸುವಿಕೆ ಪ್ರಾಧಿಕಾರದಂಥ ಸಂಸ್ಥೆಗಳ ಜತೆಗೂ ಕಾರ್ಯ ನಿರ್ವಹಿಸಿ, ಇದೇ ಮಾದರಿಯಲ್ಲಿ ವಿಶಿಷ್ಟ ಉದ್ಯಮ ಗುರುತಿಸುವಿಕೆ ಸಂಖ್ಯೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನೂ ಹೊಂದಿದೆ.

Comment