IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತ- ಅಮೆರಿಕ ತಂಡದಿಂದ ಎಂ777 ಅತ್ಯಂತ ಲಘು ಬಂದೂಕು ಪರೀಕ್ಷೆ

ಭಾರತ- ಅಮೆರಿಕ ತಂಡದಿಂದ ಎಂ777 ಅತ್ಯಂತ ಲಘು ಬಂದೂಕು ಪರೀಕ್ಷೆ

ಅಮೆರಿಕ ಹಾಗೂ ಭಾರತದ ಅಧಿಕಾರಿಗಳನ್ನೊಳಗೊಂಡ ಜಂಟಿ ತನಿಖಾ ಸಮಿತಿ (ಜೆಐಸಿ), ಭಾರತದ ಎಂ777 ಅತ್ಯಂತ ಲಘು ಬಂದೂಕು (ಹೊವಿಟ್ಜರ್)ಗಳನ್ನು ರಾಜಸ್ಥಾನದ ಪೊಖ್ರಾನ್ ಫೈರಿಂಗ್ ಕ್ಷೇತ್ರದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.

ಪರೀಕ್ಷೆಯ ಫಲಿತಾಂಶವನ್ನು ತನಿಖಾ ತಂಡ ಸದ್ಯವೇ ಪರಾಮರ್ಶಿಸಲಿದೆ. 2017 ಸೆಪ್ಟೆಂಬರ್ನಲ್ಲಿ ಪರೀಕ್ಷಾರ್ಥ ಪ್ರಯೋಗದ ವೇಳೆ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಜಂಟಿ ತನಿಖಾ ತಂಡ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿದೆ.

ಹಿನ್ನೆಲೆ

2016 ನವೆಂಬರ್ನಲ್ಲಿ ಭಾರತವು ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡು, 5070 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 145 ಎಂ777 ಅತ್ಯಂತ ಲಘು ಹೊವಿಟ್ಜರ್ಗಳನ್ನು ಖರೀದಿ ಮಾಡಲು ನಿರ್ಧರಿಸಿತ್ತು. ಉತ್ತರ ಮತ್ತು ಪೂರ್ವ ಗಡಿಭಾಗದ ಪರ್ವತ ಹಾಗೂ ಕಣಿವೆಗಳಲ್ಲಿ ನಿಯೋಜಿಸುವ ಸಲುವಾಗಿ ಇದನ್ನು ಖರೀದಿಸಲು ಭಾರತ ಮುಂದಾಗಿತ್ತು. 1980 ದಶಕದಲ್ಲಿ ಸ್ವೀಡನ್ ಬೊಫೋರ್ಸ್ ಗನ್ಗಳನ್ನು ಅಳವಡಿಸಿಕೊಂಡ ಬಳಿಕ, ಮೊಟ್ಟಮೊದಲ ಬಾರಿಗೆ ಹೊಸ ಬಂದೂಕುಗಳ ಖರೀದಿಗೆ ಭಾರತ ಮುಂದಾಗಿತ್ತು. ಬೊಫೋರ್ಸ್ ಬಂದೂಕು ಖರೀದಿ ಭಾರತದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

ಒಪ್ಪಂದದ ಅಂಗವಾಗಿ ಎಂ777 ಯುಎಲ್ಎಚ್ಗಳನ್ನು 2017 ಮೇ ತಿಂಗಳಲ್ಲಿ ಭಾರತಕ್ಕೆ ತರಲಾಯಿತು. ಭಾರತದಲ್ಲಿ ಕ್ಷೇತ್ರ ಪರೀಕ್ಷೆಗಾಗಿ ಇದನ್ನು ತಂದು ಭಾರತೀಯ ಶಸ್ತ್ರಾಸ್ತಗಳನ್ನು ಫೈರಿಂಗ್ ಟೇಬಲ್ಗೆ ಅಳವಡಿಸಲಾಗಿತ್ತು. ಇದು ನಿಗದಿತ ದೂರಸಾಮಥ್ರ್ಯ ಹಾಗೂ ಎತ್ತರವನ್ನು ಪರೀಕ್ಷಿಸುವ ಪ್ರಯೋಗವಾಗಿತ್ತು. ಆದರೆ 2017 ಸೆಪ್ಟೆಂಬರ್ನಲ್ಲಿ ಪರೀಕ್ಷಾರ್ಥ ಪ್ರಯೋಗದ ವೇಳೆ, ಹೊವಿಟ್ಜರ್ ಬ್ಯಾರೆಲ್ನಲ್ಲಿ ಪ್ರೊಜೆಕ್ಟೈಲ್ ಸ್ಫೋಟವಾಗಿತ್ತು. ಅವಘಡದ ಬಳಿಕ, ಎರಡೂ ದೇಶಗಳು ಜಂಟಿ ತಂಡವನ್ನು ರಚಿಸಿ ಸಮಸ್ಯೆಯ ಅಧ್ಯಯನಕ್ಕೆ ಮುಂದಾಗಿದ್ದವು.

ಎಂ777 ಅತ್ಯಂತ ಲಘು ಹೊವಿಟ್ಜರ್

ಇದನ್ನು ಅಮೆರಿಕದ ಬಿಎಸಿ ಸಿಸ್ಟಮ್ಸ್ ಗ್ಲೋಬಲ್ ಕಾಂಬ್ಯಾಟ್ ಸಿಸ್ಟಮ್ ವಿಭಾಗ ಉತ್ಪಾದಿಸುತ್ತದೆ. ಇದು ಅತ್ಯಂತ ಚಿಕ್ಕ ಹಾಗೂ ಲಘು ಬಂದೂಕಾಗಿದೆ. ಇದು 4100 ಕೆಜಿ ತೂಕವಿದ್ದು, ಹೆಲಿಕಾಪ್ಟರ್ನಲ್ಲಿ ಇದನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯಬಹುದಾಗಿದೆ. ಇದು 24 ಕಿಲೋಮೀಟರ್ ದೂರದವರೆಗೂ ಗುರಿ ಇಡುವ ವ್ಯವಸ್ಥೆ ಹೊಂದಿದೆ.

ಎಂ777ಗೆ ಸಂಬಂಧಿಸಿದ ಭಾರತ ಅಮೆರಿಕ ಒಪ್ಪಂದದ ಅನ್ವಯ, 25 ಯುಎಲ್ಎಚ್ಗಳನ್ನು ನೇರವಾಗಿ ಭಾರತದಲ್ಲಿ ನಿಯೋಜಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಉಳಿದವುಗಳನ್ನು ಮಹಾರಾಷ್ಟ್ರದಲ್ಲಿರುವ ಇಎಇ ಸಿಸ್ಟಮ್ಸ್ನಲ್ಲಿ ಜೋಡಿಸಿಕೊಳ್ಳಲು ನಿರ್ಧರಿಸಿ, ಇದಕ್ಕೆ ಮಹೀಂದ್ರ ಸಮೂಹದ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿತ್ತು. 2021 ಒಳಗಾಗಿ ಎಲ್ಲ ಹೊವಿಟ್ಜರ್ಗಳನ್ನು ಪೂರೈಸಲಾಗುತ್ತದೆ.

ಭಾರತೀಯ ಸೇನಾಪಡೆಯು ಆರ್ಟಿಲರಿ ಬಂದೂಕುಗಳನ್ನು ತೀರಾ ಎತ್ತರ ಪ್ರದೇಶದಲ್ಲಿ ಅಂದರೆ ಅರುಣಾಚಲ ಪ್ರದೇಶ ಮತ್ತು ಲಡಾಕ್ನಲ್ಲಿ ಚೀನಾ ಗಡಿಯಲ್ಲಿ ನಿಯೋಜಿಸಲು ಉದ್ದೇಶಿಸಿದೆ. ಬಂದೂಕು ವ್ಯವಸ್ಥೆಯನ್ನು ಹೊಂದುವ ಮೂಲಕ ಭಾರತೀಯ ರಕ್ಷಣಾ ಪಡೆಗಳು ತಮ್ಮ ಸೇನಾ ಕಾರ್ಯಾಚರಣೆ ವಿಶೇಷ ಪ್ರಯೋಜನವನ್ನು ಹೊಂದಲಿದ್ದಾರೆ.

Comment