IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತ- ಅಮೆರಿಕ ಸೌರವ್ಯಾಜ್ಯ ಇತ್ಯರ್ಥಕ್ಕೆ ಡಬ್ಲ್ಯುಟಿಓ ಬದ್ಧತಾ ಸಮಿತಿ ನೇಮಕ

ಭಾರತ- ಅಮೆರಿಕ ಸೌರವ್ಯಾಜ್ಯ ಇತ್ಯರ್ಥಕ್ಕೆ ಡಬ್ಲ್ಯುಟಿಓ ಬದ್ಧತಾ ಸಮಿತಿ ನೇಮಕ

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಓ) ವ್ಯಾಜ್ಯ ಪರಿಹಾರ ಸಂಸ್ಥೆ (ಡಿಎಸ್ಬಿ), ಭಾರತ ಹಾಗೂ ಅಮೆರಿಕ ನಡುವಿನ  ಸೌರವ್ಯಾಜ್ಯ ಇತ್ಯರ್ಥಕ್ಕೆ ಡಬ್ಲ್ಯುಟಿಓ ಬದ್ಧತಾ ಸಮಿತಿ ನೇಮಕ ಮಾಡಿದೆ. ಸಮಿತಿಯು ಅಮೆರಿಕ ವಿರುದ್ಧದ ಆಂತರಿಕ ಅಂಶಗಳ ಅಗತ್ಯತೆ (ಡಿಸಿಆರ್) ನಿಯಮಾವಳಿಗೆ ಸಂಬಂಧಿಸಿದಂತೆ ವಿಶ್ವ ವ್ಯಾಪಾರ ಸಂಸ್ಥೆ ನೀಡಿದ 2016 ತೀರ್ಪಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದನ್ನು ಅಧ್ಯಯನ ಮಾಡಲಿದೆ ಎಂದು ವಿಶ್ವ ವ್ಯಾಪಾರ ಸಂಸ್ಥೆ ಪ್ರಕಟಿಸಿದೆ.

ಹಿನ್ನೆಲೆ

2016ರಲ್ಲಿ ಬಹುರಾಷ್ಟ್ರೀಯ ಸಂಸ್ಥೆಯಾದ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಓ) ಭಾರತದ ವಿರುದ್ಧ ತೀರ್ಪು ನೀಡಿ, ತನ್ನ ಸ್ಥಳೀಯ ಉತ್ಪಾದಕರಿಗೆ ಸೌರ ವಿದ್ಯುತ್ ಯೋಜನೆಗಳಲ್ಲಿ ಭಾರತ ಒಲವು ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಮೆರಿಕ ಸಲ್ಲಿಸಿದ ತಕರಾರು ಅರ್ಜಿ ಹಿನ್ನೆಲೆಯಲ್ಲಿ ತೀರ್ಪು ನೀಡಲಾಗಿತ್ತು. ಆದರೆ ತೀರ್ಪಿನ ಬಳಿಕ ಕೂಡಾ ಭಾರತ ವಿಶ್ವ ವ್ಯಾಪಾರ ಸಂಸ್ಥೆಯ ಅನ್ವಯ ಸೂಕ್ತವಲ್ಲದ ನೀತಿಯನ್ನೇ ಭಾರತ ಮುಂದುವರಿಸುತ್ತಿದೆ ಎಂದು ಆಪಾದಿಸಿತ್ತು. 2017 ಡಿಸೆಂಬರ್ನಲ್ಲಿ ಮತ್ತೆ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡಿ, ವಿಶ್ವ ವ್ಯಾಪಾರ ಸಂಸ್ಥೆಯ ತೀರ್ಪಿಗೆ ಅನುಗುಣವಾಗಿ ನಡೆದುಕೊಳ್ಳದ ಭಾರತದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು. ಆದರೆ ಭಾರತ ತಾನು ವಿಶ್ವ ವ್ಯಾಪಾರ ಸಂಸ್ಥೆಯ ತೀರ್ಪಿಗೆ ಅನುಗುಣವಾಗಿ ನಿರ್ಧಾರ ಕೈಗೊಂಡಿರುವುದಾಗಿ ಹೇಳುತ್ತಾ ಬಂದಿತ್ತು. ಹಿನ್ನೆಲೆಯಲ್ಲಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಶ್ವ ವ್ಯಾಪಾರ ಸಂಸ್ಥೆ ನೀಡಿದ ತೀರ್ಪನ್ನು ತಾನು ಪಾಲಿಸುತ್ತಿದ್ದೇನೆ ಎಂದು ಖಾತ್ರಿಪಡಿಸಲು ಸಮಿತಿಯನ್ನು ರಚಿಸುವಂತೆ ಕೋರಿಕೊಂಡಿತ್ತು.

ಸಮಸ್ಯೆ ಏನು?

2013ರಲ್ಲಿ ಅಮೆರಿಕ, ವಿಶ್ವ ವ್ಯಾಪಾರ ಸಂಸ್ಥೆಯ ಮುಂದೆ ದೂರು ಸಲ್ಲಿಸಿ, ಭಾರತದ ಮಹತ್ವಾಕಾಂಕ್ಷಿ ಜವಾಹರಲಾಲ್ ನೆಹರೂ ರಾಷ್ಟ್ರೀಯ ಸೌರ ಮಿಷನ್ (ಎನ್ಎಸ್ಎಂ)ಗೆ ದೇಶೀಯ ಅಂಶಗಳ ಅಗತ್ಯತೆಯನ್ನು ಹೇರಿದೆ ಎಂದು ದೂರಿತ್ತು. ಇದು ಜಾಗತಿಕ ವ್ಯಾಪಾರ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಆಮದು ಮಾಡಿಕೊಂಡ ಸೌರ ಬ್ಯಾಟರಿಗಳು ಮತ್ತು ಮೊಡ್ಯೂಲ್ಗಳನ್ನು ಪರೋಕ್ಷವಾಗಿ ನಿರಾಕರಿಸುವ ಕ್ರಮ ಇದು ಎಂದು ಆಪಾದಿಸಿತ್ತು. 2016 ಫೆಬ್ರುವರಿಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯ ವ್ಯಾಜ್ಯ ಪರಿಹಾರ ವಿಭಾಗ ತೀರ್ಪು ನೀಡಿ, ಭಾರತವು ದೇಶೀಯ ಅಂಶಗಳ ಅಗತ್ಯತೆಯನ್ನು ಹೇರುವ ಮೂಲಕ ರಾಷ್ಟ್ರೀಯ ಪರಿಗಣನೆ ಬದ್ಧತೆಯನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿತ್ತು. ಭಾರತ ದೇಶೀಯ ಅಂಶದ ನಿಯಮಾವಳಿಯನ್ನು ಜಾರಿಗೆ ತಂದ ಬಳಿಕ ಭಾರತಕ್ಕೆ ಆಗುತ್ತಿದ್ದ ಸೋಲಾರ್ ಸಾಧನಗಳ ರಫ್ತು ಪ್ರಮಾಣದಲ್ಲಿ ಶೇಕಡ 90ರಷ್ಟು ಇಳಿಕೆಯಾಗಿದೆ ಎನ್ನುವುದು ಅಮೆರಿಕದ ವಾದವಾಗಿತ್ತು.

ವ್ಯಾಜ್ಯ ಇತ್ಯರ್ಥ ವಿಭಾಗ

ವಿಶ್ವ ವ್ಯಾಪಾರ ಸಂಸ್ಥೆಯು ಅಂತರ ಸರ್ಕಾರ ಸಂಸ್ಥೆಯಾಗಿದ್ದು, ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ಅತ್ಯುನ್ನತ ಸಂಸ್ಥೆಯಾಗಿದೆ. ವಿಶ್ವ ವ್ಯಾಪಾರ ಸಂಸಥೆಯ ಸಾಮಾನ್ಯ ಮಂಡಳಿಯು ವಿಶ್ವ ವ್ಯಾಪಾರ ಸಂಸ್ಥೆಯ ಸದಸ್ಯದೇಶಗಳ ನಡುವಿನ ವ್ಯಾಜ್ಯವನ್ನು ನಿರ್ವಹಿಸಲು ವ್ಯಾಜ್ಯ ಇತ್ಯರ್ಥ ವಿಭಾಗವನ್ನು ಹೊಂದಿರಬೇಕು ಎಂಬ ಅಭಿಪ್ರಾಯಕ್ಕೆ ಬಂದಿದೆ. ಉಗುರ್ವೆ ಸುತ್ತಿನ ಅಂತಿಮ ನಿಯಮಾವಳಿಯ ಜಾರಿಯ ನಿಟ್ಟಿನಲ್ಲಿ ಉದ್ಭವಿಸಬಹುದಾದ ಯಾವುದೇ ವ್ಯಾಜ್ಯಗಳು ವಿಭಾಗದ ವ್ಯಾಪ್ತಿಯಲ್ಲಿ ಬರುತ್ತವೆ. ವ್ಯಾಜ್ಯ ಇತ್ಯರ್ಥದ ನಿಟ್ಟಿನಲ್ಲಿ ಎಲ್ಲ ನಿಯಮಾವಳಿಗಳನ್ನು ಹಾಗೂ ವಿಧಿವಿಧಾನಗಳನ್ನು ಆಳವಾಗಿ ಅರ್ಥ ಮಾಡಿಕೊಂಡು ವಿಭಾಗ ತೀರ್ಪು ನೀಡುತ್ತದೆ.

2016 ಫೆಬ್ರುವರಿಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯ ವ್ಯಾಜ್ಯ ಪರಿಹಾರ ವಿಭಾಗ ತೀರ್ಪು ನೀಡಿ, ಭಾರತವು ದೇಶೀಯ ಅಂಶಗಳ ಅಗತ್ಯತೆಯನ್ನು ಹೇರುವ ಮೂಲಕ ರಾಷ್ಟ್ರೀಯ ಪರಿಗಣನೆ ಬದ್ಧತೆಯನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿತ್ತು. ಭಾರತ ದೇಶೀಯ ಅಂಶದ ನಿಯಮಾವಳಿಯನ್ನು ಜಾರಿಗೆ ತಂದ ಬಳಿಕ ಭಾರತಕ್ಕೆ ಆಗುತ್ತಿದ್ದ ಸೋಲಾರ್ ಸಾಧನಗಳ ರಫ್ತು ಪ್ರಮಾಣದಲ್ಲಿ ಶೇಕಡ 90ರಷ್ಟು ಇಳಿಕೆಯಾಗಿದೆ ಎನ್ನುವುದು ಅಮೆರಿಕದ ವಾದವಾಗಿತ್ತು.

ವ್ಯಾಜ್ಯ ವಿಲೇವಾರಿ ವಿಭಾಗಕ್ಕೆ ವ್ಯಾಜ್ಯ ಇತ್ಯರ್ಥ ಸಮಿತಿಗಳನ್ನು ನೇಮಕ ಮಾಡುವ ಅಧಿಕಾರವಿದೆ. ಇದರ ಜತೆಗೆ ವ್ಯಾಜ್ಯವನ್ನು ಸಂಧಾನ ಮಾತುಕತೆಗೆ ಒಪ್ಪಿಸುವ, ಸಮಿತಿಯನ್ನು ಹೊಂದುವ, ಮೇಲ್ಮನವಿ ಪ್ರಾಧಿಕಾರ ಮತ್ತು ವ್ಯಾಜ್ಯ ಪರಿಹಾರ ವರದಿಗಳನ್ನು ಸಿದ್ಧಪಡಿಸುವ, ಶಿಫಾರಸ್ಸುಗಳು ಮತ್ತು ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಮೇಲ್ವಿಚಾರಣೆ ನಡೆಸುವ ಅಧಿಕಾರವೂ ವಿಭಾಗಕ್ಕೆ ಇರುತ್ತದೆ. ವಿಭಾಗದ ಶಿಫಾರಸ್ಸುಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾದ ದೇಶಗಳನ್ನು ಅಮಾನತು ಮಾಡುವ ಅಥವಾ ಸದಸ್ಯತ್ವ ತಡೆಹಿಡಿಯುವ ಅಧಿಕಾರವೂ ವಿಶ್ವ ವ್ಯಾಪಾರ ಸಂಸ್ಥೆಯ ವ್ಯಾಜ್ಯ ಇತ್ಯರ್ಥ ವಿಭಾಗಕ್ಕೆ ಇರುತ್ತದೆ.

Comment