IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಬೆಂಗಳೂರಿನಲ್ಲಿ ಭಾರತದ ಮೊಟ್ಟಮೊದಲ ಹೆಲಿಟ್ಯಾಕ್ಸಿ ಸೇವೆ

ಬೆಂಗಳೂರಿನಲ್ಲಿ ಭಾರತದ ಮೊಟ್ಟಮೊದಲ ಹೆಲಿಟ್ಯಾಕ್ಸಿ ಸೇವೆ

ಭಾರತದ ಮೊಟ್ಟಮೊದಲ ಹೆಲಿಕಾಪ್ಟರ್ ಶೆಟಲ್ ಸರ್ವೀಸ್ (ಹೆಲಿ ಟ್ಯಾಕ್ಸಿ)ಯನ್ನು ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಇದು ಕಟ್ಟಕಡೆಯ ಪ್ರದೇಶಕ್ಕೂ ಸೂಕ್ತ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಹೆಲಿಟ್ಯಾಕ್ಸಿಯ ಮೊಟ್ಟಮೊದಲ ಟ್ರಿಪ್ ಎಲೆಕ್ಟ್ರಾನಿಕ್ ಸಿಟಿ ಮತ್ತು ಬೆಂಗಳೂರಿನ ಹೊರವಲಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ಕಲ್ಪಿಸಲಾಗಿತ್ತು. ತುಂಬೆ ಏವಿಲೇಶನ್ಸ್ ಸೇವೆಯನ್ನು ಒದಗಿಸುತ್ತಿದೆ.

ಅಗತ್ಯತೆ

ಬೆಂಗಳೂರು ತೀರಾ ಕನಿಷ್ಠ ರಸ್ತೆ ದಟ್ಟಣೆಯನ್ನು ಹೊಂದಿದೆ. ಅಂದರೆ ಭಾರತದ ಇತರ ನಗರಗಳಿಗೆ ಹೋಲಿಸಿದರೆ, ಚದರ ಕಿಲೋಮೀಟರ್ ಭೂ ಪ್ರದೇಶದಲ್ಲಿ ಇರುವ ಒಟ್ಟು ರಸ್ತೆಯ ಉದ್ದ ತೀರಾ ಕಡಿಮೆ. ಆದ್ದರಿಂದ ವಿಮಾನ ಯಾನಿಗಳನ್ನು ಕರೆದೊಯ್ಯುವ ಸಲುವಾಗಿ ಇಂಥ ಸೇವೆ ಇತರ ನಗರಗಳಿಗಿಂತ ಬೆಂಗಳೂರಿನಲ್ಲೇ ಅಧಿಕವಾಗಿತ್ತು. ಜತೆಗೆ ವಿಮಾನಯಾನಿಗಳು ಬೆಂಗಳೂರು ನಗರವನ್ನು ತಲುಪಲು ಹಾಗೂ ವಿಮಾನ ನಿಲ್ದಾಣಕ್ಕೆ ನಗರದಿಂದ ಸೂಕ್ತ ಕಾಲಕ್ಕೆ ತಲುಪಲು ಕೂಡಾ ಇದು ಅಗತ್ಯವಾಗಿತ್ತು. ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು 2017 ಆಗಸ್ಟ್ನಲ್ಲಿ, ಬೆಂಗಳೂರಿನಲ್ಲಿ ಹೆಲಿಟ್ಯಾಕ್ಸಿ ಸೇವೆ ಆರಂಭಿಸುವ ಬಗ್ಗೆ ಘೋಷಣೆ ಮಾಡಿದ್ದರು.

ಪ್ರಮುಖ ಅಂಶಗಳು

ಹೆಲಿಟ್ಯಾಕ್ಸಿ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ಸಂಪರ್ಕ ಒದಗಿಸಲಿದೆ. ನಗರದ ಮಧ್ಯೆ ಇರುವ ವಿಮಾನ ನಿಲ್ದಾಣದಿಂದ ದಕ್ಷಿಣಕ್ಕೆ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಎಲೆಕ್ಟ್ರಾನಿಕ್ ಸಿಟಿಗೆ ತ್ವರಿತ ಸಂಪರ್ಕ ಸಾರಿಗೆ ದೊಡ್ಡ ಸಮಸ್ಯೆಯಾಗಿತ್ತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇನ್ಫೋಸಿಸ್ ಹಾಗೂ ಇತರ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ನೂರಾರು ಮಾಹಿತಿ ತಂತ್ರಜ್ಞಾನ ಹಾಗೂ ಇತರ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸ ಹೆಲಿಟ್ರಾಕ್ಸಿ ಸೇವೆಯಿಂದಾಗಿ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವಿನ ಪ್ರಯಾಣದ ಅವಧಿ ಎರಡು ಗಂಟೆಯಿಂದ 15 ನಿಮಿಷಕ್ಕೆ ಇಳಿಯಲಿದೆ.

ಹೆಲಿಟ್ಯಾಕ್ಸಿ ಸೇವೆಗೆ ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ 4130 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇದರಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ನಿಂದ ಪಿಕ್ಅಪ್ ಮಾಡುವುದು, ಹೆಲಿಪ್ಯಾಡ್ಗೆ ಕರೆದೊಯ್ಯುವ ಸಂಚಾರ ವ್ಯವಸ್ಥೆಯೂ ಸೇರುತ್ತದೆ. 15 ಕೆಜಿ ಲಗೇಜ್ ಒಯ್ಯಲು ಅವಕಾಶ ಇರುತ್ತದೆ. ಹೆಲಿ ಟ್ಯಾಕ್ಸಿ ಹೆಸರಿನ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರು ತಮ್ಮ ಆಸನಗಳನ್ನು ಕಾಯ್ದಿರಿಸಬಹುದು. ಪ್ರಸ್ತುತ ಹೆಲಿಕಾಪ್ಟರ್ ಸೇವೆ ಒದಗಿಸುವ ಕಂಪನಿ ಕೇವಲ ಒಂದು ಹೆಲಿಕಾಪ್ಟರ್ ಮಾತ್ರ ನಿಯೋಜಿಸಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಯ ಅನುಸಾರವಾಗಿ ಸಂಖ್ಯೆಯಲ್ಲಿ ಹೆಚ್ಚಿಸಲು ಉದ್ದೇಶಿಸಿದೆ.

Comment