IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತಕ್ಕೆ ತೈಲ ಪೂರೈಕೆ: ಸೌದಿಯನ್ನು ಹಿಂದಿಕ್ಕಿದ ಇರಾಕ್

ಭಾರತಕ್ಕೆ ತೈಲ ಪೂರೈಕೆ: ಸೌದಿಯನ್ನು ಹಿಂದಿಕ್ಕಿದ ಇರಾಕ್

ಭಾರತಕ್ಕೆ ಅತಿಹೆಚ್ಚು ತೈಲ ಪೂರೈಕೆ ಮಾಡುವ ಹೆಗ್ಗಳಿಕೆ ಹೊಂದಿದ್ದ ಸೌದಿ ಅರೇಬಿಯಾವನ್ನು ಹಿಂದಿಕ್ಕಿದ ಇರಾಕ್, ಇದೀಗ ಭಾರತಕ್ಕೆ ಅತಿಹೆಚ್ಚು ಕಚ್ಚಾ ತೈಲ ಸರಬರಾಜು ಮಾಡುವ ದೇಶವಾಗಿ ಹೊರಹೊಮ್ಮಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 38.9 ದಶಲಕ್ಷ ಟನ್ ಕಚ್ಚಾ ತೈಲವನ್ನು ಇರಾಕ್ ಪೂರೈಸಿದೆ. ಇದು ಇಡೀ ದೇಶದ ತೈಲ ಬೇಡಿಕೆಯ ಐದನೇ ಒಂದರಷ್ಟಾಗಿದೆ.

ಭಾರತವು ತನ್ನ ಒಟ್ಟು ತೈಲ ಬೇಡಿಕೆಯ ಶೇಕಡ 80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. 2017-2018ನೇ ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ಜನವರಿವರೆಗೆ ಭಾರತ 184.4 ದಶಲಕ್ಷ ಟನ್ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. 2016-17ರಲ್ಲಿ ಭಾರತ 213.9 ದಶಲಕ್ಷ ಟನ್ ತೈಲ ಆಮದು ಮಾಡಿಕೊಂಡಿತ್ತು. 2015-16ರಲ್ಲಿ ಪ್ರಮಾಣ 202.8 ದಶಲಕ್ಷ ಟನ್ ಆಗಿತ್ತು.

ಪ್ರಮುಖ ಅಂಶಗಳು

ಸೌದಿಅರೇಬಿಯಾ ಸಾಂಪ್ರದಾಯಿಕವಾಗಿ ಭಾರತಕ್ಕೆ ಅತಿಹೆಚ್ಚು ಕಚ್ಚಾ ತೈಲವನ್ನು ರಫ್ತು ಮಾಡುವ ದೇಶವಾಗಿತ್ತು. ಆದರೆ ಈಗ ಸೌದಿಅರೇಬಿಯಾವನ್ನು ಹಿಂದಿಕ್ಕಿದ ಇರಾಕ್ ಸ್ಥಾನ ಆಕ್ರಮಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಸೌದಿಅರೇಬಿಯಾ ಭಾರತಕ್ಕೆ 30.9 ದಶಲಕ್ಷ ಟನ್ ಕಚ್ಚಾ ತೈಲ ಪೂರೈಸಿದೆ. ಇರಾನ್ ಭಾರತಕ್ಕೆ ಅತಿಹೆಚ್ಚು ತೈಲ ಪೂರೈಸುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ. ಕಳೆದ ಏಪ್ರಿಲ್ನಿಂದ ಜನವರಿವರೆಗೆ ಒಟ್ಟು 18.4 ದಶಲಕ್ಷ ಟನ್ ತೈಲವನ್ನು ಇರಾನ್ ಪೂರೈಸಿದೆ. ಇರಾನ್ ಮೂರನೇ ಸ್ಥಾನದಲ್ಲಿರುವುದು ಇದು ಸತತ ಎರಡನೇ ಬಾರಿ. ವೆನೆಜುವೆಲಾ ಭಾರತಕ್ಕೆ ಅತಿಹೆಚ್ಚು ತೈಲ ಸರಬರಾಜು ಮಾಡುವ ರಾಷ್ಟ್ರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದು, ಅವಧಿಯಲ್ಲಿ 15.5 ದಶಲಕ್ಷ ಟನ್ ಕಚ್ಚಾ ತೈಲ ಪೂರೈಸಿದೆ. ನಂತರದ ಅಂದರೆ ಐದನೇ ಸ್ಥಾನದಲ್ಲಿರುವ ನೈಜೀರಿಯಾ 14.9 ದಶಲಕ್ಷ ಟನ್ ಕಚ್ಚಾ ತೈಲವನ್ನು ಭಾರತಕ್ಕೆ ಸರಬರಾಜು ಮಾಡಿದೆ.

ಪಶ್ಚಿಮ ಏಷ್ಯಾದಿಂದ ಆಮದು

ಪಶ್ಚಿಮ ಏಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ 2014-15ರಲ್ಲಿ ಒಟ್ಟು ಬೇಡಿಕೆಯ ಶೇಕಡ 58 ಇದ್ದುದು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ನಿಂದ ಜನವರಿ ಅವಧಿಯಲ್ಲಿ ಶೇಕಡ 63.7ಕ್ಕೆ ಹೆಚ್ಚಿದೆ. 2014-15ರಲ್ಲಿ ಭಾರತ ಒಟ್ಟು 189.4 ದಶಲಕ್ಷ ಟನ್ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದು, ಪೈಕಿ ಪಶ್ಚಿಮ ಏಷ್ಯಾದಿಂದ 109.9 ದಶಲಕ್ಷ ಟನ್ ಆಮದು ಮಾಡಿಕೊಂಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ, ಪಶ್ಚಿಮ ಏಷ್ಯಾ ದೇಶಗಳು ಭಾರತಕ್ಕೆ 117.5 ದಶಲಕ್ಷ ಟನ್ ಕಚ್ಚಾ ತೈಲವನ್ನು ಸರಬರಾಜು ಮಾಡಿವೆ.

ಇರಾಕ್ನಿಂದ ಆಮದು ಹೆಚ್ಚಲು ಕಾರಣ

ಭಾರತಕ್ಕೆ ಅತಿಹೆಚ್ಚು ಕಚ್ಚಾ ತೈಲ ಸರಬರಾಜು ಮಾಡುವ ದೇಶಗಳ ಸಾಲಿನಲ್ಲಿ ಇರಾಕ್, ಸೌದಿಅರೇಬಿಯಾವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿ ಅಗ್ರಸ್ಥಾನಕ್ಕೆ ಏರಲು ಮುಖ್ಯ ಕಾರಣವೆಂದರೆ, ತೀರಾ ಕಡಿಮೆ ದರದಲ್ಲಿ ಭಾರತಕ್ಕೆ ತೈಲ ಪೂರೈಕೆ ಮಾಡಿರುವುದು. ಸೌದಿ ಅರೇಬಿಯಾ ಒಪೆಕ್ ಅಧಿಕೃತ ಮಾರಾಟ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಸರಬರಾಜು ಮಾಡಿದ್ದರೆ, ಇರಾಕ್ ಅದಕ್ಕಿಂತ ತೀರಾ ಕಡಿಮೆ ದರದಲ್ಲಿ ತೈಲ ಪೂರೈಕೆ ಮಾಡಿದೆ. ಕಾಲಘಟ್ಟದಲ್ಲಿ, ಒಪೆಕ್ ದೇಶಗಳು ಉತ್ಪಾದನೆ ಕಡಿತಗೊಳಿಸಿರುವುದರಿಂದ ಬೆಲೆ ಏರುಮುಖಿಯಾಗಿದೆ. ಆದಾಗ್ಯೂ ಇರಾಕ್ ತೀರಾ ರಭಸದ ಬೆಲೆನಿಗದಿಗೆ ಇಳಿದಿರಲಿಲ್ಲ. ಏಕೆಂದರೆ ಆರ್ಥಿಕತೆಗೆ ಅಗತ್ಯ ಸಂಪನ್ಮೂಲ ಒದಗಿಸಲು ಇರಾಕ್ಗೆ ತೈಲ ಸಂಪನ್ಮೂಲವೇ ಪ್ರಮುಖ ಆಧಾರ. ಇದಲ್ಲದೇ ಭಾರತೀಯ ತೈಲ ಶುದ್ಧೀಕರಣ ಘಟಕಗಳು ಇತ್ತೀಚಿನ ವರ್ಷಗಳಲ್ಲಿ ಘಟಕಗಳ ಆಧುನೀಕರಣಕ್ಕೆ ದೊಡ್ಡ ಮೊತ್ತದ ಹೂಡಿಕೆ ಮಾಡಿದ್ದು, ಮೂಲಕ ತೀರಾ ಕಳಪೆ ಗುಣಮಟ್ಟದ ಕಚ್ಚಾ ತೈಲವನ್ನು ಕೂಡಾ ಹೆಚ್ಚು ಕ್ಷಮತೆಯಿಂದ ಶುದ್ಧೀಕರಿಸಲು ತಂತ್ರಜ್ಞಾನ ರೂಢಿಸಿಕೊಂಡಿವೆ. ಇದರಲ್ಲಿ ಇರಾಕ್ ಪೂರೈಸುವ ಬಸ್ರಾ ಹೆವಿ ಕಚ್ಚಾ ತೈಲ ಕೂಡಾ ಸೇರಿದೆ. ಇದರಿಂದ ಮಿತವ್ಯಯದ ಕಚ್ಚಾತೈಲವನ್ನು ಹೆಚ್ಚು ಸ್ಥಿತಿಸ್ಥಾಪಕತ್ವದಿಂದ ಪೂರೈಸಲು ಅವಕಾಶವಿದೆ.

ಭಾರತಕ್ಕೆ ಕಚ್ಚಾ ತೈಲವನ್ನು ಅಧಿಕ ಪ್ರಮಾಣದಲ್ಲಿ ಹಾಗೂ ಕಡಿಮೆ ದರದಲ್ಲಿ ಪೂರೈಸುವ ಮೂಲಕ ತನ್ನ ಆರ್ಥಿಕತೆಗೆ ಅಗತ್ಯವಾದ ಸಂಪನ್ಮೂಲವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಇರಾಕ್ ಕ್ರಮ ಕೈಗೊಂಡಿತ್ತು. ಹಿನ್ನೆಲೆಯಲ್ಲಿ ಇರಾಕ್ನಿಂದ ಭಾರತಕ್ಕೆ ತೈಲ ಸರಬರಾಜು ಪ್ರಮಾಣವೂ ಹೆಚ್ಚಿದೆ.

Comment