IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಒಡಿಶಾ ಸರ್ಕಾರದಿಂದ ಅಮ ಗಾಂವ್, ಅಮ ವಿಕಾಸ್ ಯೋಜನೆ

ಒಡಿಶಾ ಸರ್ಕಾರದಿಂದ ಅಮ ಗಾಂವ್, ಅಮ ವಿಕಾಸ್ ಯೋಜನೆ

ಒಡಿಶಾ ಸರ್ಕಾರ ಅಮ ಗಾಂವ್, ಅಮ ವಿಕಾಸ್ (ನಮ್ಮ ಗ್ರಾಮ ನಮ್ಮ ಅಭಿವೃದ್ಧಿ) ಎಂಬ ವಿಶೇಷ ಯೋಜನೆಗೆ ಚಾಲನೆ ನೀಡಿದೆ. ಇದು ಗ್ರಾಮೀಣ ಪ್ರದೇಶದ ಮಂದಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಗುರಿ ಹೊಂದಿದೆ.

ಯೋಜನೆಯ ಚಾಲನಾ ಸಮಾರಂಭದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೊಬೈಲ್ ವಿಡಿಯೊ ವ್ಯಾನ್ಗಳಿಗೆ ಚಾಲನೆ ನಿಡಿದರು. ಇದು ರಾಜ್ಯಾದ್ಯಂತ ಸಂಚರಿಸಿ, ರಾಜ್ಯದ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಚಾರ ಮಾಡಲಿದೆ. ಇದು ಸರ್ಕಾರ ಮತ್ತು ಜನತೆಯನ್ನು ಸಂಪರ್ಕಿಸುವ ಗಿರಿ ಹೊಂದಿದೆ.

ಪ್ರಮುಖ ಅಂಶಗಳು

ಯೋಜನೆಯಡಿ ಜನರು ನೇರವಾಗಿ ತಮ್ಮ ದೂರು ದುಮ್ಮಾನಗಳನ್ನು ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಲು ಅವಕಾಶವಿದೆ. ರಾಜಧಾನಿ ಭುವನೇಶ್ವರದಲ್ಲಿರುವ ಸಿಎಂ ಕಚೇರಿಗೆ ಮೊಬೈಲ್ ವಿಡಿಯೊ ವ್ಯಾನ್ಗಳಲ್ಲಿರುವ ವೈ ಫೈ ಆಧರಿತ ವ್ಯವಸ್ಥೆಯಿಂದ ದೂರುಗಳನ್ನು ಕಳುಹಿಸಬಹುದಾಗಿದೆ. ವಿನೂತನ ಯೋಜನೆಯ ಮೂಲಕ ಜನರು ತಮ್ಮ ಅಹವಾಲುಗಳನ್ನು ತಕ್ಷಣ ಬಗೆಹರಿಸಿಕೊಳ್ಳಲು ಸಾಧ್ಯವಾಗಲಿದೆ. ಮೊದಲ ಹಂತದಲ್ಲಿ ಮೊಬೈಲ್ ವ್ಯಾನ್ಗಳು ಕೋರಾಪುಟ್, ಜಗಪುರ, ಗಂಜಮ್ ಮತ್ತು ಸಂಬಲ್ಪುರ ಜಿಲ್ಲೆಗಳನ್ನು ತಲುಪಲಿದೆ.

Comment