IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಪಾಕಿಸ್ತಾನದ ಸೆನೆಟ್‍ಗೆ ಆಯ್ಕೆಯಾದ ಮೊಟ್ಟಮೊದಲ ಹಿಂದೂ ಮಹಿಳೆ ಕೃಷ್ಣಾಕುಮಾರಿ

ಪಾಕಿಸ್ತಾನದ ಸೆನೆಟ್‍ಗೆ ಆಯ್ಕೆಯಾದ ಮೊಟ್ಟಮೊದಲ ಹಿಂದೂ ಮಹಿಳೆ ಕೃಷ್ಣಾಕುಮಾರಿ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿ ಕೃಷ್ಣಾ ಕುಮಾರಿ ಕೊಹ್ಲಿ (39) ಅವರು ಪಾಕಿಸ್ತಾನದ ಸೆನೆಟ್ಗೆ ಆಯ್ಕೆಯಾದ ಮೊಟ್ಟಮೊದಲ ದಲಿತ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಸ್ಲಿಂ ಬಾಹುಳ್ಯದ ದೇಶದಲ್ಲಿ ಮೇಲ್ಮನೆಗೆ ಹಿಂದೂ ಮಹಿಳೆ ಆಯ್ಕೆಯಾಗಿರುವುದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಸಿಂಧ್ ಪ್ರಾಂತ್ಯದಿಂದ ಮಹಿಳೆಯರಿಗೆ ಮೀಸಲು ಇದ್ದ ಕ್ಷೇತ್ರದಿಂದ ಕೃಷ್ಣಾ ಕುಮಾರಿ ಕೊಹ್ಲಿ ಆಯ್ಕೆಯಾಗಿದ್ದಾರೆ. ಇವರು ಬಿಲ್ವಾಲ್ ಭುಟ್ಟೊ ಝರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸದಸ್ಯೆ. ಇವರ ಆಯ್ಕೆಯನ್ನು ಪಾಕಿಸ್ತಾನದಲ್ಲಿ ಮಹಿಳೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ಆಯಾಮದಿಂದ ಬೃಹತ್ ಮೈಲುಗಲ್ಲು ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೂ ಮುನ್ನ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮೊಟ್ಟಮೊದಲ ಬಾರಿಗೆ ರತ್ನಾ ಭಗವಾನ್ದಾಸ್ ಚಾವ್ಲಾ ಎಂಬ ಹಿಂದೂ ಮಹಿಳೆಯನ್ನು ಮೊದಲ ಬಾರಿಗೆ ಸೆನೆಟ್ ಸದಸ್ಯೆಯಾಗಿ ಆಯ್ಕೆ ಮಾಡಿತ್ತು.

ಕೃಷ್ಣಾಕುಮಾರಿ ಕೊಹ್ಲಿ

ಕೃಷ್ಣಾಕುಮಾರಿ ಕೊಹ್ಲಿ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರ್ ಜಿಲ್ಲೆಯ ನಗರಪಾರ್ಕರ್ ಗ್ರಾಮದವರು. 1979 ಫೆಬ್ರವರಿಯಲ್ಲಿ ಇವರು ಬಡಕುಟುಂಬವೊಂದರಲ್ಲಿ ಜನಿಸಿದರು. ಇವರು ಹಾಗೂ ಇವರ ಕುಟುಂಬದ ಸದಸ್ಯರು ಜೀತದಾಳುಗಳಾಗಿ ಖಾಸಗಿ ಸೆರೆಮನೆಯಲ್ಲಿದ್ದರು, ಉಮೆರ್ಕೋಟ್ ಜಿಲ್ಲೆಯ ಕುರ್ನಿ ಎಂಬಲ್ಲಿ ಜಮೀನ್ದಾರರೊಬ್ಬರ ಬಳಿ ಜೀತಕ್ಕಿದ್ದರು. ಇವರ ಕುಟುಂಬದ ಸದಸ್ಯರು ಬಂಧನದಲ್ಲಿದ್ದಾಗ ಈಕೆ ಮೂರನೇ ತರಗತಿ ವಿದ್ಯಾರ್ಥಿನಿಯಾಗಿ ಕಲಿಯುತ್ತಿದ್ದರು.

ಇವರು ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ರೂಪಲೊ ಕೊಹ್ಲಿಯವರ ಕುಟುಂಬಕ್ಕೆ ಸೇರಿದವರು. ಸಿಂಧ್ ಪ್ರಾಂತ್ಯದ ಮೇಲೆ ನಗರಪಾರ್ಕರ್ ಕಡೆಯಿಂದ 1857ರಲ್ಲಿ ಬ್ರಿಟಿಷ್ ಪಡೆಗಳು ದಾಳಿ ನಡೆಸಿದಾಗ, ಇವರ ವಿರುದ್ಧ ವೀರಾವೇಶದಿಂದ ರೂಪಲೊ ಕೊಹ್ಲಿ ಹೋರಾಡಿದ್ದರು.

ಹದಿನಾರನೇ ವಯಸ್ಸಿನಲ್ಲಿ ಲಾಲ್ಚಂದ್ ಎಂಬುವವರ ಜತೆಗೆ ಈಕೆಯ ವಿವಾಹವಾಯಿತು. ಮದುವೆಯ ಬಳಿಕವೂ ಇವರು ಶಿಕ್ಷಣ ಮುಂದುವರಿಸಿದರು. 2013ರಲ್ಲಿ ಸಿಂಧ್ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ತನ್ನ ಸಹೋದರನ ಜತೆಗೆ ಪಾಕಿಸ್ತಾನ ಪೀಪಲ್ಸ್ಪಾರ್ಟಿಯನ್ನು ಸಾಮಾಜಿಕ ಕಾರ್ಯಕರ್ತರಾಗಿ ಸೇರಿದ ಕೊಹ್ಲಿ ಬಳಿಕ ಬೆರಾನೊ ಯೂನಿಯನ್ ಕೌನ್ಸಿಲ್ ಅಧ್ಯಕ್ಷರಾಗಿ ಚುನಾಯಿತರದರು. ಥಾರ್ ಮತ್ತು ಇತರ ಪ್ರದೇಶಗಳ ತುಳಿತಕ್ಕೊಳಗಾದ ಸಮುದಾಯಗಳ ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದ್ದಾರೆ.

Comment