IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

90ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ಸ್- 2018)

90ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ಸ್- 2018)

ಆಸ್ಕರ್ ಪ್ರಶಸ್ತಿ ಎಂದೇ ವಿಶ್ವಾದ್ಯಂತ ಜನಜನಿತವಾಗಿರುವ 90ನೇ ಅಕಾಡೆಮಿ ಅವಾಡ್ಸ್ ಸಮಾರಂಭ ಅಮೆರಿಕದ ಕ್ಯಾಲಿಫೋನಿರ್ಯಾದ ಲಾಸ್ಎಂಜಲೀಸ್ ಹಾಲಿವುಡ್ ಡೋಲ್ಬಿ ಥಿಯೇಟರ್ನಲ್ಲಿ ಸೋಮವಾರ ನಡೆಎಯಿತು. ಆಸ್ಕರ್ ಪ್ರಶಸ್ತಿಯನ್ನು 24 ವರ್ಗಗಳಲ್ಲಿ ನೀಡಲಾಗುತ್ತದೆ. ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಟ್ರ್ಸ್ ಅಂಡ್ ಸೈನ್ಸ್ ಪ್ರಶಸ್ತಿಯನ್ನು ನೀಡುತ್ತದೆ. 2017 ಅತ್ಯುತ್ತಮ ಚಿತ್ರಗಳಿಗೆ ಗೌರವ ಸಲ್ಲುತ್ತದೆ.

" ಶೇಪ್ ಆಫ್ ವಾಟರ್" ಗರಿಷ್ಠ ಸಂಖ್ಯೆಯ ಅಂದರೆ ನಾಲ್ಕು ಪ್ರಶಸ್ತಿಗಳನ್ನು ಪಡೆದಿದೆ. ಗರಿಷ್ಠ ಸಂಖ್ಯೆಯ ಅಂದರೆ 13 ವರ್ಗಗಳಲ್ಲಿ ಇದು ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಎಂಟು ವರ್ಗಗಳಲ್ಲಿ ಪ್ರಶಸ್ತಿಗೆ ನಾಮಕರಣಗೊಂಡಿದ್ದ ಡುನ್ಕಿರ್ಕ್ ಹಾಗೂ ಥ್ರಿ ಬಿಲ್ಬೋಡ್ರ್ಸ್ ಔಟ್ಸೈಟ್ ಎಬ್ಬಿಂಗ್, ಮಿಸ್ಸೋರಿ ಏಳು ವರ್ಗಗಳಲ್ಲಿ ನಾಮನಿರ್ದೇಶನಗೊಂಡಿತ್ತು.

ವಿಜೇತರ ಪಟ್ಟಿ ಹೀಗಿದೆ.

ಅತ್ಯುತ್ತಮ ಚಿತ್ರ: ಶೇಪ್ ಆಫ್ ವಾಟರ್

ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್ಡೊರ್ಮಂಡ್ (ಥ್ರಿ ಬಿಲ್ಬೋಡ್ರ್ಸ್ ಔಟ್ಸೈಡ್ ಎಬ್ಬಿಂಗ್, ಮಿಸ್ಸೋರಿ ಚಿತ್ರದಲ್ಲಿಮಿಲ್ಡ್ರೆಡ್ ಹಯಾಸ್ ಪಾತ್ರಕ್ಕಾಗಿ)

ಉತ್ತಮ ನಟ: ಗ್ರೇ ಓಲ್ಡ್ಮನ್ (ಡಾರ್ಕೆಸ್ಟ್ ಅವರ್ ಚಿತ್ರದ ವಿನ್ಸ್ಟನ್ ಚರ್ಚಿಲ್ ಪಾತ್ರಕ್ಕೆ)

ಉತ್ತಮ ನಿರ್ದೇಶಕ ಗುಲೆರ್ಮೊ ಡೆಲ್ ಟೊರೊ ( ಶೇಪ್ ಆಫ್ ವಾಟರ್)

ಉತ್ತಮ ಪೋಷಕ ನಟಿ: ಅಲಿಸನ್ ಜಾನ್ನಿ ( ತೋನಿಯಾ ಚಿತ್ರಕ್ಕಾಗಿ)

ಉತ್ತಮ ಪೋಷಕ ನಟ: ಸ್ಯಾಮ್ ರಾಕ್ವೆಲ್ (ಥ್ರಿ ಬಿಲ್ಬೋಡ್ರ್ಸ್ ಔಟ್ಸೈಡ್ ಎಬ್ಬಿಂಗ್, ಮಿಸ್ಸೋರಿ).

 

ಉತ್ತಮ ಚಿತ್ರಕಥೆ: ಗೆಟ್ ಔಟ್- ಜೋರ್ಡನ್ ಪೀಲೆ

ಉತ್ತಮ ರೂಪಾಂತರಿತ ಚಿತ್ರಕಥೆ: ಕಾಲ್ ಮಿ ಬೈ ಯುವರ್ ನೇಮ್ (ಆಂಡ್ರೆ ಅಸಿಮನ್ ಕಾದಂಬರಿ ಆಧರಿತ ಜೇಮ್ಸ್ ಐವರಿ ಬರೆದ ಚಿತ್ರಕಥೆ).

ಅತ್ಯುತ್ತಮ ಸಿನಿಮೆಟೋಗ್ರಫಿ: ಬ್ಲೇಡ್ ರನ್ನರ್ 2049- ರೋಜರ್ .ಡೇಕಿನ್ಸ್

ಬೆಸ್ಟ್ ಒರಿಜಿನಲ್ ಸ್ಕೋರ್: ಶೇಪ್ ಆಫ್ ವಾಟರ್- ಅಲೆಗ್ಸಾಂಡರ್ ಡೆಸಪ್ಲೆಟ್

ಅತ್ಯುತ್ತಮ ಮೂಲ ಗೀತೆ: ಕೊಕೊ ಚಿತ್ರದ ರಿಮೆಂಬರ್ ಮಿ

ಸೌಂಡ್ ಮಿಕ್ಸಿಂಗ್ ಮತ್ತು ಸೌಂಡ್ ಎಡಿಟಿಂಗ್: ದುಂಕಿರ್ಕ್- ರಿಚರ್ಡ್ ಕಿಂಗ್ ಮತ್ತು ಅಲೆಕ್ಸ್ ಗಿಬ್ಸನ್.

ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ಫೆಂಟಾಸ್ಟಿಕ್ ವುಮೆನ್ (ಚಿಲಿ) ಸ್ಪ್ಯಾನಿಷ್ ಭಾಷೆ.

ಉತ್ತಮ ಚಿತ್ರ ಸಂಪಾದನೆ: ದುಂಕಿರ್ಕ್

ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್: ಬ್ಲೇಡ್ ರನ್ನರ್-2047 (ರಿಡ್ಲೆ ಸ್ಕಾಟ್).

ಉತ್ತಮ ನಿರ್ಮಾಣ ವಿನ್ಯಾಸ: ಶೇಪ್ ಆಪ್ ವಾಟರ್ (ಡೆನಮ್ ಆಸ್ಟರ್ಬೆರ್ರಿ)

ಸೌಂಡ್ ಮಿಕ್ಸಿಂಗ್: ದುಂಕಿರ್ಕ್

ಉತ್ತಮ ಆನಿಮೇಷನ್ ಚಿತ್ರ: ಕೋಕೊ (ಡಿಸ್ನಿ-ಪಿಕ್ಸರ್).

ಉತ್ತಮ ಸಾಕ್ಷ್ಯಚಿತ್ರ: ಇಕಾರಸ್ (ನೆಟ್ಫ್ಲಿಕ್ಸ್)

ಉತ್ತಮ ಆನಿಮೇಷನ್ ಕಿರುಚಿತ್ರ: ಡಿಯರ್ ಬಾಸ್ಕೆಟ್ಬಾಲ್

ಉತ್ತಮ ಸಾಕ್ಷ್ಯಚಿತ್ರ- ಕಿರು ವಿಷಯ: ಹೆವನ್ ಈಸ್ ಟ್ರಾಫಿಕ್ ಜಾಮ್ ಆನ್ 405.

ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ಸೈಲೆಂಟ್ ಚೈಲ್ಡ್.

ಉತ್ತಮ ಪ್ರಸಾದನ ಮತ್ತು ಕೇಶವಿನ್ಯಾಸ: ಡಾರ್ಕೆಸ್ಟ್ ಅವರ್

ಉತ್ತಮ ವಸ್ತ್ರವಿನ್ಯಾಸ: ಪ್ಯಾಂಥಮ್ ಥ್ರೆಡ್.

ಅಕಾಡೆಮಿ ಅವಾಡ್ರ್ಸ್

ಅಕಾಡೆಮಿ ಅವಾಡ್ರ್ಸ್ ವಿಶ್ವಾದ್ಯಂತ ಆಸ್ಕರ್ಸ್ ಎಂದೇ ಪ್ರಖ್ಯಾತ. ಇದು ಒಟ್ಟು 24 ಪ್ರಶಸ್ತಿಗಳನ್ನು ಒಳಗೊಂಡಿದ್ದು, ಅಮೆರಿಕನ್ ಚಿತ್ರೋದ್ಯಮದಲ್ಲಿ ಹಿಂದಿನ ವರ್ಷ ಮಾಡಿದ ಉತ್ತಮ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇದನ್ನು ವಾರ್ಷಿಕವಾಗಿ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಟ್ರ್ಸ್ ಅಂಡ್ ಸೈನ್ಸ್ (ಎಎಂಪಿಎಎಸ್) ನಿಡುತ್ತದೆ. ಪ್ರಶಸ್ತಿಯನ್ನು ಮೊದಲ ಬಾರಿಗೆ 1929ರಲ್ಲಿ ನೀಡಲಾಗಿತ್ತು. ವಿಜೇತರಿಗೆ ಅಕಾಡೆಮಿ ಅವಾಡ್ರ್ಸ್ ಆಫ್ ಮೆರಿಟ್ (ಆಸ್ಕರ್ ಪ್ರಶಸ್ತಿ) ನೀಡಿ ಗೌರವಿಸಲಾಗುತ್ತದೆ.

Comment