IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕ್ರಿಪ್ಟೊ ಕರೆನ್ಸಿಯನ್ನು ಕಾನೂನುಬದ್ಧ ಚಲಾವಣೆಯ ಕರೆನ್ಸಿಯಾಗಿ ಮಾನ್ಯ: ಮಾರ್ಷಲ್ ದ್ವೀಪ

ಕ್ರಿಪ್ಟೊ ಕರೆನ್ಸಿಯನ್ನು ಕಾನೂನುಬದ್ಧ ಚಲಾವಣೆಯ ಕರೆನ್ಸಿಯಾಗಿ ಮಾನ್ಯ: ಮಾರ್ಷಲ್ ದ್ವೀಪ

ಕ್ರಿಪ್ಟೊ ಕರೆನ್ಸಿಯನ್ನು ಕಾನೂನುಬದ್ಧ ಚಲಾವಣೆಯ ಕರೆನ್ಸಿಯಾಗಿ ಮಾನ್ಯ ಮಾಡಿದ ವಿಶ್ವದ ಮೊಟ್ಟಮೊದಲ ದೇಶ ಎಂಬ ಹೆಗ್ಗಳಿಕೆಗೆ ಪೆಸಿಫಿಕ್ ಸಾಗರದ ಮಾರ್ಷಲ್ ದ್ವೀಪ ಪಾತ್ರವಾಗಿದೆ. ಇದು ದೇಶದಲ್ಲಿ ಪಾರದರ್ಶಕ ಕ್ರಿಪ್ಟೊ ವಿತ್ತ ವ್ಯವಸ್ಥೆಯನ್ನು ಸ್ವೀಕರಿಸಲು ನಿರ್ಧರಿಸಿದೆ. ಸಂಬಂಧ ದೇಶದ ಪಾರ್ಲಿಕೆಂಟ್ ಹೊಸ ಕಾನೂನಿಗೆ ಅನುಮೋದನೆ ನೀಡಿದೆ. ಸೊವರಿನ್ ಹೆಸರಿನ ಡಿಜಿಟನ್ ಕರೆನ್ಸಿ ಎಸ್ಓವಿ ಎಂಬ ಸಂಕೇತವನ್ನು ಹೊಂದಿದೆ. ಬಿಲ್ ಪಾವತಿ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ನಗದು ಹಣವನ್ನು ಕ್ರೋಢೀಕರಿಸುವ ಉದ್ದೇಶದಿಂದ ಡಿಜಿಟಲ್ ಕರೆನ್ಸಿಗೆ ಚಾಲನೆ ನೀಡಲಾಗಿದೆ.

ಡಿಜಿಟಲ್ ಕರೆನ್ಸಿ ಆರಂಭಿಸುವ ಸಲುವಾಗಿ ಮಾರ್ಷಲ್ ದ್ವೀಪ, ಇಸ್ರೇಲಿನ ಹಣಕಾಸು ತಂತ್ರಜ್ಞಾನ ಸ್ಟಾರ್ಟ್ ಅಪ್ ಕಂಪನಿಯಾದ ನೀಮಾ ಜತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಪಾವತಿಗೆ ಕ್ರಿಪ್ಟೊ ಕರೆನ್ಸಿಗೆ ಕೂಡಾ ಅಮೆರಿಕನ್ ಡಾಲರ್ಗೆ ಸಮಾನವಾದ ಸ್ಥಾನಮಾನ ಇರುತ್ತದೆ. ಆರಂಭಿಕ ಕರೆನ್ಸಿ ಆಫರಿಂಗ್ (ಐಸಿಓ)ದಲ್ಲಿ 24 ದಶಲಕ್ಷ ಎಸ್ಓವಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದನ್ನು ದೇಶದಲ್ಲಿ ಕಾನೂನುಬದ್ಧ ಚಲಾವಣೆಗೆ ನೀಡಲಾಗುತ್ತದೆ. ಪ್ರಸ್ತುತ ಅರ್ಥ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ಅಮೆರಿಕನ್ ಡಾಲರ್ ಕೂಡಾ ಮುಂದುವರಿಯಲಿದೆ.

ಮಾರ್ಷಲ್ ದ್ವೀಪ ಬಿಡುಗಡೆ ಮಾಡುವ ಎಸ್ಓವಿ, ಬಿಟ್ಕಾಯಿನ್ ಸೇರಿದಂತೆ ಇತರ ಕ್ರಿಪ್ಟೊ ಕರೆನ್ಸಿಗಳಿಗಿಂತ ಭಿನ್ನವಾಗಿದ್ದು, ಇದನ್ನು ಅಧಿಕೃತ ಹಾಗೂ ಕಾನೂನುಬದ್ಧ ಚಲಾವಣೆಯ ಕರೆನ್ಸಿ ಎಂದು ಪರಿಗಣಿಸಲಾಗಿದೆ ಮತ್ತು ಸರ್ಕಾರ ಇದಕ್ಕೆ ಪ್ರಾಯೋಜಕತ್ವ ನೀಡಿದೆ. ಎಸ್ಓವಿಯನ್ನು ಅನುಮತಿ ಪಡೆದ ಶಿಷ್ಟಾಚಾರಕ್ಕೆ ಅನುಗುಣವಾಗಿ ಚಲಾವಣೆಗೆ ತರಲಾಗುತ್ತದೆ ಹಾಗೂ ಇದಕ್ಕೆ ಯೋಕ್ವೆ ಎಂದು ಹೆಸರಿಸಲಾಗಿದೆ. ಯೋಕ್ವೆ ಎಂದರೆ ಸ್ಥಳೀಯ ದ್ವೀಪಭಾಷೆಯಲ್ಲಿ ಹಲೋ ಎಂಬರ್ಥ. ಡಿಜಿಟಲ್ ಕರೆನ್ಸಿಯ ಬಳಕೆದಾರರು ತಮ್ಮ ಅಧಿಕೃತತೆಯನ್ನು ದೃಢೀಕರಿಸಿ, ಗುರುತು ಬಹಿರಂಗಪಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಅನಾಮಧೇಯತೆ ಮಾಯವಾಗಲಿದ್ದು, ಇದರಿಂದ ಕ್ರಿಪ್ಟೋಕರೆನ್ಸಿಗಳು ಇತರ ಸರ್ಕಾರಗಳಿಂದಲೂ ಬೆಂಬಲ ಪಡೆಯಲು ಸಹಾಯಕವಾಗಲಿದೆ.

ಆರಂಭಿಕ ಹಂತದಲ್ಲಿ 60 ಲಕ್ಷ ಎಸ್ಓವಿಗಳನ್ನು ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ಮಾರಾಟ ಮಾಡಲಾಗುತ್ತದೆ ಹಾಗೂ ಇದರಿಂದ ಬಂದ ಹಣವನ್ನು ಬಜೆಟ್ ಮತ್ತು ಯೋಜನೆಗಳ ಹೂಡಿಕೆಗೆ ಬಳಸಲಾಗುತ್ತದೆ. ಜಾಗತಿಕ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡುವ ಯೋಜನೆಗಳಿಗೆ ಇದು ಬಳಕೆಯಾಗಲಿದೆ ಹಾಗೂ ಇದರ ಜತೆಗೆ ಅಮೆರಿಕದ ಅಣ್ವಸ್ತ್ರ ದಾಳಿಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನೆರವು ನೀಡಲು ಕೂಡಾ ಇದನ್ನು ಬಳಸಲಾಗುತ್ತದೆ. ಇದು 24 ಲಕ್ಷ ಎಸ್ಓವಿಗಳನ್ನು ತನ್ನ ನಿವಾಸಿಗಳಿಗೂ ಹಸ್ತಾಂತರಿಸಲಿದ್ದು, ತೆರಿಗೆ ಪಾವತಿಯಿಂದ ಹಿಡಿದು ದಿನಸಿ ಖರೀದಿವರೆಗೆ ಯಾವುದೇ ಉದ್ದೇಶಕ್ಕೆ ಇದನ್ನು ಬಳಸಬಹುದಾಗಿದೆ.

ಹಿನ್ನೆಲೆ

ಮಾರ್ಷಲ್ ದ್ವೀಪವು ಅಮೆರಿಕದ ಜತೆ ನಿಕಟವಾಗಿ ಜೋಡಿಕೊಂಡಿದ್ದು, ಕಾಂಪ್ಯಾಕ್ಟ್ ಆಫ್ ಫ್ರೀ ಅಸೋಸಿಯೇಷನ್ ಅನ್ವಯ ಇದು ಜೋಡಿಸಿಕೊಂಡಿದೆ. ಇದು ಅಮೆರಿಕನ್ ಡಾಲರನ್ನು ಅಧಿಕೃತ ಕರೆನ್ಸಿಯಾಗಿ ಬಳಸಿಕೊಳ್ಳುತ್ತಿದೆ. ಕಾಂಪ್ಯಾಕ್ಟ್ ಅಸೋಸಿಯೇಶನ್ ಅಡಿಯಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನವು ಮಾರ್ಷಲ್ ದ್ವೀಪಕ್ಕೆ ಪ್ರತಿ ವರ್ಷ 70 ದಶಲಕ್ಷ ಡಾಲರ್ ನೆರವು ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ದ್ವೀಪದ ಕ್ವಜಲೀನ್ ಅಟೋಲ್ ಎಂಬಲ್ಲಿ ಸೇನಾ ನೆಲೆಯನ್ನು ನಿರ್ವಹಿಸುತ್ತಿದೆ. ವೆನೆಜುವೆಲಾ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕ್ರಿಪ್ಟೊಕರೆನ್ಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಪೆಟ್ರೊ ಎಂದು ಹೆಸರು. ಇದಕ್ಕೆ ಕಚ್ಚಾ ತೈಲ ನಿಕ್ಷೇಪದ ಬೆಂಬಲ ನಿಗದಿಪಡಿಸಲಾಗಿದೆ. ಆದರೆ ಇದನ್ನು ಕಾನೂನುಬದ್ಧ ಚಲಾವಣೆಗೆ ಬಿಡುಗಡೆ ಮಾಡಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

Comment