IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮೂರು ಸೇವೆಗಳ 9435 ಕೋಟಿ ರೂಪಾಯಿ ಖರೀದಿಗೆ ಡಿಎಸಿ ಒಪ್ಪಿಗೆ

ಮೂರು ಸೇವೆಗಳ 9435 ಕೋಟಿ ರೂಪಾಯಿ ಖರೀದಿಗೆ ಡಿಎಸಿ ಒಪ್ಪಿಗೆ

ಭಾರತದ ವಾಯುಪಡೆ, ಸೇನಾಪಡೆ ಮತ್ತು ನೌಕಾಪಡೆಗೆ ಒಟ್ಟು 9435 ಕೋಟಿ ರೂಪಾಯಿ ಅಂದಾಜು ವೆಚ್ಚದ ಅಗತ್ಯ ಸಾಧನ ಸಲಕರಣೆಗಳನ್ನು ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ.

ಪ್ರಸ್ತಾವನೆಯಲ್ಲಿ ಪ್ರಮುಖವಾಗಿ 41 ಸಾವಿರ ಲಘು ಮೆಷಿನ್ ಗನ್ (ಎಲ್ಎಂಜಿ) ಹಾಗೂ 3.5 ಲಕ್ಷ ಕ್ಲೋಸ್ ಕ್ವಾರ್ಟರ್ ಬ್ಯಾಟಲ್ ಕಾರ್ಬೈನ್ಗಳು, ಅಧಿಕ ಸಾಮಥ್ರ್ಯದ ರೇಡಿಯೊ ರಿಲೇ (ಎಚ್ಸಿಆರ್ಆರ್) ಮತ್ತು ಎರಡು ಮಾಲಿನ್ಯ ನಿಯಂತ್ರಣ ನೌಕೆ (ಪಿಸಿವಿ) ಖರೀದಿ ಸೇರಿದೆ. ರಕ್ಷಣಾ ಖರೀದಿ ಮಂಡಳಿಯು ರಕ್ಷಣಾ ಸಚಿವಾಲಯದ ಅತ್ಯುನ್ನತ ಖರೀದಿ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾಗಿದೆ.

ಪ್ರಮುಖ ಅಂಶಗಳು

ಎಲ್ಎಂಜಿ ಹಾಗೂ ಸಿಕ್ಯೂಬಿ ಕಾರ್ಬೈನ್: ಕ್ಲೋಸ್ ಕ್ವಾರ್ಟರ್ ಬ್ಯಾಟಲ್ ಕಾರ್ಬೈನ್ಗಳನ್ನು 4607 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಖರೀದಿಸಲಾಗುತ್ತದೆ ಹಾಗೂ ಲಘು ಮೆಷಿನ್ಗನ್ಗಳನ್ನು 3000 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗುತ್ತದೆ. ಧೀರ್ಘ ಅವಧಿ ತೆಎಗೆದುಕೊಳ್ಳುವ ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿ ಅನುಮೋದನೆ ಮೊದಲ ಹೆಜ್ಜೆಯಾಗಿದೆ. ಬಹಳಷ್ಟು ವಹಿವಾಟುಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೆ ಹಲವು ವರ್ಷಗಳೇ ಬೇಕಾಗುತ್ತವೆ. ಒಟ್ಟು ಖರೀದಿಯಲ್ಲಿ ಶೇಕಡ 75ರಷ್ಟು ಖರೀದಿಯನ್ನು ಭಾರತೀಯ ಕೈಗಾರಿಕಗಳಿಂದಲೇ ಮಾಡಬೇಕಾಗುತ್ತದೆ. ಖರೀದಿ ಮತ್ತು ಉತ್ಪಾದನೆ (ಇಂಡಿಯಾ) ವರ್ಗದಲ್ಲಿ ಖರೀದಿ ಮಾಡಲಾಗುತ್ತದೆ. ಉಳಿದ ಪಾಲನ್ನು ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಓಎಫ್ಬಿ) ಮೂಲಕ ಮಾಡಲಾಗುತ್ತದೆ. ಇದು ರಕ್ಷಣಾ ಪಡೆಗಳು ಗಡಿಭಾಗದಲ್ಲಿ ನಿಯೋಜಿಸಿರುವ ಪಡೆಗಳ ತಕ್ಷಣದ ಅಗತ್ಯತೆಗಳನ್ನು ಪೂರೈಸಲು ಅನುಕೂಲವಾಗಲಿದೆ. ಇದು ಭಾರತದ ಎಲ್ಲ ಸಶಸ್ತ್ರ ಪಡೆಗಳಿಗೆ ಇರುವ ಸಣ್ಣ ಶಸ್ತ್ರಾಸ್ತ್ರಗಳ ಕೊರತೆಯನ್ನು ನೀಗಿಸುವಲ್ಲಿ ಕೂಡಾ ಸಹಕಾರಿಯಾಗಲಿದೆ.

ಅಧಿಕ ಸಾಮಥ್ರ್ಯದ ರೇಡಿಯೊ ರಿಲೇ (ಎಚ್ಸಿಆರ್ಆರ್): ಇದನ್ನು ಭಾರತೀಯ ಸೇನಾಪಡೆ ಮತ್ತು ವಾಯುಪಡೆಗೆ ಅಗತ್ಯದಷ್ಟು ಪ್ರಮಾಣದಲ್ಲಿ ಖರೀದಿಸಲಾಗುತ್ತದೆ. ಇದರ ಅಂದಾಜು ವೆಚ್ಚ ಸುಮಾರು 1092 ಕೋಟಿ ರೂಪಾಯಿಗಳು. ಅಧಿಕ ಸಾಮಥ್ರ್ಯದ ರೇಡಿಯೊ ರಿಲೇ (ಎಚ್ಸಿಆರ್ಆರ್) ಯಾವುದೇ ವೈಫಲ್ಯಕ್ಕೆ ಅವಕಾಶವಿಲ್ಲದ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂವಹನವನ್ನು ವಿಸ್ತರಿತ ಬ್ಯಾಂಡ್ವಿಡ್ತ್ ತೆಗೆ ಆಯಕಟ್ಟಿನ ಯುದ್ಧ ಕ್ಷೇತ್ರಗಳಲ್ಲಿ ಅಳವಡಿಸಲು ಅನುಕೂಲವಾಗಲಿದೆ.

ಮಾಲಿನ್ಯ ನಿಯಂತ್ರಣ ನೌಕೆ (ಪಿಸಿವಿ): ಭಾರತೀಯ ಕರಾವಳಿ ಕಾವಲು ಪಡೆ ಎರಡು ಮಾಲಿನ್ಯ ನಿಯಂತ್ರಣ ಹಡಗುಗಳನ್ನು ಸುಮಾರು 673 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಖರೀದಿಸಲಿದೆ. ಮಾಲಿನ್ಯ ನಿಯಂತ್ರಣ ಹಡಗು ಮಾಲಿನ್ಯ ನಿಯಂತ್ರಣ ಕಾರ್ತಾಚರಣೆಯನ್ನು ಕೈಗೊಳ್ಳಲಿದೆ ಹಾಗು ಇದು ಗಸ್ತು, ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಸಾಮಥ್ರ್ಯ ಹೊಂದಿದೆ. ಸಮುದ್ರದಲ್ಲಿ ಸೀಮಿತ ರಕ್ಷಣೆ ಮತ್ತು ಅಗ್ನಿಶಾಮಕ ಕಾರ್ಯಾಚರಣೆಯನ್ನೂ ಕೈಗೊಳ್ಳಲು ಶಕ್ತವಾಗಿರುತ್ತವೆ. ಇದನ್ನು ಭಾರತೀಯ ಶಿಪ್ಯಾರ್ಡ್ಗಳಲ್ಲಿ ಸುಮಾರು 673 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ. ಇದು ಭಾರತದ ಕರಾವಳಿ ಕಾವಲು ಪಡೆಯ ಮಾಲಿನ್ಯ ನಿಯಂತ್ರಣ ಕ್ರಮವನ್ನು ಕರಾವಳಿ ತೀರದಲ್ಲಿ ಮತ್ತು ದ್ವೀಪ ಪ್ರದೇಶಗಳಲ್ಲಿ ಕೈಗೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತವೆ.

Comment