IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಎಫ್‍ಎಟಿಎಫ್ ಬೂದುಪಟ್ಟಿಗೆ ಸೇರ್ಪಡೆಯನ್ನು ಒಪ್ಪಿಕೊಂಡ ಪಾಕಿಸ್ತಾನ

ಎಫ್‍ಎಟಿಎಫ್ ಬೂದುಪಟ್ಟಿಗೆ ಸೇರ್ಪಡೆಯನ್ನು ಒಪ್ಪಿಕೊಂಡ ಪಾಕಿಸ್ತಾನ

ಪ್ಯಾರೀಸ್ನಲ್ಲಿ ಇತ್ತೀಚೆಗೆ ನಡೆದ ಹಣಕಾಸು ಕಾರ್ಯಪಡೆ ಸಮಿತಿಯ ಅಧಿವೇಶನದಲ್ಲಿ ತನ್ನನ್ನು ಭಯೋತ್ಪಾದಕರಿಗೆ ಹಣ ನೀಡುತ್ತಿರುವ ಸಂಶಯದ ಮೇರೆಗೆ ನಿಗಾ ವಹಿಸುವ ಸಂಬಂಧ 2018 ಜೂನ್ನಲ್ಲಿ ಬೂದು ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎನ್ನುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಆದರೆ ಬೂದು ಪಟ್ಟಿಯಿಂದ ಕಪ್ಪುಪಟ್ಟಿಗೆ ಪಾಕಿಸ್ತಾವನ್ನು ಸೇರಿಸಲಾಗುತ್ತಿದೆ ಎಂಬ ವದಂತಿಯನ್ನು ಅಲ್ಲಗಳೆದಿದೆ. ಕ್ರಿಯಾಯೋಜನೆಯನ್ನು ಪರಸ್ಪರ ಒಪ್ಪಿಕೊಂಡ ಬಳಿಕ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಕಪ್ಪುಪಟ್ಟಿಯಲ್ಲಿ ಪ್ರಧಾನವಾಗಿ ಕ್ರಿಯಾಯೋಜನೆ ಪರಿಶೀಲನೆ ವಿಚಾರದಲ್ಲಿ ಸಹಕಾರ ನೀಡದ ದೇಶಗಳನ್ನು ಸೇರಿಸಲಾಗುತ್ತದೆ. ಇದಕ್ಕೂ ಮುನ್ನ ಪಾಕಿಸ್ತಾನ 2012ರಿಂದ 2015ರವರೆಗೆ ಎಫ್ಎಟಿಎಫ್ ಬೂದು ಪಟ್ಟಿಯಲ್ಲಿ ಇತ್ತು. ಬೂದು ಪಟ್ಟಿಯಲ್ಲಿ ಪಾಕಿಸ್ತಾನವನ್ನು ಹೆಸರಿಸಿರುವುದರಿಂದ ಪಾಕಿಸ್ತಾನದ ಪ್ರತಿಯೊಂದು ಹಣಕಾಸು ವ್ಯವಹಾರವನ್ನೂ ಎಫ್ಎಟಿಎಫ್ ಮೇಲ್ವಿಚಾರಣೆ ನಡೆಸಲಿದೆ. ಅಂತರರಾಷ್ಟ್ರೀಯ ಮೇಲ್ವಿಚಾರಣೆ ಸಮಿತಿ 2018 ಜೂನ್ವರೆಗೆ ಮೇಲ್ವಿಚಾರಣೆ ನಡೆಸಲಿದೆ. ಹಣ ದುರುಪಯೋಗ ಮತ್ತು ಉಗ್ರರಿಗೆ ಹಣಕಾಸು ನೆರವು ನಿಬಂಧನೆಯ ಬದ್ಧತೆಯ ಬಗ್ಗೆ ನಿಗಾ ವಹಿಸಲಾಗುತ್ತದೆ.

ಹಿನ್ನೆಲೆ

2018 ಫೆಬ್ರವರಿಯಲ್ಲಿ ನಡೆದ ಎಫ್ಎಟಿಎಫ್ ಅಧಿವೇಶನದಲ್ಲಿ ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್, ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದವು. ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳನ್ನು ಅದರಲ್ಲೂ ಪ್ರಮುಖವಾಗಿ ಹಕ್ಕಾನಿ ನೆಟ್ವರ್ಕ್ ಮತ್ತು ಇದಕ್ಕೆ ಸೌಲಭ್ಯ ಕಲ್ಪಿಸಿಕೊಡುವ ಸಂಸ್ಥೆಗಳ ವಿರುದ್ಧ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಪಟ್ಟಿಗೆ ಸೇರಿಸಲು ಇತರ ದೇಶಗಳು ಪಟ್ಟು ಹಿಡಿದಿದ್ದವು. ಕಾರಣದಿಂದ ಎಫ್ಎಟಿಎಫ್, ಪಾಕಿಸ್ತಾನವನ್ನು ಮತ್ತೆ ಬೂದು ಪಟ್ಟಿಗೆ ಸೇರಿಸಿದೆ. ಇದರ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರತಿಯೊಂದು ಕಾರ್ಯಚಟುವಟಿಕೆಗಳು ಕುಡಾ ಅಂತರರಾಷ್ಟ್ರೀಯ ಸಹಕಾರ ಪರಾಮರ್ಶೆ ಗುಂಪಿನ ಸೂಕ್ಷ್ಮ ಪರಿಶೀಲನೆಗೆ ಒಳಪಡಲಿವೆ. ಬಗ್ಗೆ ಅಂತಿಮ ನಿರ್ಧಾರವನ್ನು 2018 ಜೂನ್ನಲ್ಲಿ ನಡೆಯುವ ಅಧಿವೇಶನದಲ್ಲಿ ಕೈಗೊಳ್ಳಲಾಗುತ್ತದೆ. ಎಫ್ಎಟಿಎಫ್ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿದ್ದು, 37 ಸದಸ್ಯರ ಗುಂಪಿನಲ್ಲಿ ಇದಕ್ಕೂ ಹಿಂದಿನ ದಿನ ರಹಸ್ಯ ಸಭೆ ನಡೆಸಲಾಗಿತ್ತು.

ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್)

ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್)ಯಯು ಅಂತರ ಸರ್ಕಾರಿ ಸಂಸ್ಥೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ಅವ್ಯವಹಾರ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವ ಉದ್ದೇಶದಿಂದ ಇದು ರಚನೆಯಾಗಿದೆ. ಇದನ್ನು 1989ರಲ್ಲಿ ಜಿ7 ಶೃಂಗಸಭೆಯ ವೇಳೆ ಪ್ಯಾರೀಸ್ನಲ್ಲಿ ರಚಿಸಲಾಗಿತ್ತು. ಹಣಕಾಸು ಅವ್ಯವಹಾರ ಹಾಗೂ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯನ್ನು ರಚಿಸಲಾಗಿತ್ತು. ಭಾರತ ಸೇರಿದಂತೆ 39 ಸದಸ್ಯದೇಶಗಳನ್ನು ಇದು ಒಳಗೊಂಡಿದೆ. ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಕಾರ್ಯಾಲಯ ಪ್ಯಾರೀಸ್ ಓಇಸಿಡಿ ಕೇಂದ್ರ ಕಚೇರಿಯಲ್ಲಿದೆ. ಆರಂಭಿಕವಾಗಿ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಹಣಕಾಸು ಅವ್ಯವಹಾರವನ್ನು ತಡೆಯುವ ನೀತಿಗಳನ್ನು ಅಭಿವೃದ್ಧಿಪಡಿಸುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ 2001ರಲ್ಲಿ ಇದರ ಉದ್ದೇಶವನ್ನು ಉಗ್ರರಿಗೆ ಹಣಕಾಸು ನೆರವು ತಡೆಯುವ ಕಾರ್ಯಕ್ಕೂ ವಿಸ್ತರಿಸಲಾಯಿತು.

ಕಾರ್ಯಸೂಚಿ

ಹಣಕಾಸು ಅವ್ಯವಹಾರವನ್ನು ತಡೆಯುವ ಸಲುವಾಗಿ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ಎಫ್ಎಟಿಎಫ್ ಕಾನೂನು, ನಿಯಂತ್ರಣ ಮತ್ತು ಕಾರ್ಯಾಚರಣೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಉತ್ತೇಜಿಸುತ್ತದೆ ಹಾಗೂ ಇದಕ್ಕೆ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಜತೆಗೆ ಅಂತರರಾಷ್ಟ್ರೀಯ  ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಅಪಾಯವಾಗುವ ಇತರ ಸಂಬಂಧಿತ ವಂಚನೆಗಳ ಬಗ್ಗೆ ಕೂಡಾ ಇದು ತನಿಖೆ ನಡೆಸುತ್ತದೆ.

ಕಾರ್ಯಗಳು

  • ಹಣಕಾಸು ದುರ್ಬಳಕೆ ಮತ್ತು ಉಗ್ರರಿಗೆ ನೆರವು ನೀಡುವುದನ್ನು ತಡೆಯಲು ಅಗತ್ಯ ಅಂತರರಾಷ್ಟ್ರೀಯ ಗುಣಮಟ್ಟವನ್ನು ನಿಗದಿಪಡಿಸುವುದು.
  • ಎಫ್ಎಟಿಎಫ್ ಮಾನದಂಡಗಳಿಗೆ ಅನುಗುಣವಾಗಿ ದೇಶಗಳು ಬದ್ಧವಾಗಿವೆಯೇ ಎನ್ನುವುದನ್ನು ಮೌಲ್ಯಮಾಪನ ಮಾಡುವುದು.
  • ಹಣಕಾಸು ಅವ್ಯವಹಾರ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುವ ವಿಧಾನ, ಪ್ರವೃತ್ತಿ ಮತ್ತು ತಂತ್ರಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವುದು.
  • ಹೊಸ ಹಾಗೂ ರೂಪುಗೊಳ್ಳುತ್ತಿರುವ ಅಪಾಯಗಳಿಗೆ ಸ್ಪಂದಿಸುವುದು. ಉದಾಹರಣೆಗೆ ಅಣ್ವಸ್ತ್ರ, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳಿಗೆ ಹೆಚ್ಚಿನ ಹಣಕಾಸು ಮೀಸಲಿಡುವ ದೇಶಗಳ ಬಗ್ಗೆ ನಿಗಾ ವಹಿಸುವುದು ಕೂಡಾ ಇದರ ಕಾರ್ಯವಾಗಿದೆ.

Comment