IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಬೇಳೆಕಾಳು & ಎಣ್ಣೆ ಬೀಜದ ಬ್ಯಾಂಕ್ ಗ್ಯಾರೆಂಟಿ ಮೊತ್ತ ದುಪ್ಪಟ್ಟು

ಬೇಳೆಕಾಳು & ಎಣ್ಣೆ ಬೀಜದ ಬ್ಯಾಂಕ್ ಗ್ಯಾರೆಂಟಿ ಮೊತ್ತ ದುಪ್ಪಟ್ಟು

ಬೇಳೆಕಾಳು ಮತ್ತು ಎಣ್ಣೆಬೀಜಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಕೂಲವಾಗುವಂತೆ, ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆಯುವ ಮಿತಿಯನ್ನು ಹಾಲಿ ಇರುವ 95000 ಕೋಟಿಯಿಂದ 19 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಅನುಮೋದಿಸಿದೆ. ಬೇಳೆಕಾಳುಗಳು ಮತ್ತು ಎಣ್ಣೆಬೀಜವನ್ನು ಬೆಂಬಲಬೆಲೆ ಯೋಜನೆಯಡಿ ಖರೀದಿಸಲು ಕಾಯಂಗೊಳಿಸುವಿಕೆ ಮತ್ತು ವಿಸ್ತರಣೆ ನೆರವಾಗಲಿದೆ.

ಹಿನ್ನೆಲೆ

ಇದರ ಜತೆಗೆ ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟ (ಎಸ್ಎಫ್ಎಸಿ)ಗೆ 45 ಕೋಟಿ ರೂಪಾಯಿಗಳ ಸರ್ಕಾರಿ ಖಾತ್ರಿ ನೀಡುವ ಪ್ರಸ್ತಾವಕ್ಕೂ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. ಒಕ್ಕೂಟದ ಹೊಣೆಗಾರಿಕೆ ಮತ್ತು ಕ್ಲೇಮ್ಗಳ ವಿಲೇವಾರಿಯನ್ನು ಮಾಡಲು ಇದು ನೆರವಾಗಲಿದೆ. ಖಾತ್ರಿಯನ್ನು ಐದು ವರ್ಷಗಳ ಅವಧಿಗೆ ಅಂದರೆ 2021-22 ವರೆಗೆ ನೀಡಲಾಗುತ್ತದೆ. ಹಾಗೂ ಶೇಕಡ 1 ಸರ್ಕಾರಿ ಖಾತ್ರಿ ಶುಲ್ಕವನ್ನು ಮನ್ನಾ ಮಾಡಲು ನಿರ್ಧರಿಸಿದೆ.

ಬಹುತೇಕ ಎಲ್ಲ ಬೇಳೆಕಾಳು ಹಾಗೂ ಎಣ್ಣೆಬೀಜಗಳ ಮಾರುಕಟ್ಟೆ ದರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಮಟ್ಟಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ, ಸರ್ಕಾರಿ ಖಾತ್ರಿಯಿಂದಾಗಿ, ರೈತರು ಉತ್ಪನ್ನಗಳನ್ನು ಸೂಕ್ತ ಕಾಲದಲ್ಲಿ ಮಾರಾಟ ಮಾಡಲು ಅನುಕೂಲವಾಗಲಿದೆ. ಇಲ್ಲದಿದ್ದರೆ ಮಾರುಕಟ್ಟೆಗೆ ಅತ್ಯಧಿಕ ಮಾಲು ಬರುವ ಸಂದರ್ಭದಲ್ಲಿ ಕಡಿಮೆ ಬೆಲೆಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಅನಿವಾರ್ಯವಾಗುತ್ತದ. ಇದು ರೈತರಿಗೆ ಸೂಕ್ತ ಪ್ರೋತ್ಸಾಹದಾಯಕ ಬೆಲೆಯನ್ನು ನೀಡುವಲ್ಲೂ ನೆರವಾಗಲಿದ್ದು, ಇದು ಕೃಷಿ ಕ್ಷೇತ್ರದಲ್ಲಿ ಅಧಿಕ ಹೂಡಿಕೆ ಮತ್ತು ಉತ್ಪಾದನೆಗೂ ನೆರವಾಗಲಿದೆ. ಇದು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲೂ ಅನುಕೂಲವಾಗಲಿದ್ದು, ನ್ಯಾಯಬದ್ಧ ಬೆಲೆಯಲ್ಲಿ ಹಾಗೂ ಮಧ್ಯವರ್ತಿಗಳ ಕಮಿಷನ್ ಇಲ್ಲದೇ ಕನಿಷ್ಠ ಬೆಲೆಯಲ್ಲಿ ಉತ್ಪನ್ನಗಳು ಗ್ರಾಹಕರಿಗೆ ಸಿಗಲಿವೆ.

ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಫೆಡ್)

ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಫೆಡ್), ದೇಶದಲ್ಲಿ ಕೃಷಿ ಉತ್ಪನ್ನಗಳ ಸಹಕಾರ ಮಾರುಕಟ್ಟೆಯ ಅತ್ಯುನ್ನತ ಸಂಸ್ಥೆಯಾಗಿದೆ. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಇದನ್ನು 1958 ಅಕ್ಟೋಬರ್ನಲ್ಲಿ ಆರಂಭಿಸಲಾಗಿದೆ. ಕೃಷಿ ಉತ್ಪನ್ನಗಳ ವಹಿವಾಟು ಮತ್ತು ಅರಣ್ಯ ಉತ್ಪನ್ನಗಳ ವಹಿವಾಟನ್ನು ದೇಶಾದ್ಯಂತ ಉತ್ತೇಜಿಸುವುದು ಇದರ ಉದ್ದೇಶ. ಇದು ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ.

ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಫೆಡ್) ದೇಶದಲ್ಲಿ ಕೃಷಿ ಉತ್ಪನ್ನಗಳ ಅತಿದೊಡ್ಡ ಖರೀದಿ ಹಾಗೂ ಮಾರುಕಟ್ಟೆ ಏಜೆನ್ಸಿಯಾಗಿದೆ. 2008ರಲ್ಲಿ ಇದು ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ ಎಂಬ ಸರಕು ವಿನಿಮಯ ಮಾರುಕಟ್ಟೆ ಎಂಬ ವೇದಿಕೆಯನ್ನು ನಿರ್ಮಿಸಿದೆ. ಇದು ನಫೆಡ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜೀಸ್ (ಇಂಡಿಯಾ) ಲಿಮಿಟೆಡ್ ಜಂಟಿ ಸಹಭಾಗಿತ್ವದ ಸಂಸ್ಥೆಯಾಗಿದೆ.

Comment