IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುತಿಸಿರುವ 12 ಚಾಂಪಿಯನ್ ಸರ್ವೀಸಸ್ ವಲಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಅವುಗಳ ಸಾಮಥ್ರ್ಯವನ್ನು ಅರಿತುಕೊಳ್ಳುವ ಕ್ರಿಯಾಯೋಜನೆಗೆ ಕೇಂದ್ರ  ಸಚಿವ ಸಂಪುಟ ಅನುಮೋದನೆ ನೀಡಿದೆ.

ಗುರುತಿಸಲ್ಪಟ್ಟ 12 ಕ್ಷೇತ್ರಗಳು

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುತಿಸಿರುವ 12 ಚಾಂಪಿಯನ್ ಸರ್ವೀಸಸ್ ವಲಯಗಳೆಂದರೆ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಸೇವೆಗಳು, ವೈದ್ಯಕೀಯ ಮೌಲ್ಯ ಪ್ರವಾಸ, ಸಾರಿಗೆ ಮತ್ತು ಲಾಜಿಸ್ಟಿಕ್ ಸೇವೆಗಳು, ಪ್ರವಾಸೋದ್ಯಮ ಮತ್ತು ಆತಿಥ್ಯ ಸೇವೆಗಳು, ಲೆಕ್ಕಪತ್ರ ಮತ್ತು ಹಣಕಾಸು ಸೇವೆಗಳು, ದೃಶ್ಯ  ಶ್ರಾವ್ಯ ಸೇವೆ, ಸಂವಹನ ಸೇವೆ, ಕಾನೂನು ಸೇವೆ, ನಿರ್ಮಾಣ ಮತ್ತು ಸಂಬಂಧಿತ ಇಂಜಿನಿಯರಿಂಗ್ ಸೇವೆ, ಪರಿಸರ ಸೇವೆ, ಹಣಕಾಸು ಸೇವೆ ಮತ್ತು ಶಿಕ್ಷಣ ಸೇವೆ.

ಪ್ರಮುಖ ಅಂಶಗಳು

ವಲಯಗಳ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಕೇಂದ್ರ ಸಚಿವ ಸಂಪುಟ ಸೂಚನೆ ನೀಡಿ, ಲಭ್ಯವಿರುವ ಕರಡು ವಲಯವಾರು ಯೋಜನೆಗಳನ್ನು ಬಳಸಿಕೊಳ್ಳಲು ಮತ್ತು ಗುರುತಿಸಲ್ಪಟ್ಟ ಸೇವಾ ವಲಯಗಳ ಯೋಜನೆ ಅಂತಿಮಪಡಿಸಿ ಅನುಷ್ಠಾನಗೊಳಿಸಲು ಕೂಡಾ ಸೂಚನೆ ನೀಡಿದೆ. ಆಯಾ ಸಚಿವಾಲಯ/ ಇಲಾಖೆಗಳು ಕ್ರಿಯಾಯೋಜನೆಯನ್ನು ಅಂತಿಮಪಡಿಸಿ, ನಿಗದಿತ ಅವಧಿಯೊಳಗೆ ಅನುಷ್ಠಾನಗೊಳಿಸುವ ಮತ್ತು ಇದರ ಅನುಷ್ಠಾನದ ಮೇಲ್ವಿಚಾರಣೆಗೆ ಮೇಲುಸ್ತುವಾರಿ ವ್ಯವಸ್ಥೆಯನ್ನು ಕಾರ್ಯದರ್ಶಿಗಳ ಸಮಿತಿಯ ಮಾರ್ಗದರ್ಶನದ ಮೇರೆಗೆ ರೂಪಿಸಲು ಸೂಚಿಸಲಾಗಿದೆ. ಸಂಪುಟ ಕಾರ್ಯದರ್ಶಿಗಳ ಆಧೀನದಲ್ಲಿ ಇದು ಕಾರ್ಯ ನಿರ್ವಹಿಸಲಿದೆ. ಸರ್ಕಾರ ಇದಕ್ಕಾಗಿ 5000 ಕೋಟಿ ರೂಪಾಯಿಗಳ ಮೀಸಲು ನಿಧಿಯನ್ನು ರೂಪಿಸಲಿದ್ದು, ಚಾಂಪಿಯನ್ ವಲಯಗಳ ವಲಯವಾರು ಕ್ರಿಯಾಯೋಜನೆಗಳಿಗೆ ಬೆಂಬಲ ನೀಡಲು ಇದು ಬಳಕೆಯಾಗಲಿದೆ. ಕ್ರಿಯಾಯೋಜನೆಯಡಿ ಎಲ್ಲ ಗುರುತಿಸಲ್ಪಟ್ಟ ಚಾಂಪಿಯನ್ ವಲಯಗಳಿಗೆ ವಿಷನ್ ದಾಖಲೆಯನ್ನು 2022ರೊಳಗಾಗಿ ಅಭಿವೃದ್ಧಿಪಡಿಸಲಿದೆ. ಜತೆಗೆ ವಿಷನ್ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಮಹತ್ವ

ಇದು ಗುರಿನಿರ್ದೇಶಿತ ಹಾಗೂ ಮೇಲುಸ್ತುವಾರಿ ವ್ಯವಸ್ಥೆ ಹೊಂದಿದ ಕ್ರಿಯಾಯೋಜನೆಗೆ ಗಮನ ಹರಿಸುವ ಮೂಲಕ ದೇಶದ ಸೇವಾ ವಲಯದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ. ಇದು ಜಿಡಿಪಿ ಪ್ರಗತಿಗೂ ಉತ್ತೇಜನ ನೀಡಲಿದ್ದು, ಹೆಚ್ಚಿನ ಉದ್ಯೋಗ ಸೃಷ್ಟಿ ಹಾಗೂ ಜಾಗತಿಕ ಮಾರುಕಟ್ಟೆಗೆ ರಫ್ತು ಹೆಚ್ಚಿಸಲು ಕೂಡಾ ನೆರವಾಗಲಿದೆ. ಸ್ಪರ್ಧಾತ್ಮಕ ಸೇವಾ ವಲಯವು, ಉತ್ಪಾದನಾ ಕ್ಷೇತ್ರದ ಸ್ಪರ್ಧಾತ್ಮಕತೆಗೂ ಕಾರಣವಾಗಲಿದೆ.

ಹಿನ್ನೆಲೆ

ಭಾರತದ ಸೇವಾ ವಲಯದ ಜಾಗತಿಕ ಸೇವಾ ರಫ್ತು ಪ್ರಮಾಣ 2014ರಲ್ಲಿ ಶೇಕಡ 3.1 ಇದ್ದುದು 2015ರಲ್ಲಿ ಶೇಕಡ 3.3ಕ್ಕೆ ಹೆಚ್ಚಿದೆ. ಯೋಜನೆಯಡಿ 2022ರೊಳಗಾಗಿ ಶೇಕಡ 4.2ಕ್ಕೆ ಪ್ರಮಾಣವನ್ನು ತಲುಪಿಸಲು ಉದ್ದೇಶಿಸಿದೆ. ಒಟ್ಟಾಋಎ ಮೌಲ್ಯವರ್ಧನೆಯಲ್ಲಿ ಇದರ ಪಾಲು 2015-16ರಲ್ಲಿ ಸುಮಾರು ಶೇಖಡ 52 ಇದೆ. ನಿರ್ಮಾಣ ಸೇವೆಯನ್ನು ಸೇರಿಸಿದರೆ ಪಾಲು ಶೇಕಡ 61ರಷ್ಟಾಗುತ್ತದೆ.

ಕಾರ್ಯದರ್ಶಿಗಳ ಸಮಿತಿ ಪ್ರಧಾನಿಗೆ 10 ಚಾಂಪಿಯನ್ ವಲಯಗಳನ್ನು ಗುರುತಿಸಿ ಶಿಫಾರಸ್ಸು ಮಾಡಿತ್ತು. ಇವುಗಳಲ್ಲಿ ಸೇವಾ ವಲಯದ ಮೂರು ಹಾಗೂ ಉತ್ಪಾದನಾ ವಿಭಾಗದ ಏಳು ಉತ್ಪಾದನಾ ವಲಯಕ್ಕೆ ಸಂಬಂಧಿಸಿದ್ದಾಗಿತ್ತು. ನಿಗದಿತ ಗುರಿ ಸಾಧಿಸುವ ನಿಟ್ಟಿನಲ್ಲಿ ಇವುಗಳಿಗೆ ಉತ್ತೇಜನ ನೀಡಿ, ಇವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದಾದ ಬಳಿಕ ಮೇಕ್ ಇನ್ ಇಂಡಿಯಾದ ನೋಡಲ್ ಇಲಾಖೆಯಾದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ, ಉತ್ಪಾದನಾ ಕ್ಷೇತ್ರದ ಚಾಂಪಿಯನ್ ವಲಯವನ್ನು ಮತ್ತು ವಾಣಿಜ್ಯ ಇಲಾಖೆ ಸೇವಾ ಕ್ಷೇತ್ರದ ಚಾಂಪಿಯನ್ ವಲಯವನ್ನು ಸಮನ್ವಯಗೊಳಿಸಲಿವೆ.

Comment