IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮರುಭೂಮಿಯಲ್ಲಿ ಎಟಿಜಿಎಂ ನಾಗ್ ಯಶಸ್ವಿ ಪರೀಕ್ಷೆ

ಮರುಭೂಮಿಯಲ್ಲಿ ಎಟಿಜಿಎಂ ನಾಗ್ ಯಶಸ್ವಿ ಪರೀಕ್ಷೆ

ದೇಶೀಯವಾಗಿ ಅಭಿವೃದ್ಧಿಪಡಿಸಿದ ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿ (ಎಟಿಜಿಎಂ) ನಾಗ್ ಅನ್ನು ಮರುಭೂಮಿ ಸ್ಥಿತಿಯಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. ವಿಭಿನ್ನ ಅಂತರ ಮತ್ತು ಕಾಲಾವಧಿಯಲ್ಲಿ ಎರಡು ಟ್ಯಾಂಕ್ಗಳನ್ನು ಗುರಿ ಮಾಡಿ ಇದನ್ನು ಪ್ರಯೋಗಿಸಲಾಯಿತು. ಅಭಿವೃದ್ಧಿ ಪರೀಕ್ಷೆಯೊಂದಿಗೆ ನಾಗ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಮುಕ್ತಾಯವಾಗಿದ್ದು, ಭಾರತೀಯ ಸಶಸ್ತ್ರ ಪಡೆಗಳಲ್ಲಿ ನಿಯೋಜನೆಗೆ ಇದು ಸಿದ್ಧವಾದಂತಾಗಿದೆ.

ಎಟಿಎಂಜಿ ನಾಗ್

ಎಟಿಎಂಜಿ ನಾಗ್ ಕ್ಷಿಪಣಿಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಐದು ಕ್ಷಿಪಣಿ ವ್ಯವಸ್ಥೆಗಳ ಪೈಕಿ ಒಂದಾಗಿದ್ದು, ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆ (ಐಜಿಎಂಡಿಪಿ) ಅನ್ವಯ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇತರ ನಾಲ್ಕು ಕ್ಷಿಪಣಿಗಳೆಂದರೆ, ಅಗ್ನಿ, ಆಕಾಶ್, ತ್ರಿಶೂಲ್ ಹಾಗೂ ಪೃಥ್ವಿ. ಇದನ್ನು ದೇಶದ ಏಕೈಕ ಕ್ಷಿಪಣಿ ಉತ್ಪಾದನಾ ಸಂಸ್ಥೆಯಾದ ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.

ನಾಗ್ ಕ್ಷಿಪಣಿಯು ಎಟಿಎಂಜಿ ಮೂರನೇ ಪೀಳಿಗೆ ಕ್ಷಿಪಣಿಯಾಗಿದ್ದು, "ಫೈರ್ ಅಂಡ್ ಫರ್ಗಾಟ್" ತತ್ವದಡಿ ಇದು ಕಾರ್ಯನಿರ್ವಹಿಸುತ್ತದೆ. ಇದರ ಮೇಲ್ಮೈ ಅವತರಣಿಕೆಯು 500 ಮೀಟರ್ನಿಂದ 4 ಕಿಲೋಮೀಟರ್ ವರೆಗಿನ ದೂರದ ಗುರಿಯ ಮೇಲೆ ದಾಳಿ ಮಾಡಬಲ್ಲದು. ಅಂತೆಯೇ ವಾಯು ಅವತರಣಿಕೆಯು 7-10 ಕಿಲೋಮೀಟರ್ ದೂರದ ಗುರಿಯ ಮೇಲೆ ದಾಳಿ ಮಾಡುವ ಸಾಮಥ್ರ್ಯ ಹೊಂದಿದೆ. ಇದು ಅತ್ಯಾಧುನಿಕ ಇಮೇಜಿಂಗ್ ಇನ್ಫ್ರಾ ರೆಡ್ ರಾಡಾರ್ (ಐಆರ್ಆರ್) ಸೌಕರ್ಯವನ್ನು ಹೊಂದಿದ್ದು, ಸಮಗ್ರ ವೈಮಾನಿಕ ವ್ಯವಸ್ಥೆಯೂ ಇದರಲ್ಲಿರುತ್ತದೆ. ತಂತ್ರಜ್ಞಾನವನ್ನು ವಿಶ್ವದಲ್ಲಿ ಕೆಲವೇ ದೇಶಗಳು ಮಾತ್ರ ಹೊಂದಿವೆ.

ಇದು ಅತ್ಯಾಧುನಿಕ ಪ್ಯಾಸಿವ್ ಹೋಮಿಂಗ್ ಗೈಡೆನ್ಸ್ ವ್ಯವಸ್ಥೆಯನ್ನೂ ಒಳಗೊಂಡಿರುತ್ತದೆ. ಇದನ್ನು ಮುಖ್ಯವಾಗಿ ಆಧುನಿಕ ಮುಖ್ಯ ಯುದ್ಧ ಟ್ಯಾಂಕ್ಗಳನ್ನು ಮತ್ತು ಇತರ ಶಸ್ತ್ರಸಜ್ಜಿತ ಗುರಿಗಳನ್ನು ಧ್ವಂಸ ಮಾಡುವ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಕ್ಷಿಪಣಿಯನ್ನು ಭೂಮಿ ಹಾಗೂ ವಾಯು ಆಧರಿತ ಪ್ಲಾಟ್ಫಾರಂಗಳಿಂದ ಉಡಾಯಿಸಲು ಅವಕಾಶವಿದೆ.

ಭಿನ್ನತೆಗಳು: ನಾಗ್ ಕ್ಷಿಪಣಿಯನ್ನು ಹೆಲಿಕಾಪ್ಟರ್ನಿಂದಲೂ ಉಡಾಯಿಸಲು ಅವಕಾಶವಿದ್ದು, ಬಗೆಯ ಕ್ಷಿಪಣಿಯನ್ನು ನಾಗ್ (ಹೆಲಿನಾ) ಎಂದು ಕರೆಯಲಾಗುತ್ತದೆ. ಇದನ್ನು ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಪ್ಟರ್ನಿಂದ ಮತ್ತು ಎಚ್ಎಎಲ್ ರುದ್ರ ದಾಳಿ ಹೆಲಿಕಾಪ್ಟರ್ನಿಂದಲೂ ಉಡಾಯಿಸಬಹುದಾಗಿದೆ. ಭೂ ಆಧರಿತ ಕ್ಷಿಪಣಿ ಅವತರಣಿಕೆಯು ಪ್ರಸ್ತುತ ನಾಗಾ ಕ್ಷಿಪಣಿ ಕ್ಯಾರಿಯರ್ ಜತೆ ಸಮನ್ವಯಗೊಳಿಸುವ ಹಂತದಲ್ಲಿದೆ.

Comment