IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಹೈದರಾಬಾದ್‍ನಲ್ಲಿ 21ನೇ ರಾಷ್ಟ್ರೀಯ ಇ- ಆಡಳಿತ ಸಮ್ಮೇಳನ

ಹೈದರಾಬಾದ್‍ನಲ್ಲಿ 21ನೇ ರಾಷ್ಟ್ರೀಯ ಇ- ಆಡಳಿತ ಸಮ್ಮೇಳನ

21ನೇ ರಾಷ್ಟ್ರೀಯ -ಆಡಳಿತ ಸಮ್ಮೇಳನ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ನಡೆಯಿತು. ವರ್ಷದ ಸಮ್ಮೇಳನದ ಘೋಷವಾಕ್ಯವೆಂದರೆ"ಅಭಿವೃದ್ಧಿಯ ವೇಗರ್ವಧನೆಗೆ ತಂತ್ರಜ್ಞಾನ" (ಟೆಕ್ನಾಲಜಿ ಫಾರ್ ಆಕ್ಸಿಲರೇಟಿಂಗ್ ಡೆವಲಪ್ಮೆಂಟ್) ಎಂದಾಗಿತ್ತು.

21ನೇ ರಾಷ್ಟ್ರೀಯ -ಆಡಳಿತ ಸಮ್ಮೇಳನವನ್ನು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಅಹವಾಲು ಇಲಾಖೆ ಆಯೋಜಿಸಿತ್ತು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಮತ್ತು ತೆಲಂಗಾಣ ಸರ್ಕಾರ ಇದಕ್ಕೆ ಸಹಯೋಗ ನೀಡಿತ್ತು.

ಪ್ರಮುಖ ಅಂಶಗಳು

ಸಮ್ಮೇಳನವು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳು, ರಾಜ್ಯ ಸರ್ಕಾರಗಳ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿಗಳು, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ವ್ಯವಸ್ಥಾಕರು, ಸಾಫ್ಟ್ವೇರ್ ಸೊಲ್ಯೂಶನ್ ನೀಡುವವರು, ಉದ್ಯಮ ಮತ್ತಿತರ ಕ್ಷೇತ್ರಗಳ ಗಣ್ಯರ ಸಮ್ಮಿಲನಕ್ಕೆ ವೇದಿಕೆಯಾಯಿತು. ಎಲ್ಲ ಕ್ಷೇತ್ರಗಳ ಮುಂಚೂಣಿ ನಾಯಕರು ಒಂದೆಡೆ ಸೇರಿ ಪರಸ್ಪರ ಸಂವಾದ ನಡೆಸಿ, ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಇದರ ಜತೆಗೆ ತಮ್ಮ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದ ಗಣ್ಯರು ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು ಮಾತ್ರವಲ್ಲದೇ ಅದಕ್ಕೆ ವೈವಿಧ್ಯಮಯ ಪರಿಹಾರ ಚೌಕಟ್ಟನ್ನು ಕೂಡಾ ನೀಡಿದರು.

ಸಮ್ಮೇಳನವು ವಿನೂತನ ತಂತ್ರಜ್ಞಾನ ಮತ್ತು ಐಸಿಟಿ ಸೊಲ್ಯೂಶನ್ಸ್ ವಿಭಾಗದ ಉತ್ತಮ ಕಾರ್ಯಚಟುವಟಿಕೆಗಳ ಪ್ರದರ್ಶನಕ್ಕೂ ವೇದಿಕೆಯಾಯಿತು. ದೇಶದಲ್ಲಿ -ಆಡಳಿತ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಸರ್ಕಾರಿ ಇಲಾಖೆಗಳಿಗೆ ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ರಾಷ್ಟ್ರೀಯ - ಆಡಳಿತ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಕೂಡಾ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಸಮ್ಮೇಳನದಲ್ಲಿ ಮೂರು ಅಧಿವೇಶನಗಳು ಪ್ರಮುಖವಾಗಿ ಬಳಕೆದಾರರ ಅನುಭವಗಳ ನಿರ್ಮಾಣ, ಸಾರ್ವತ್ರೀಕರಣ ಮತ್ತು - ಆಡಳಿತದ ಅನುರೂಪದ ಅನುಷ್ಠಾನ ಕ್ಷೇತ್ರಗಳಲ್ಲಿ ಪ್ರಶಸ್ತಿ ನೀಡಲಾಯಿತು. - ಆಡಳಿತ ಕ್ಷೇತ್ರದಲ್ಲಿನ ಉತ್ತಮ ಹಾಗೂ ಅತ್ಯುತ್ತಮ ಪದ್ಧತಿಗಳನ್ನು ಆಧರಿಸಿದ ಅಧಿವೇಶನಗಳು ಕೂಡಾ ಪ್ರಮುಖ ಆಕರ್ಷಣೆಯಾಗಿದ್ದವು. ಜತೆಗೆ ರೂಪುಗೊಳ್ಳುತ್ತಿರುವ ತಂತ್ರಜ್ಞಾನದ ಬಗ್ಗೆ ಕೂಡಾ ವಿಚಾರ ವಿನಿಮಯಗಳು ನಡೆದವು. ಸಮಾರೋಪ ಸಮಾರಂಭದ ಮುಖ್ಯ ಘೊಷವಾಕ್ಯವೆಂದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾತ್ರದಲ್ಲಿ ಸಮನ್ವಯತೆ ತರುವುದು ಎಂದಾಗಿತ್ತು.

ಹಿನ್ನೆಲೆ

-ಆಡಳಿತ ಎನ್ನುವುದು ಡಿಎಆರ್ಪಿಜಿ, ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯಕ್ಕೆ ಹಂಚಿಕೆಯಾದ ವಿಷಯಗಳಲ್ಲೊಂದಾಗಿದೆ. ವಹಿವಾಟು ಹಂಚಿಕೆ ನಿಮಯಾವಳಿ- 1961 ಶೆಡ್ಯೂಲ್ 2ಕ್ಕೆ ಅನುಗುಣವಾಗಿ ಇದನ್ನು ರೂಪಿಸಲಾಗುತ್ತದೆ. ಡಿಎಆರ್ಪಿಜಿಗೆ -ಆಡಳಿತ ಬೆಳೆಸುವ ಹಾಗೂ ಉತ್ತೇಜಿಸುವ ಹೊಣೆಯನ್ನು ನಿಗದಿಪಡಿಸಲಾಗಿದೆ. ಇದು ದೇಶದ ಒಟ್ಟಾರೆ ಗುರಿಗಳು ಹಾಗೂ ಆದ್ಯತೆಗಳಿಗೆ ಅನುಗುಣವಾಗಿ -ಆಡಳಿತ ಚಟುವಟಿಕೆಳನ್ನು ಉತ್ತೇಜಿಸುವ ಜವಾಬ್ದಾರಿ ವಹಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (ಎಂಇಐಟಿವೈ) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಡಿಇಐಟಿವೈಗಳು -ಆಡಳಿತವನ್ನು ಉತ್ತೇಜಿಸುವ ಹೊಣೆಗಾರಿಕೆ ಹೊಂದಿವೆ. - ಆಡಳಿತದ ಮೂಲಕ ನಾಗರಿಕರನ್ನು ಸಬಲೀಕರಿಸುವುದು, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಆಧರಿತ ಉದ್ದಿಮೆಗಳ ಸುಸ್ಥಿರ ಪ್ರಗತಿಯನ್ನು ಉತ್ತೇಜಿಸುವುದು ಸಚಿವಾಲಯದ ಮುಖ್ಯ ಉದ್ದೇಶವಾಗಿದೆ.

Comment