IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಚೆನ್ನೈ ಐಐಟಿಯಲ್ಲಿ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರ ಸ್ಥಾಪನೆ

ಚೆನ್ನೈ ಐಐಟಿಯಲ್ಲಿ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರ ಸ್ಥಾಪನೆ

ಭಾರತ ಸರ್ಕಾರದ ಶಿಪ್ಪಿಂಗ್ ಸಚಿವಾಲಯವು ಚೆನ್ನೈ ಐಐಟಿ ಕ್ಯಾಂಪಸ್ನಲ್ಲಿ ಬಂದರುಗಳು, ಜಲಮಾರ್ಗ ಮತ್ತು ಕರಾವಳಿಗಾಗಿ ತಂತ್ರಜ್ಞಾನ ಕೇಂದ್ರ (ಎನ್ಟಿಸಿಪಿಡ್ಬ್ಲುಸಿ) ಸ್ಥಾಪನೆಗೆ ಶಿಲಾನ್ಯಾಸ ಮಾಡಿದೆ. ಇದು ಬಂದರುಗಳು ಹಾಗೂ ಸಾಗರ ವಲಯಕ್ಕೆ ತಾಂತ್ರಿಕ ಬೆಂಬಲವನ್ನು ನೀಡಲಿದೆ. ಇದು ಶಿಪ್ಪಿಂಗ್ ಸಚಿವಾಲಯದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯಡಿ ನಿರ್ಮಾಣವಾಗಲಿದೆ.

ಪ್ರಮುಖ ಅಂಶಗಳು

ಬಂದರುಗಳು, ಜಲಮಾರ್ಗ ಮತ್ತು ಕರಾವಳಿಗಾಗಿ ತಂತ್ರಜ್ಞಾನ ಕೇಂದ್ರ (ಎನ್ಟಿಸಿಪಿಡ್ಬ್ಲುಸಿ) ಪ್ರಮುಖ ಕಾರ್ಯಸೂಚಿಯೆಂದರೆ, ಶಿಪ್ಪಿಂಗ್ ಸಚಿವಾಲಯದ ತಾಂತ್ರಿಕ ವಿಭಾಗವಾಗಿ ಕಾರ್ಯ ನಿರ್ವಹಿಸುವ ಮೂಲಕ, ಬಂದರುಗಳು ಹಾಗೂ ಒಳನಾಡು ಜಲಸಾರಿಗೆ ಪ್ರಾಧಿಕಾರ (ಐಡಬ್ಲ್ಯುಎಐ) ಮತ್ತು ಇತರ ಸಂಘ ಸಂಸ್ಥೆಗಳಿಗೆ ತಾಂತ್ರಿಕ ನೆರವನ್ನು ಒದಗಿಸುವುದು.

ಕಾರ್ಯಚಟುವಟಿಕೆಗಳು: ಸಾಗರ, ಕರಾವಳಿ ಮತ್ತು ಅಲೆಗಳ ಹರಿವು, ಕೆಸರು ಸಾಗಾಣಿಕೆ ಮತ್ತು ಶಿಲಾರಚನೆ, ಡ್ರೆಜ್ಜಿಂಗ್ ಮತ್ತು ಹೂಳೆತ್ತುವಿಕೆ, ಪಥದರ್ಶಕ ವ್ಯವಸ್ಥೆ ಮತ್ತು ಮಾರ್ಪಾಡುಗಳು, ಬಂದರು ಮತ್ತು ಕರಾವಳಿ ಎಂಜಿನಿಯರಿಂಗ್ ಸಂರಚನೆಗಳು ಮತ್ತು ಬ್ರೇಕ್ವಾಟರ್ಗಳ 2ಡಿ ಹಾಗೂ 3ಡಿ ಮಾಡೆಲಿಂಗ್ಗಳ ಕ್ಷೇತ್ರದಲ್ಲಿ ಅನ್ವಯಿಕ ಸಂಶೋಧನೆ ನಡೆಸುವುದು, ಹರಿವು ಮತ್ತು ಹಲ್ ಇಂಟರ್ಯಾಕ್ಷನ್ ಬಗ್ಗೆ ಸಿಎಫ್ಡಿ ಮಾದರಿಗಳನ್ನು ತಯಾರಿಸುವುದು, ಮಲ್ಟಿಪಲ್ ಹಲ್ಗಳ ಹೈಡ್ರೋಡೈನಾಮಿಕ್ಸ್, ಸ್ವಯಂಚಾಲಿತ ಪ್ಲಾಟ್ಫಾರಂ ಮತ್ತು ವಾಹನಗಳು ಹಾಗೂ ಸಾಗರ ನವೀಕರಿಸಬಹುದಾದ ಇಂಧನ ಬಗ್ಗೆ ಅಧ್ಯಯನ ಕೈಗೊಳ್ಳುವುದು ಇದರ ಪ್ರಮುಖ ಕಾರ್ಯಕ್ಷೇತ್ರವಾಗಿದೆ.

ಇದು ದೇಶೀಯವಾಗಿ ಅಭಿವೃದ್ಧಿಪಡಿಸುವ ಸಾಫ್ಟ್ವೇರ್ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು, ತಾಂತ್ರಿಕ ಮಾರ್ಗಸೂಚಿ ಮತ್ತು ಗುಣಮಟ್ಟ ನಿಗದಿಪಡಿಸುವುದು, ಮಾದರಿ ಮತ್ತು ಸಿಮ್ಯುಲೇಶನ್ ಮೂಲಕ ಬಂದರು ಮತ್ತು ಸಾಗರ ಸಮಸ್ಯೆಗಳನ್ನು ಬಗೆಹರಿಸುವುದು ಕೂಡಾ ಇದರ ಕಾರ್ಯಕ್ಷೇತ್ರವಾಗಿದೆ. ಹೊಸ ತಂತ್ರಜ್ಞಾನ ಮತ್ತು ಅನುಶೋಧನೆಗಳನ್ನು ಸೃಷ್ಟಿಸುವುದು ಹಾಗೂ ಅವುಗಳನ್ನು ಯಶಸ್ವಿಯಾಗಿ ವಾಣಿಜ್ಯೀಕರಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.

ಅನುದಾನ: ಉದ್ದೇಶಿತ ಕೇಂದ್ರವನ್ನು 70.53 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಹಾಗೂ ಇದನ್ನು ಶಿಪ್ಪಿಂಗ್ ಸಚಿವಾಲಯ, ಐಡಬ್ಲ್ಯುಎಐ ಮತ್ತು ಪ್ರಮುಖ ಬಂದರುಗಳು ಹಂಚಿಕೊಳ್ಳಲಿವೆ. ಇದು ಮೂರು ವರ್ಷಗಳಲ್ಲಿ ಸ್ವಯಂ ಸುಸ್ಥಿರತೆ ಸಾಧಿಸಲಿದ್ದು, ಇದಕ್ಕೆ ಕೈಗಾರಿಕಾ ಸಲಹಾ ಯೋಜನೆಗಳನ್ನು ಭಾರತೀಯ ಹಾಗೂ ವಿದೇಶಿ ಬಂದರುಗಳು ಹಾಗೂ ಸಾಗರ ವಲಯಕ್ಕೆ ನೀಡುವ ಉದ್ದೇಶ ಹೊಂದಲಾಗಿದೆ.

ಸಾಗರಮಾಲಾ ಯೋಜನೆ

ಕೇಂದ್ರ ಶಿಪ್ಪಿಂಗ್ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಗರಮಾಲಾ ಯೋಜನೆ ಬಂದರು ಆಧರಿತ ಅಭಿವೃದ್ಧಿಯನ್ನು ದೇಶದ 7500 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶದಲ್ಲಿ ಸಾಧಿಸುವ ಗುರಿ ಹೊಂದಿದೆ. ಇದಕ್ಕಾಗಿ ಕರಾವಳಿ ತೀರದಲ್ಲಿ ಹಲವು ಉತ್ತಮ ಬಂದರುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದನ್ನು ಹೊಸ ಅಭಿವೃದ್ಧಿ ಪ್ರದೇಶಗಳಿಗೆ ಇದು ಸುಲಭವಾಗಿ ಸಂಪರ್ಕ ಹೊಂದುವಂತೆ ಮಾಡಲಾಗಿದ್ದು, ಅಂತರ ಮಾದರಿ ಪರಿಹಾರಗಳು ಹಾಗೂ ವಿಸ್ತø ಸಂಪರ್ಕವನ್ನು ಮುಖ್ಯ ಆರ್ಥಿಕ ಕೇಂದ್ರಗಳು ಹಾಗೂ ಹೊರ ಪ್ರದೇಶಗಳ ನಡುವೆ ಏರ್ಪಡಿಸುವ ಗುರಿ ಹೊಂದಿದೆ.

ಇದು ಪ್ರಸ್ತುತ ಇರುವ ಬಂದರುಗಳನ್ನು ಅತ್ಯಾಧುನಿಕ ವಿಶ್ವದರ್ಜೆಯ ಬಂದರುಗಳಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಹೊಸ ಬಂದರುಗಳ ಅಭಿವೃದ್ಧಿ ಯೋಜನೆಯನ್ನು ಕೂಡಾ ಹೊಂದಿದೆ. ಇದು ರಸ್ತೆ, ರೈಲು, ಒಳನಾಡು ಜನಸಾರಿಗೆ ಮತ್ತು ಕರಾವಳಿ ಜಲ ಮಾರ್ಗಗಳ ಮೂಲಕ ಹೆಚ್ಚು ದಕ್ಷವಾದ ಚಲನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಯೋಜನೆಯ ಪ್ರಮುಖ ಮೂರು ಅಂಶಗಳೆಂದರೆ, ಬಂದರು ಆಧುನೀಕರಣ, ಹೆಚ್ಚು ದಕ್ಷಾದ ಇವ್ಯಾಕ್ಯೂಶನ್ ಸಿಸ್ಟಮ್ ಮತ್ತು ಕರಾವಳಿ ಆರ್ಥಿಕ ಅಭಿವೃದ್ಧಿ.

Comment