IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಇಟಿಸಿಡಿ ಮಿತಿ 100 ದಶಲಕ್ಷ ಡಾಲರ್ಗೆ ಹೆಚ್ಚಳ

ಇಟಿಸಿಡಿ ಮಿತಿ 100 ದಶಲಕ್ಷ ಡಾಲರ್ಗೆ ಹೆಚ್ಚಳ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಿನಿಮಯ ವಹಿವಾಟು ಕರೆನ್ಸಿ ನಿರ್ಧಾರಕಗಳ ಮಿತಿಯನ್ನು ದೇಶೀಯ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ 100 ದಶಲಕ್ಷ ಡಾಲರ್ಗೆ ಹೆಚ್ಚಿಸಿದೆ. ಭಾರತೀಯ ರೂಪಾಯಿಯನ್ನು ಒಳಗೊಂಡ ಎಲ್ಲ ಕರೆನ್ಸಿ ಜೋಡಿಗಳಿಗೆ ಇದು ಅನ್ವಯಿಸುತ್ತದೆ. ನಿರ್ಧಾರದಿಂದಾಗಿ ವಿದೇಶಿ ವಿನಿಮಯ ವಹಿವಾಟಿನಲ್ಲಿ ತೊಡಗಿರುವ ಕಂಪನಿಗಳು ತಮ್ಮ ಕರೆನ್ಸಿ ಅಪಾಯ ಸಾಧ್ಯತೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗಲಿದೆ. ಇದಕ್ಕೂ ಮೊದಲು ಮಿತಿ ಅಮೆರಿಕನ್ ಡಾಲರ್- ರೂಪಾಯಿ ವಹಿವಾಟಿಗೆ 15 ದಶಲಕ್ಷ ಡಾಲರ್ ಹಾಗೂ ಭಾರತೀಯ ರೂಪಾಯಿಯ ಇತರ ಕರೆನ್ಸಿ ಜೋಡಿಗಳಿಗಳಿಗೆ ಅಂದರೆ ಜಪಾನಿ ಯೆನ್, ಯೂರೊ ಮತ್ತು ಬ್ರಿಟಿಷ್ ಪೌಂಡ್ಗೆ ಇದು 5 ದಶಲಕ್ಷ ಡಾಲರ್ ಆಗಿತ್ತು.

ವಿನಿಮಯ ವಹಿವಾಟು ಕರೆನ್ಸಿ ನಿರ್ಧಾರಕ (ಇಟಿಸಿಡಿ)

ವಿನಿಮಯ ವಹಿವಾಟು ಕರೆನ್ಸಿ ನಿರ್ಧಾರಕ (ಇಟಿಸಿಡಿ) ಎನ್ನುವುದು ಹಣಕಾಸು ಸಾಧನವಾಗಿದ್ದು, ಇದು ನಿಯಂತ್ರಿತ ವಿನಿಮಯ ವ್ಯವಸ್ಥೆಯಲ್ಲಿ ವಹಿವಾಟು ಆಗುತ್ತದೆ. ಇದರ ಮೌಲ್ಯವು ಇತರ ಆಸ್ತಿಯ ಮೌಲ್ಯದ ಆಧಾರದಲ್ಲಿ ನಿರ್ಧಾರವಾಗುತ್ತದೆ. ನಿರ್ಧಾರಕಗಳ ವಹಿವಾಟು ನಿಯಂತ್ರಿತ ವಿಧಾನದಲ್ಲಿ ನಡೆಯುತ್ತದೆ. ಇವುಗಳನ್ನು ಹೆಡ್ಜ್ ಎಕ್ಸ್ಪೋಶರ್ ಅಥವಾ ಸ್ಪೆಕ್ಯುಲೇಟ್ ಉದ್ದೇಶಗಳಿಗಾಗಿ ವಿಸ್ತø ಹಣಕಾಸು ಆಸ್ತಿಗಳಾದ ಸರಕುಗಳು, ಕರೆನ್ಸಿಗಳು, ಈಕ್ವಿಟಿಗಳು ಹಾಗೂ ಬಡ್ಡಿದರಕ್ಕೆ ಕೂಡಾ ಬಳಕೆಯಾಗುತ್ತವೆ.

ಹೊಸ ನಿಯಮಾವಳಿ ಏನು?

ಎಕ್ಸ್ಪೋಶನ್ ಮಿತಿ ಹೆಚ್ಚಳದಿಂದಾಗಿ, ಭಾರತದಲ್ಲಿ ವಾಸವಿರುವ ಪ್ರಜೆಗಳು ಮತ್ತು ಇಪಿಐಗಳು ಅಲ್ಪಾವಧಿ ಹಾಗೂ ಧೀರ್ಘಾವಧಿ ನಿಲುವುಗಳನ್ನು ಭಾರತೀಯ ರೂಪಾಯಿ ಒಳಗೊಂಡ 100 ದಶಲಕ್ಷ ಡಾಲರ್ ಮೊತ್ತದವರೆಗೆ ಯಾವುದೇ ಕರೆನ್ಸಿ ಜೋಡಿಗಳ ಬಗ್ಗೆ ತೆಗೆದುಕೊಳ್ಳಲು ಅನುವು ಮಾಡಿಕೊಡಲಿದೆ. ಇದು ಎಲ್ಲ ವಿನಿಮಯಗಳಿಗೆ ಅನ್ವಯವಾಗುತ್ತದೆ.

ನಿರ್ಧಾರಕ್ಕೆ ಬದ್ಧವಾಗುವಿಕೆಯು ಇಟಿಸಿಡಿ ಮಾರುಕಟ್ಟೆಗೆ ಸೀಮಿತವಾಗಿರುತ್ತದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ)-1999 ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೂ ಇದರ ಅನವಯವೇ ನಿರ್ದೇಶನ, ನಿಬಂಧನೆಗಳನ್ನು ಹೊರಡಿಸಲಾಗುತ್ತದೆ. ಮಿತಿಯನ್ನು ವಿನಿಮಯದ ಮೇಲೆ ನಿಗಾ ಇಡಲಾಗುತ್ತದೆ ಹಾಗೂ ಉಲ್ಲಂಘಿಸಿದರೆ ಅದನ್ನು ಆರ್ಬಿಐಗೆ ವರದಿ ಮಾಡಬೇಕಾಗುತ್ತದೆ.

ಹಿನ್ನೆಲೆ

ಭಾರತೀಯ ರಿಸರ್ವ್ ಬ್ಯಾಂಕ್ ಇಟಿಸಿಡಿ ಮಾರುಕಟ್ಟೆಯಲ್ಲಿ ಸರಣಿ ಉದಾರೀಕರಣ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೂ ಮುನ್ನ ಇದು ವ್ಯಾಪಾರ ವಹಿವಾಟಿಗೆ ಅಗತ್ಯವಾಗಿದ್ದ ದಾಖಲೀಕರಣ ಪ್ರಕ್ರಿಯೆಯನ್ನು ಸಡಿಲಗೊಳಿಸಿತ್ತು. ಶಾಸನಬದ್ಧ ಲೆಕ್ಕಪರಿಶೋಧಕರ ಪ್ರಮಾಣಪತ್ರದ ಬದಲು ಸ್ವಯಂ ಸಹಿ ಮಾಡಿದ ಮುಚ್ಚಳಿಕೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಇದರ ಜತೆಗೆ ಅರ್ಹತಾ ಮಿತಿಯ ಶೇಕಡ 100ರಷ್ಟು ಹೆಡ್ಜಿಂಗ್ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಇದಕ್ಕೂ ಮುನ್ನ ಆಮದುದಾರರು ಇಟಿಸಿಡಿ ಮಾರುಕಟ್ಟೆಯಲ್ಲಿ ತಮ್ಮ ಅರ್ಹತಾ ಮಿತಿಯ ಶೇಕಡ 50ರಷ್ಟು ಮೊತ್ತವನ್ನು ಮಾತ್ರ ಹೆಡ್ಜ್ ಮಾಡಲು ಅವಕಾಶ ಇತ್ತು.

Comment