IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸೇರ್ಪಡೆಯ ಅಂತರ್ಜಾಲ ಸೂಚ್ಯಂಕ 2018: ಭಾರತಕ್ಕೆ 47ನೇ ಸ್ಥಾನ

ಸೇರ್ಪಡೆಯ ಅಂತರ್ಜಾಲ ಸೂಚ್ಯಂಕ 2018: ಭಾರತಕ್ಕೆ 47ನೇ ಸ್ಥಾನ

ಸೇರ್ಪಡೆಯ ಅಂತರ್ಜಾಲ ಸೂಚ್ಯಂಕ 2018 ವರದಿಯ ಪ್ರಕಾರ ಒಟ್ಟು 86 ದೇಶಗಳ ಪೈಕಿ ಭಾರತಕ್ಕೆ 47ನೇ ಸ್ಥಾನ ಲಭಿಸಿದೆ. 2017 ರ್ಯಾಂಕಿಂಗ್ನಲ್ಲಿ 36ನೇ ಸ್ಥಾನದಲ್ಲಿದ್ದ ಭಾರತ 11 ಸ್ಥಾನಗಳ ಕುಸಿತ ಕಂಡಿದೆ. ಕಳಪೆ ಗುಣಮಟ್ಟ ಹಾಗೂ ಕಡಿಮೆ ಇಂಟರ್ನೆಟ್ ಬಳಕೆ ಇದಕ್ಕೆ ಮುಖ್ಯ ಕಾರಣ.

ವರದಿಯನ್ನು ಫೇಸ್ಬುಕ್ 2017ರಲ್ಲಿ ಆರಂಭಿಸಿದೆ. ಇದಕ್ಕೆ ಅಂಕಿ ಅಂಶಗಳನ್ನು ಸಂಗ್ರಹಿಸಲು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ಸಮೀಕ್ಷೆ ನಡೆಸುತ್ತದೆ. ಇದು ರಾಷ್ಟ್ರಮಟ್ಟದಲ್ಲಿ ಇಂಟರ್ನೆಟ್ ಸೇರ್ಪಡೆಯ ಬಗ್ಗೆ ನಾಲ್ಕು ಪ್ರಮುಖ ಆಯಾಮಗಳಲ್ಲಿ ಕಟ್ಟುನಿಟ್ಟಿನ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಅವುಗಳೆಂದರೆ ಇಂಟರ್ನೆಟ್ ಲಭ್ಯತೆ, ಅವುಗಳ ದರ, ಪ್ರಸ್ತುತತೆ ಮತ್ತು ಸರ್ವಸನ್ನದ್ಧತೆ. 2018 ವರದಿಯಲ್ಲಿ ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡ 91ನ್ನು ಸಂಪರ್ಕಿಸಲಾಗಿದ್ದು, 86 ದೇಶಗಳ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷದ ವರದಿಯಲ್ಲಿ 75 ದೇಶಗಳಲ್ಲಷ್ಟೇ ಸಮೀಕ್ಷೆ ನಡೆದಿತ್ತು.

2018 ವರದಿಯ ಪ್ರಮುಖ ಅಂಶಗಳು

ಭಾರತ ಇಂಟರ್ನೆಟ್ ಲಭ್ಯತೆಯಲ್ಲಿ 62ನೇ ಸ್ಥಾನದಲ್ಲಿದ್ದರೆ, ದರದಲ್ಲಿ 39ನೇ ಸ್ಥಾನದಲ್ಲಿದೆ. ಪ್ರಸ್ತುತತೆಯಲ್ಲಿ 37 ಹಾಗೂ ಸರ್ವಸನ್ನದ್ಧತೆ ವರ್ಗದಲ್ಲಿ 23ನೇ ಸ್ಥಾನದಲ್ಲಿದೆ. ಸಿಂಗಾಪುರ, ಕೆನಡಾ, ಪೋಲಂಡ್ ಹಾಗೂ ಮಲೇಷ್ಯಾ ನಾಲ್ಕೂ ವರ್ಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿವೆ.

ಇಂಟರ್ನೆಟ್ ಸಂಪರ್ಕ: ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 8.3ರಷ್ಟು ಹೆಚ್ಚಿದೆ. ಕಡಿಮೆ ಆದಾಯದ ದೇಶಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 65.1ರಷ್ಟು ಹೆಚ್ಚಳ ಕಂಡುಬಂದಿದ್ದು, ರುವಾಂಡದಲ್ಲಿ ಶೇಕಡ 490.8, ನೇಪಾಳದಲ್ಲಿ ಶೇಕಡ 138.1 ಹಾಗೂ ತಾಂಜಾನಿಯಾದಲ್ಲಿ ಶೇಕಡ 87.8ರಷ್ಟು ಹೆಚ್ಚಳ ದಾಖಲಾಗಿದೆ.

ಮೊಬೈಲ್ ಇಂಟರ್ನೆಟ್ ಅಂತರ: ಮೊಬೈಲ್ ಇಂಟರ್ನೆಟ್ ಅಂತರ ಶ್ರೀಮಂತ ಹಾಗೂ ಬಡ ದೇಶಗಳಲ್ಲಿ ಕಡಿಮೆಯಾಗುತ್ತಿದೆ. ಕಡಿಮೆ ಆದಾಯದ ದೇಶಗಳಲ್ಲಿ ಸರಾಸರಿ ವೆಚ್ಚ 500 ಎಂಬಿ ಇದ್ದು, ಬ್ರಾಡ್ಬ್ಯಾಂಡ್ ಸಂಪರ್ಕಕ್ಕೆ ಮಾಡುವ ವೆಚ್ಚ 2017ರಲ್ಲಿ ಮಾಸಿಕ ಆದಾಯದ ಶೇಕಡ 12.1ರಷ್ಟು ಇದ್ದುದು 2018ರಲ್ಲಿ ಮಾಸಿಕ ಆದಾಯದ ಶೇಕಡ 10ಕ್ಕೆ ಇಳಿದಿದೆ. ಶೇಕಡ 17.3ರಷ್ಟು ವೆಚ್ಚ ಕಡಿತವಾಗಿದೆ.

ಇಂಟರ್ನೆಟ್ ಸೇರ್ಪಡೆಯಲ್ಲಿ ಲಿಂಗ ಅಂತರ: ಇಂಟರ್ನೆಟ್ ಸೇರ್ಪಡೆಯಲ್ಲಿ ಲಿಂಗ ಅಂತರ ಇನ್ನೂ ಸಮಾಧಾನಕಾರಿ ಪ್ರಮಾಣ ತಲುಪಿಲ್ಲ. 86 ದೇಶಗಳ ಪೈಕಿ 69 ದೇಶಗಳಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಇಂಟರ್ನೆಟ್ ಲಭ್ಯತೆ ಹೊಂದಿದ್ದಾರೆ. ಸೂಚ್ಯಂಕದಲ್ಲಿ ಸೇರಿಸಿರುವ ದೇಶಗಳಲ್ಲಿ ಸರಾಸರಿ ಶೇಕಡ 33.5ರಷ್ಟು ಪುರುಷರು ಮಹಿಳೆಯರಿಗಿಂತ ಅಧಿಕ ಪ್ರಮಾಣದಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. ಕಡಿಮೆ ಆದಾಯದ ದೇಶಗಲಲ್ಲಿ ಅಂತರ ಇನ್ನೂ ಅಧಿಕ.

ಸಬಲೀಕರಣ: ಇಂಟರ್ನೆಟ್ ಬಳಕೆ ಸಬಲೀಕರಣಕ್ಕೆ ಪೂರಕವಾಗಿದೆ. ಅದರಲ್ಲೂ ಮುಖ್ಯವಾಗಿ ಏಷ್ಯಾ ನಾಗರಿಕರು, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಸಬಲೀಕರಣಕ್ಕೆ ಇದು ಸಹಕರಿಸಿದೆ. ಖಾಸಗಿ ಮತ್ತು ಭದ್ರತಾ ಆತಂಕವು ಇಂಟರ್ನೆಟ್ ಬಳಕೆಯನ್ನು ಅದರಲ್ಲೂ ಪ್ರಮುಖವಾಗಿ ಯೂರೋಪ್ನಲ್ಲಿ ಇಂಟರ್ನೆಟ್ ಬಳಕೆಯನ್ನು ಕಡಿಮೆ ಮಾಡಿದೆ.

Comment