IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

9491 ಹಣಕಾಸು ಸಂಸ್ಥೆಗಳು ಅಪಾಯಕಾರಿ

9491 ಹಣಕಾಸು ಸಂಸ್ಥೆಗಳು ಅಪಾಯಕಾರಿ

ದೇಶದಲ್ಲಿ 9491 ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ಅಧಿಕ ಅಪಾಯಕಾರಿ ಹಣಕಾಸು ಸಂಸ್ಥೆಗಳು ಎಂದು ಹಣಕಾಸು ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಹಣಕಾಸು ಗುಪ್ತಚರ ಘಟಕ (ಎಫ್ಐಯು) ವರ್ಗೀಕರಿಸಿದೆ. ಕಂಪನಿಗಳು ಹಣ ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್) ಅಂಶಗಳಿಗೆ ಬದ್ಧವಾಗಿಲ್ಲ ಎಂದು ಎಫ್ಐಯು ಹೇಳಿದೆ. ದೇಶದಲ್ಲಿ ಸುಮಾರು 12 ಸಾವಿರ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿದ್ದು, ಪೈಕಿ ಶೇಕಡ 80ರಷ್ಟು ಸಂಸ್ಥೆಗಳು ಅಧಿಕ ಅಪಾಯ ಸಾಧ್ಯತೆಯ ಹಣಕಾಸು ಸಂಸ್ಥೆಗಳು ಎಂದು ಪಟ್ಟಿ ಮಾಡಲಾಗಿದೆ. 2018 ಜನವರಿವರೆಗೆ ಪರಿಷ್ಕರಿಸಿದ ಅಂಕಿ ಅಂಶಗಳ ಆಧಾರದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ವರ್ಗಕ್ಕೆ ಸೇರಿಸಲಾಗಿದೆ.

ಇದರ ಅರ್ಥವೇನು?

ಎಫ್ಐಯು ಹೆಸರಿಸಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸುವ ಮುಖ್ಯ ಉದ್ದೇಶವೆಂದರೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಇವುಗಳು ದೇಶದ ಕಾನೂನಿಗೆ ಬದ್ಧವಾಗಿಲ್ಲ ಹಾಗೂ ಇವುಗಳ ಜತೆಗಿನ ವಹಿವಾಟಿನಿಂದ ದೂರ ಇರುವಂತೆ ಜನರಿಗೆ ಎಚ್ಚರಿಕೆ ನೀಡುವುದು. ಕಂಪನಿಗಳಿಗೆ ಪಿಎಂಎಲ್ ಕಾಯ್ದೆಗೆ ಬದ್ಧವಾಗಿರುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ. ಒಂದೂವರೆ ವರ್ಷಗಳಿಂದ ಕಂಪನಿಗಳಿಗೆ ಎಚ್ಚರಿಕೆ ನೀಡುತ್ತಾ ಬಂದರೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಇಂಥ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪಿಎಂಎಲ್ಬಿ ನಿಯಮಾವಳಿಗೆ ಬದ್ಧವಾದ ಬಳಿಕ ಪಟ್ಟಿಯಿಂದ ಅಂಥ ಸಂಸ್ಥೆಗಳ ಹೆಸರು ಕಿತ್ತುಹಾಕಲಾಗುತ್ತದೆ.

ಹಿನ್ನೆಲೆ

ಹಣ ಅವ್ಯವಹಾರ ತಡೆ ಕಾಯ್ದೆಯ ಅನ್ವಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಮುಖ್ಯವಾಗಿ ಸಹಕಾರ ಬ್ಯಾಂಕ್ಗಳು ಸೇರುತ್ತವೆ. ಇವು ತಮ್ಮ ಹಣಕಾಸು ಕಾರ್ಯಾಚರಣೆ ಮತ್ತು ವಹಿವಾಟುಗಳ ವಿವರಗಳನ್ನು ಹಣಕಾಸು ಗುಪ್ತಚರ ಘಟಕಕ್ಕೆ ನಿಗದಿತ ನಮೂನೆಯಲ್ಲಿ ನೀಡಬೇಕಾಗುತ್ತದೆ. ಹಣಕಾಸು ಗುಪ್ತಚರ ಘಟಕವು ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ, ಕಂಪನಿಗಳ ಬಗೆಗಿನ ಅಂಕಿ ಅಂಶಗಳನ್ನು ಸಂಸ್ಕರಿಸಿದೆ. 1000 ರೂಪಾಯಿ ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕದ ಅಂಕಿ ಅಂಶಗಳನ್ನು ಹಣಕಾಸು ಗುಪ್ತಚರ ಘಟಕ ಪರಿಶೀಲಿಸಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪಿಎಂಎಲ್ ಕಾಯ್ದೆಗೆ ಅನುಗುಣವಾಗಿ ಬದ್ಧತೆ ಪ್ರದರ್ಶಿಸಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಹಣಕಾಸು ಸಂಸ್ಥೆಗಳ ವಹಿವಾಟು ಪರಿಶೀಲನೆಗಾಗಿ ಪ್ರಧಾನ ಅಧಿಕಾರಿಯನ್ನು ಮತ್ತು ನಿಯೋಜಿತ ನಿರ್ದೇಶಕರನ್ನು ನೇಮಕ ಮಾಡುವ ಬದ್ಧತೆಯನ್ನು ಈಡೇರಿಸಿಲ್ಲ. 10 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಸಂದೇಹಕಾರಿ ವಹಿವಾಟುಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ನೇಮಕ ಮಾಡುವುದನ್ನು ಹಣಕಾಸು ಸಚಿವಾಲಯ ಕಡ್ಡಾಯ ಮಾಡಿತ್ತು. ಭಾರತದ ಆರ್ಥಿಕತೆಯಲ್ಲಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಣಕಾಸು ಗುಪ್ತಚರ ಘಟಕ ಕಾರ್ಯ ನಿರ್ವಹಿಸಿ, ಇಂಥ ಪ್ರಕರಣಗಳ ಬಗ್ಗೆ ಕಾನೂನು ಜಾರಿ ಏಜೆನ್ಸಿಗಳಿಗೆ ಮಾಹಿತಿ ನೀಡುತ್ತದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು

ಬ್ಯಾಂಕೇತರ ಹಣಕಾಸು ಸಂಸ್ಥೆ ಎಂದರೆ ಕಂಪನಿಗಳ ಕಾಯ್ದೆಯಡಿ ನೋಂದಣಿಯಾದ ಕಂಪನಿಗಳು. ಇಂಥ ಕಂಪನಿಗಳು ಸಾಲ ನೀಡಿಕೆ, ಷೇರುಗಳ ಖರೀದಿ, ಬಾಂಡ್, ಸ್ಟಾಕ್, ಡಿಬೆಂಚರ್ ಮತ್ತು ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳು ಬಿಡುಗಡೆ ಮಾಡುವ ಭದ್ರತಾ ಪತ್ರಗಳ ಖರೀದಿ ವಹಿವಾಟನ್ನು ನಡೆಸುತ್ತವೆ. ಬ್ಯಾಂಕೇತರ ಸಂಸಥೆಗಳು ಹೂಡಿಕೆ ಮಾಡಬಹುದು ಹಾಗೂ ಸಾಲ ನೀಡಬಹುದಾದ್ದರಿಂದ, ಇವುಗಳ ಚಟುವಟಿಕೆಗಳು ಬ್ಯಾಂಕಿಗಿಂತ ಭಿನ್ನ. ಆದರೆ ಸಂಸ್ಥೆಗಳು ಡಿಮಾಂಡ್ ಡೆಪಾಸಿಟ್ ಸ್ವೀಕರಿಸಲು ಅವಕಾಶವಿಲ್ಲ ಹಾಗೂ ಪಾವತಿ ಹಾಗೂ ವಿಳೇವಾರಿ ವ್ಯವಸ್ಥೆಯ ಭಾಗವಾಗಲು ಸಾಧ್ಯವಿಲ್ಲ. ಅಂದರೆ ಇವುಗಳು ನೀಡುವ ಚೆಕ್ಕುಗಳನ್ನು ಸ್ವಯಂ ಆಗಿ ನಗದೀಕರಿಸಿಕೊಳ್ಳಲು ಅವಕಾಶವಿಲ್ಲ.

Comment