IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಯುಐಡಿಎಐನಿಂದ ನೀಲಿ ಬಣ್ಣದ ಬಾಲ ಆಧಾರ್

ಯುಐಡಿಎಐನಿಂದ ನೀಲಿ ಬಣ್ಣದ ಬಾಲ ಆಧಾರ್

ದೇಶದಲ್ಲಿ ಆಧಾರ್ ಕಾರ್ಡ್ಗಳನ್ನು ವಿತರಿಸುವ ಅಧಿಕೃತ ಸಂಸ್ಥೆಯಾದ ಯುನೀಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ), ಐದು ವರ್ಷದ ಕೆಳಗಿನ ಮಕ್ಕಳಿಗಾಗಿ ಬಾಲ ಆಧಾರ್ ಎಂಬ ವಿಶೇಷ ಕಾರ್ಡ್ಗಳನ್ನು ಪರಿಚಯಿಸಿದೆ.

ಬಾಲ ಆಧಾರ್ ಎಂದರೆ ಅಕ್ಷರಶಃ ಮಕ್ಕಳ ಆಧಾರ್ ಕಾರ್ಡ್. ಇದನ್ನು ಸಾಮಾನ್ಯ ಆಧಾರ್ ಕಾರ್ಡ್ಗಳಿಗಿಂತ ಭಿನ್ನವಾಗಿ ಗುರುತಿಸಲು ಸಾಧ್ಯವಾಗುವಂತೆ ನೀಲಿ ಬಣ್ಣದಲ್ಲಿ ನೀಡಲಾಗುತ್ತದೆ. ಇದನ್ನು ಪೋಷಕರ ಆಧಾರ್ ಕಾರ್ಡ್ ಜತೆ ಸಂಪರ್ಕಿಸಲಾಗುತ್ತದೆ. ಆದರೆ ಬಾಲ ಆಧಾರ್ ಕಾರ್ಡ್ ಯಾವುದೇ ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡಿರುವುದಿಲ್ಲ.

ಅಗತ್ಯತೆ

ಐದು ವರ್ಷಕ್ಕಿಂತ ಕೆಳಗಿನ ಮಕ್ಕಳದಲ್ಲಿ ಬಯೋಮೆಟ್ರಿಕ್ಸ್ ಅಭಿವೃದ್ಧಿಯಾಗಿರುವುದಿಲ್ಲ. ಆದ್ದರಿಂದ ಮಕ್ಕಳ ಆಧಾರ್ ಡಾಟಾ ನೋಂದಣಿಯ ವೇಳೆ, ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ವಿವರಗಳನ್ನು ಇದರಲ್ಲಿ ಸೇರಿಸುವುದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.

ಪ್ರಮುಖ ಅಂಶಗಳು

ಬಾಲ ಆಧಾರ್ ಕಾರ್ಡ್ಗಳು ಐರಿಸ್ ಸ್ಕ್ಯಾನ್ ಅಥವಾ ಬೆರಳಚ್ಚಿಣಂಥ ಯಾವುದೇ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಹೊಂದಿರುವುದಿಲ್ಲ. ಇಂಥ ಗುರುತಿಸುವಿಕೆ ಅಗತ್ಯವಾದಾಗ ಪೋಷಕರು ಮಕ್ಕಳನ್ನು ಕರೆ ತರಬೇಕಾಗುತ್ತದೆ. ಆದರೆ ಒಂದು ಬಾರಿ ಮಗುವಿಗೆ ಐದು ವರ್ಷ ಕಳೆದ ಬಳಿಕ, ಕಾಯಂ ಆಧಾರ್ ಕಾರ್ಡ್ ವಿತರಿಸಲಾಗುತ್ತದೆ. ಇದರಲ್ಲಿ ಬಯೋಮೆಟ್ರಿಕ್ ವಿವರಗಳು ಕೂಡಾ ಇರುತ್ತವೆ. ಬಾಲ ಆಧಾರ್ ಕಾರ್ಡ್ಗಳು ತೀರಾ ಅನಿವಾರ್ಯವೇನಲ್ಲ. ಆದರೆ ಮಕ್ಕಳು ಬೆಳೆಯುವ ವೇಳೆ ಇದು ಅಗತ್ಯವಾಗುತ್ತದೆ. ಸರ್ಕಾರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಥವಾ ಉನ್ನತ ಶಿಕ್ಷಣಕ್ಕೆ ಅನುದಾನ ಪಡೆಯಲು ಇದು ಕಡ್ಡಾಯವಾಗಿರುತ್ತದೆ. ಆಧಾರ್ ನಿಯಮಾವಳಿ ಪ್ರಕಾರ, ಬಾಲ ಆಧಾರ್ ಕಾರ್ಡ್ಗಳನ್ನು ಬಯೋಮೆಟ್ರಿಕ್ ದಾಖಲೆ ಹೊಂದಿರುವ ಸೂಕ್ತ ಆಧಾರ್ ಕಾರ್ಡ್ಗಳಾಗಿ ಮಗುವಿಗೆ ಐದು ವರ್ಷ ತುಂಬಿದಾಗ ಬದಲಾಯಿಸಬೇಕಾಗುತ್ತದೆ.

ಆಧಾರ್

ಆಧಾರ್ ಎನ್ನುವುದು 12 ಅಂಕೆಯ ವಿಶಿಷ್ಟ ಗುರುತಿಸುವಿಕೆ ಸಂಖ್ಯೆಯಾಗಿದ್ದು, ಇದು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯಾಗಿ ದೇಶದ ಯಾವುದೇ ಭಾಗದಲ್ಲಿ ಇದನ್ನು ಬಳಸಬಹುದು. ಇದನ್ನು ವಿಶ್ವದ ಅತಿದೊಡ್ಡ ಗುರುತಿಸುವಿಕೆ ಯೋಜನೆ ಎಂದು ಪರಿಗಣಿಸಲಾಗಿದೆ. ಇದು ನಿವಾಸಿಗಳ ಬಯೋಮೆಟ್ರಿಕ್ ಮತ್ತು ಜನಸಂಖೈ ಅಂಕಿ ಅಂಶಗಳನ್ನು ಸಂಗ್ರಹಿಸುತ್ತದೆ ಹಾಗೂ ಕೇಂದ್ರೀಕೃತ ಡಾಟಾಬೇಸ್ ಮೂಲಕ ಇದನ್ನು ದಾಸ್ತಾನು ಮಾಡುತ್ತದೆ. ಇದನ್ನು ಯುನೀಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಬಿಡುಗಡೆ ಮಾಡುತ್ತದೆ.

Comment