IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ತಮಿಳುನಾಡಿನಲ್ಲಿ ಅಮ್ಮಾ ದ್ವಿಚಕ್ರ ವಾಹನ ಯೋಜನೆಗೆ ಪ್ರಧಾನಿ ಚಾಲನೆ

ತಮಿಳುನಾಡಿನಲ್ಲಿ ಅಮ್ಮಾ ದ್ವಿಚಕ್ರ ವಾಹನ ಯೋಜನೆಗೆ ಪ್ರಧಾನಿ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ಸಬ್ಸಿಡಿ ದರದ ಅಮ್ಮಾ ದ್ವಿಚಕ್ರ ವಾಹನ ಯೋಜನೆಗೆ ಚಾಲನೆ ನೀಡಿದರು. ಇದು ಉದ್ಯೋಗಸ್ಥ ಮಹಿಳೆಯರಿಗೆ ದ್ವಿಚಕ್ರವಾಹನವನ್ನು ಸಬ್ಸಿಡಿ ದರದಲ್ಲಿ ಒದಗಿಸುವ ಯೋಜನೆಯಾಗಿದ್ದು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ 70ನೇ ಹುಟ್ಟುಹಬ್ಬದ ನೆನಪಿಗಾಗಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಇದರ ಜತೆಗೆ 70 ಲಕ್ಷ ಗಿಡನೆಡುವ ಯೋಜನೆಗೂ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಅಮ್ಮಾ ದ್ವಿಚಕ್ರ ವಾಹನ ಯೋಜನೆ

ಯೋಜನೆಯಡಿ ಪ್ರತಿ ಫಲಾನುಭವಿ ಮಹಿಳೆಯರಿಗೆ ದ್ವಿಚಕ್ರ ವಾಹನದ ಶೇಕಡ 50ರಷ್ಟು ಅಥವಾ 25 ಸಾವಿರ ರೂಪಾಯಿ ಅನುದಾನ ನೀಡಲಾಗುತ್ತದೆ. ಯೋಜನೆಯಡಿ ಪ್ರತಿ ವರ್ಷ ಒಂದು ಲಕ್ಷ ಮಹಿಳೆಯರಿಗೆ ನೆರವು ನೀಡಲು ನಿರ್ಧರಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಇರುವ ಸಬ್ಸಿಡಿಯುಕ್ತ ಸ್ಕೂಟರ್ ಯೋಜನೆಯನ್ನು ಜಯಲಲಿತಾ ಅವರು ಕಳೆದ ಚುನಾವಣೆಯ ವೇಳೆ ಆಶ್ವಾಸನೆಯಾಗಿ ನೀಡಿದ್ದರು. 2016 ವಿಧಾನಸಭಾ ಚುನಾವಣೆಯ ವೇಳೆ, ಉದ್ಯೋಗಸ್ಥ ಮಹಿಳೆಯರು ದ್ವಿಚಕ್ರ ವಾಹನ ಖರೀದಿಸಲು ಶೇಖಡ 50ರಷ್ಟು ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದರು.

Comment