IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತೀಯ ನೌಕಾಪಡೆಯಿಂದ ಮಿಲನ್ ಕಾರ್ಯಾಚರಣೆ

ಭಾರತೀಯ ನೌಕಾಪಡೆಯಿಂದ ಮಿಲನ್ ಕಾರ್ಯಾಚರಣೆ

ಭಾರತೀಯ ನೌಕಾಪಡೆ 2018 ಮಾರ್ಚ್ ತಿಂಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ಬ್ಲೇರ್ನಲ್ಲಿ 16 ದೇಶಗಳ ಜಂಟಿ ಬಹುರಾಷ್ಟ್ರೀಯ ಕಾರ್ಯಾಚರಣೆ ಹಮ್ಮಿಕೊಂಡಿದೆ. ಮಾರ್ಚ್ 6ರಿಂದ 13ರವರೆಗೆ ಇದು ನಡೆಯಲಿದೆ. ಎಂಟು ದಿನಗಳ ಮೆಗಾ ನೌಕಾ ಕಾರ್ಯಾಚರಣೆಯು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಅಧೀನದಲ್ಲಿ ನಡೆಯಲುತ್ತದೆ. ಫ್ರೆಂಡ್ಶಿಪ್ ಅಕ್ರಾಸ್ ಸೀಸ್ ಎನ್ನುವುದು ಬಾರಿಯ ಘೋಷವಾಕ್ಯವಾಗಿದೆ.

ಪ್ರಮುಖ ಅಂಶಗಳು

ಮಿಲನ್-2018 ಕಾರ್ಯಾಚರಭೆಯು ವಿಭಿನ್ನ ವೃತ್ತಿಪರ ಕಾರ್ಯಾಚರಣೆಗಳು ಮತ್ತು ವಿಚಾರಸಂಕಿರಣಗಳು, ಸಾಮಾಜಿಕ ಸಮಾರಂಭಗಳು ಮತ್ತು ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ. ಸಮಾರಂಭದಲ್ಲಿ ನಡೆಯುವ ಸಂವಾದಗಳು ಮುಖ್ಯವಾಗಿ ಸಾಗರದಲ್ಲಿ ಉತ್ತರ ವ್ಯವಸ್ಥೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಒಳ್ಳೆಯ ಯೋಚನೆಗಳ ವಿನಿಮಯ ಮತ್ತು ಸಮುದ್ರದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಪ್ರಾದೇಶಿಕ ಸಹಕಾರವನ್ನು ವಿಸ್ತರಿಸುವ ಉದ್ದೇಶ ಹೊಂದಿವೆ.

ಬಾರಿಯ ಕಾರ್ಯಾಚರಣೆಯಲ್ಲಿ ಭಾಗವಹಿಸುವ 16 ದೇಶಗಳೆಂದರೆ ಆಸ್ಟ್ರೇಲಿಯಾ, ಮಲೇಷ್ಯಾ, ಮಾಲ್ಡೀವ್ಸ್, ಮರೀಶಿಯಸ್, ಮ್ಯಾನ್ಮಾರ್, ನ್ಯೂಜಿಲೆಂಡ್, ಓಮನ್, ವಿಯೇಟ್ನಾಂ, ಥಾಯ್ಲೆಂಡ್, ತಾಂಜಾನಿಯಾ, ಶ್ರೀಲಂಕಾ, ಸಿಂಗಾಪುರ, ಬಾಂಗ್ಲಾದೇಶ, ಇಂಡೋನೇಷ್ಯಾ, ಕೀನ್ಯ ಹಾಗೂ ಕಾಂಬೋಡಿಯಾ.

ಮಿಲನ್ 2018ರಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಾಮಾಜಿಕ ಸಂವಾದದಲ್ಲಿ ಭಾರತದ ನೌಕಾಪಡೆ ಮತ್ತು ಭಾರತೀಯ ಸೇನೆಯ ಬ್ಯಾಂಡ್ ಪ್ರದರ್ಶನ, ಹಡಗುಗಳ ಭೇಟಿ ಮತ್ತು ವರ್ಣರಂಜಿತ ಸಾಂಸ್ಕøತಿಕ ಸಂಜೆಗಳು ಒಳಗೊಂಡಿರುತ್ತವೆ. ಮಿಲನ್ 2018 ಮುಖ್ಯ ಉದ್ದೇಶವೆಂದರೆ ಭಾರತದ ಸಮೃದ್ಧ ಪರಂಪರೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಹಜ ಸೌಂದರ್ಯವನ್ನು ವಿದೇಶಿ ಪ್ರವಾಸಿಗಳಿಗೆ ಪ್ರದರ್ಶಿಸುವುದು.

ಮಿಲನ್ ಕಾರ್ಯಾಚರಣೆ

ಮಿಲನ್ ಕಾರ್ಯಾಚರಣೆಯು ವಿವಿಧ ದೇಶಗಳ ನೌಕಾಪಡೆಗಳು ನಡೆಸುವ ದ್ವೈವಾರ್ಷಿಕ ಕಾರ್ಯಾಚರಣೆಯಾಗಿದುದ, ಭಾರತೀಯ ನೌಕಾಪಡೆ ಇದನ್ನು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನಡಿ ನಡೆಸುತ್ತದೆ. ಇದು 1995ರಲ್ಲಿ ಮೊಟ್ಟಮೊದಲ ಬಾರಿಗೆ ನಡೆಯಿತು. ಮೊದಲ ವರ್ಷದ ಕಾರ್ಯಾಚರಣೆಯಲ್ಲಿ ಕೇವಲ ನಾಲ್ಕು ನೌಕಾಪಡೆಗಳು ಮಾತ್ರ ಭಾಗವಹಿಸಿದ್ದವು. ಇದೀಗ ಕಾರ್ಯಾಚರಣೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಕಾರ್ಯಾಚರಣೆಯಾಗಿ ಖ್ಯಾತಿ ಪಡೆದಿದೆ. ಈಗ ಬಂಗಾಳಕೊಲ್ಲಿ ಮತ್ತು ಆಗ್ನೇಯ ಏಷ್ಯಾ ದೇಶಗಳ ಹಾಗೂ ಹಿಂದೂಮಹಾಸಾಗರ ಪ್ರದೇಶದ ದೇಶಗಳನ್ನು ಆಕರ್ಷಿಸುತ್ತಿದೆ. ದೇಶಗಳ ನೌಕಾಪಡೆಗಳು ಒಂದೇ ವೇದಿಕೆಯಡಿ ಸೇರಲು ಇದು ಅವಕಾಶ ಒದಗಿಸುವ ಜತೆಗೆ, ಪ್ರದೇಶದ ದೇಶಗಳು ಸಮಾನ ಕಳವಳವನ್ನು ಚರ್ಚಿಸಲು ಮತ್ತು ಪರಸ್ಪರ ಸ್ನೇಹದ ನೌಕಾಪಡೆಗಳು ಆಳವಾದ ಸಹಕಾರವನ್ನು ಸ್ಥಾಪಿಸಲು ಕೂಡಾ ಇದು ನೆರವಾಗುತ್ತದೆ.

Comment