IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆರ್ ಐಎಸ್‍ಇ ಯೋಜನೆ: ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಐಐಟಿಗಳಿಗೆ ಶೇಕಡ 25 ಸಾಲ

ಆರ್ ಐಎಸ್‍ಇ ಯೋಜನೆ: ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಐಐಟಿಗಳಿಗೆ ಶೇಕಡ 25 ಸಾಲ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳು ಮೂಲಸೌಕರ್ಯಗಳ ಮತ್ತು ಶಿಕ್ಷಣ ವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ದೊಡ್ಡ ಮೊತ್ತದ ಸಾಲವನ್ನು ಪಡೆಯಲಿವೆ. ಇದು ಕೇಂದ್ರೀಯವಾಗಿ ನಿರ್ವಹಿಸಲ್ಪಡುವ ಸಂಸ್ಥೆಗಳಿಗೆ ಹೊಸ ಅನುದಾನ ಮಾದರಿ ಯೋಜನೆಯಾಗಿದೆ. ಇದು ಸಿಎಫ್ಐಗಳಿಗೆ ಹಣಕಾಸು ವ್ಯವಸ್ಥೆಯನ್ನು ಬದಲಿಸಲಿದ್ದು, ಅನುದಾನದ ನೆರವಿನ ಬದಲಾಗಿ, ಹೆಚ್ಚು ನಿಧಿಯನ್ನು ದೊರಕಿಸಿಕೊಡಲು ಸಾಲವನ್ನು ನೀಡಲಿದೆ. ಇದರಿಂದ ಹೆಚ್ಚಿನ ಹೊಣೆಗಾರಿಕೆ ಹಾಗೂ ಸಕಾಲಿಕವಾಗಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಇದಕ್ಕೂ ಮುನ್ನ ಸಿಎಫ್ಐಗಳು ವಾರ್ಷಿಕ 10 ಸಾವಿರ ಕೋಟಿ ರೂಪಾಯಿಯ ಬಜೆಟ್ ಅನುದಾನವನ್ನು ಬಳಸಿಕೊಳ್ಳುತ್ತಿದ್ದವು.

ರೈಸ್ ಯೋಜನೆ

ರೈಸ್ ಯೋಜನೆಯನ್ನು 2017-18 ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಇದು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆ ವೆಚ್ಚದ ಅನುದಾನವನ್ನು ಒದಗಿಸುವ ಗುರಿ ಹೊಂದಿದೆ. ಯೋಜನೆಯಡಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಐಐಟಿಗಳು, ಐಐಎಂಗಳು, ಎನ್ಐಟಿಗಳು ಮತ್ತು ಐಐಎಸ್ಸಿಆರ್ ಸೇರಿದಂತೆ ಎಲ್ಲ ಕೇಂದ್ರ ಅನುದಾನಿತ ಸಂಸ್ಥೆಗಳು ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಹೊಸ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಹಾಲಿ ಇರುವ ಮೂಲಸೌಕರ್ಯ ವಿಸ್ತರಿಸಲು ಒಂದು ಲಕ್ಷ ಕೋಟಿ ರೂಪಾಯಿವರೆಗಿನ ಸಾಲ ಪಡೆಯಬಹುದಾಗಿದೆ. ನೆರವನ್ನು ಪುನರ್ರಚಿತ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ (ಎಚ್ಇಎಫ್) ಎಂಬ ಬ್ಯಾಂಕೇತರ ಹಣಕಾಸು ಕಂಪನಿಯ ಮೂಲಕ ಒದಗಿಸಲಾಗುತ್ತದೆ. ಆರ್ಐಎಸ್ ಯೋಜನೆಯ ಅನ್ವಯ ಸಾಲದ ವಿತರಣೆ ಕೆಳಗಿನಂತಿರುತ್ತದೆ.

ಐಐಟಿಗಳಿಗೆ 25 ಸಾವಿರ ಕೋಟಿ ರೂಪಾಯಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ 20 ಸಾವಿರ ಕೋಟಿ, ಎನ್ಐಟಿಗಳಿಗೆ 11300 ಕೋಟಿ, ಮಹತ್ವದ ಸಂಸ್ಥೆಗಳಿಗೆ 10 ಸಾವಿರ ಕೋಟಿ, ಐಐಎಸ್ಇಆರ್ಗಳಿಗೆ 5 ಸಾವಿರ ಕೋಟಿ, ಐಐಎಂಗಳಿಗೆ 4500 ಕೋಟಿ, ಐಐಐಟಿ (ಪಿಪಿಪಿ ಮಾದರಿಗಳಿಗೆ) 3000 ಕೋಟಿ, ಐಐಐಟಿ (ಸರ್ಕಾರಿ) 2000 ಕೋಟಿ, ಭಾಷಾ ಸಂಸ್ಥೆಗಳು 1000 ಕೋಟಿ, ಇತರ ಕೇಂದ್ರೀಯ ನೆರವಿನ ಸಂಸ್ಥೆಗಳಿಗೆ 1700 ಕೋಟಿ, ಪ್ಲಾನಿಂಗ್ ಮತ್ತು ವಾಸ್ತುಶಿಲ್ಪ ಶಾಲೆಗಳಿಗೆ 1500 ಕೋಟಿ, ಹೊಸ ಸಂಸ್ಥೆಗಳಿಗೆ 6000 ಕೋಟಿ ಹಾಗೂ ಸಂಶೋಧನೆ ಉತ್ತೇಜನಕ್ಕೆ 9000 ಕೋಟಿ ರೂಪಾಯಿ ಒದಗಿಸಲಾಗುತ್ತದೆ.

ಪ್ರಮುಖ ಅಂಶಗಳು

ರೈಸ್ ಯೋಜನೆ ಆರಂಭದ ಮೂಲಕ ಕೇಂದ್ರೀಯ ನೆರವಿನ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲ ಹಣಕಾಸು ಮತ್ತು ಮೂಲಸೌಕರ್ಯ ಅಭಿವೃದ್ಧಿಗಳನ್ನು ಎಚ್ಇಎಫ್ ಮೂಲಕವೇ ಮಾಡಲಾಗುತ್ತದೆ. ಇದನ್ನು ಸರ್ಕಾರ ಕಂಪನಿ (ಚಾರಿಟಬಲ್ ಉದ್ದೇಶ ಕಂಪನಿ) ಯಾಗಿ ಸೆಕ್ಷನ್ 8 ಅನ್ವಯ ರಚಿಸಿದೆ. ಕೇಂದ್ರೀಯ ಸಂಸ್ಥೆಗಳಿಗೆ 10 ವರ್ಷದ ಸಾಲವನ್ನು ನೀಡುವ ಸಲುವಾಗಿ ಮಾರುಕಟ್ಟೆಯಿಂದ ಸಂಪನ್ಮೂಲ ಕ್ರೋಢೀಕರಿಸುವುದು ಇದರ ಮುಖ್ಯ ಉದ್ದೇಶ.

ಈಕ್ವಿಟಿ ಷೇರು: ಆರ್ಐಎಸ್ ಯೋಜನೆಯಡಿ ಒಂದು ಲಕ್ಷ ಕೋಟಿ ರೂಪಾಯಿಯ ನಿಧಿ ಕ್ರೋಢೀಕರಿಸುವ ಸಲುವಾಗಿ ಎಚ್ಇಎಫ್ 10 ಸಾವಿರ ಕೋಟಿ ಈಕ್ವಿಟಿಗಳ ಅಗತ್ಯ ಹೊಂದಿದೆ. ಪೈಕಿ 8500 ಕೋಟಿ ರೂಪಾಯಿಗಳನ್ನು ಸರ್ಕಾರ ಒದಗಿಸಲಿದ್ದು, ಉಳಿದ ಮೊತ್ತವನ್ನು ಎಚ್ಇಎಪ್ ಸ್ಥಾಪನೆಗೆ ಸರ್ಕಾರದ ಜತೆ ಪಾಲುದಾರಿಕೆ ಕೈಗೊಂಡಿರುವ ಕೆನರಾ ಬ್ಯಾಂಕ್ ನೀಡಲಿದೆ. ಜತೆಗೆ ಇತರ ಕಾರ್ಪೊರೇಷನ್ಗಳು ಕೂಡಾ ನೆರವು ನೀಡಲಿವೆ.

ಗುರಿ: ಎಚ್ಇಎಫ್ ಮಂಜೂರು ಮಾಡಿದ ಯೋಜನೆಯ ಅನ್ವಯ ಎಲ್ಲ ಮೂಲಸೌಕರ್ಯ ಮತ್ತು ಸಂಶೋಧನಾ ಯೋಜನೆಗಳು 2022 ಡಿಸೆಂಬರ್ ಒಳಗಾಗಿ ಮುಕ್ತಾಯವಾಗಬೇಕು.

ಸಂಪನ್ಮೂಲ ಕ್ರೋಢೀಕರಣ: ಎಚ್ಇಎಫ್ ನೇರವಾಗಿ ವ್ಯಾಪಾರಿಗಳಿಗೆ, ಗುತ್ತಿಗೆದಾರರಿಗೆ ನೇರವಾಗಿ ಹಣ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಕಾರ್ಯ ನಿರ್ವಹಣೆ ಏಜೆನ್ಸಿ ಮತ್ತು ಶಿಕ್ಷಣ ಸಂಸ್ಥೆಯ ಪ್ರಮಾಣಪತ್ರ ಅಗತ್ಯವಾಗಿರುತ್ತದೆ. ಆರ್ಐಎಸ್ ಯೋಜನೆಯಡಿ ಸರ್ಕಾರದಿಂದ ಪಡೆದ ಸಾಲವನ್ನು 10 ವರ್ಷಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ವಿಭಿನ್ನ ಸಂಸ್ಥೆಗಳಿಗೆ ಸಾಲ ಮರುಪಾವತಿ ಮಾದರಿಯೂ ವಿಭಿನ್ನವಾಗಿರುತ್ತವೆ. ಆಯಾ ಸಂಸ್ಥೆಗಳ ಆಂತರಿಕ ಆದಾಯವನ್ನು ಆಧರಿಸಿ ಸಾಲ ಮರುಪಾವತಿ ವಿಧಾನವನ್ನು ನಿರ್ಧರಿಸಲಾಗುತ್ತದೆ.

Comment