IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಬಿಹಾರದಲ್ಲಿ ನೀರು ಸರಬರಾಜು ಸುಧಾರಣೆ ಯೋಜನೆಗೆ ಎಡಿಬಿ ಜತೆ ಭಾರತ ಸಾಲ ಒಪ್ಪಂದ

ಬಿಹಾರದಲ್ಲಿ ನೀರು ಸರಬರಾಜು ಸುಧಾರಣೆ ಯೋಜನೆಗೆ ಎಡಿಬಿ ಜತೆ ಭಾರತ ಸಾಲ ಒಪ್ಪಂದ

ಬಿಹಾರದ ಭಾಗಲ್ಪುರ ಮತ್ತು ಗಯಾ ಪಟ್ಟಣಗಳ ಕುಡಿಯುವ ನೀರು ವ್ಯವಸ್ಥೆ ಸುಧಾರಿಸುವ ಮತ್ತು ವಿಸ್ತರಿಸುವ ಯೋಜನೆಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕಿನಿಂದ 84 ದಶಲಕ್ಷ ಡಾಲರ್ ನೆರವು ಪಡೆಯುವ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಮಾಡಿದೆ. ಸಾಲದ ಅವಧಿ 25 ವರ್ಷಗಳಾಗಿದ್ದು, ಇದರಲ್ಲಿ ಐದು ವರ್ಷಗಳ ಹೆಚ್ಚುವರಿ ಅವಧಿಯೂ ಸೇರಿರುತ್ತದೆ. ಇದರ ಬಡ್ಡಿದರ ಲಂಡನ್ ಇಂಟರ್ಬ್ಯಾಂಕ್ ನೀಡುವ ದರಕ್ಕೆ ಅನುಗುಣವಾದ ಎಡಿಬಿಯ ಸಾಲ ಸೌಲಭ್ಯಕ್ಕೆ ಅನುಗುಣವಾಗಿ ನಿರ್ಧರಿಸಲ್ಪಡುತ್ತದೆ ಹಾಗೂ ಇದರ ಬದ್ಧತಾ ಶುಲ್ಕ ವಾರ್ಷಿಕ 0.15 ಶೇಕಡ ಆಗಿರುತ್ತದೆ.

ಪ್ರಮುಖ ಅಂಶಗಳು

ಒಪ್ಪಮದವು ಎರಡನೇ ಕಂತಿನ ಸಾಲ ಒಪ್ಪಂದವಾಗಿದ್ದು, ಬಹು ಕಂತಿನ 200 ದಶಲಕ್ಷ ಡಾಲರ್ ಹಣವನ್ನು ಬಿಹಾರ ನಗರ ಅಬಿವೃದ್ಧಿ ಹೂಡಿಕೆ ಯೋಜನೆಗೆ ನೀಡಲು ಎಡಿಬಿ 2012ರಲ್ಲಿ ಅನುಮೋದನೆ ನೀಡಿತ್ತು. ಇಡೀ ಯೋಜನೆಯ ಭಾಗವಾಗಿ ಹೊಸ ಸಾಲವನ್ನು ನೀಡಲಾಗಿದೆ. ಯೋಜನೆಯಡಿ ನಗರ ಮೂಲಸೌಕರ್ಯ ಮತ್ತು ಸೇವೆಗಳನ್ನು ಬಿಹಾರದ ಗಯಾ, ಭಾಗಲ್ಪುರ, ದರ್ಬಾಂಗ ಮತ್ತು ಮುಜಾಫರ್ಪುರ ನಗರಗಳಿಗೆ ಸುಧಾರಿಸಲು ಉದ್ದೇಶಿಸಲಾಗಿದೆ.

ಎರಡನೇ ಹಂತದ ಯೋಜನೆಯು ಉತ್ತಮ ಗುಣಮಟ್ಟದ ಮತ್ತು ಸುಸ್ಥಿರ ನೀರು ಸರಬರಾಜು ಲಭ್ಯತೆಯನ್ನು ಗಯಾ ಮತ್ತು ಭಾಗಲ್ಪುರ ನಗರಗಳ ಜನತೆಗೆ ಹೆಚ್ಚಿಸಲು ನೆರವಾಗಲಿದೆ. ಎರಡು ನಗರಗಳು ರಾಷ್ಟ್ರೀಯ ನಗರ ಸೇವಾ ಗುರಿಗಳನ್ನು ಸಾಧಿಸಲು ಇದು ನೆರವಾಗಲಿದ್ದು, ಭಾರತದಲ್ಲಿ ನಗರ ಸೇವಾ ವಿತರಣೆ ಕ್ಷಮತೆಯಲ್ಲಿ ರಾಷ್ಟ್ರೀಯ ಸರಾಸರಿಯನ್ನು ಸಾಧಿಸಲು ಇದು ಪೂರಕವಾಗಲಿದೆ. ಹೂಡಿಕೆ ಯೀಜನೆಯು ನಗರ ಸ್ಥಳೀಯ ಸಂಸ್ಥೆಗಳಿಗೆ ತಮ್ಮ ಕಾರ್ಯಾಚರಣೆಗೆ ಮತ್ತು ನಿರ್ವಹಣೆಗೆ ತಲುಗುವ ವೆಚ್ಚವನ್ನು ಕೈಗೆಟುಕುವ ಶುಲ್ಕವಾಗಿ ಸಂಗ್ರಹಿಸಲು ಅನುವಾಗುವಂತೆ ನೀತಿ ವಿನ್ಯಾಸಗೊಳಿಸಲು ನೆರವು ನೀಡಲಿದೆ.

ಯೋಜನೆಯ ಮಹತ್ವ

ಯೋಜನೆಯು ಉತ್ತಮ ನೀರು ನಿರ್ವಹಣೆ ಪದ್ಧತಿಯನ್ನು ಉತ್ತೇಜಿಸಲು ನೆರವಾಗಲಿದೆ. ಇದು ಇಡೀ ನಗರಗಳಲ್ಲಿ 24 ಗಂಟೆಗಳ ಕಾಲ ಅನಿಯಂತ್ರಿತ ಸಂಸ್ಕರಿತ ನೀರು ಪೂರೈಕೆ ಮಾಡಲು ನೆರವಾಗಲಿದೆ. ದಿನಕ್ಕೆ ತಲಾ 135 ಲೀಟರ್ ನೀರನ್ನು ಎರಡೂ ನಗರಗಳಲ್ಲಿ ಒದಗಿಸುವುದು ಯೋಜನೆಯ ಉದ್ದೇಶ. ಸಾಲದ ಹಣದಲ್ಲಿಯೋಜನೆಯ ಸಿವಿಲ್ ಕಾಮಗಾರಿಗಳಿಗೆ ನೆರವು ನೀಡಲಾಗುತ್ತದೆ ಹಾಗೂ ಇದು ಸುಮಾರು 11 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. 2021 ಒಳಗಾಗಿ ಸಂಸ್ಕರಿತ ನೀರು ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಯೋಜನೆಯಡಿ 400 ಮಂದಿ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ನೀಡಲಿದ್ದು, ನೀರು ಸರಬರಾಜು ವ್ಯವಸ್ಥೆಯ ವ್ಯವಸ್ಥಾಪನೆ ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಇದು ಪೂರಕವಾಗಲಿದೆ. ಮೂಲಕ ನಗರ ಸ್ಥಳೀಯ ಸಂಸ್ಥೆಗಳು ನೀರು ಸರಬರಾಜು ಕಾರ್ಯಾಚರಣೆಯ ತಾಂತ್ರಿಕ ಹಾಗೂ ಹಣಕಾಸು ನಿರ್ವಹಣೆಯನ್ನು ಸಮರ್ಥವಾಗಿ ಮಾಡಲು ಸಾಧ್ಯವಾಗಲಿದೆ.

Comment