IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತದಲ್ಲಿ ಸುಸ್ಥಿರ ನಗರಾಭಿವೃದ್ಧಿ & ಸ್ಮಾರ್ಟ್ ಸಿಟಿ: ಭಾರತ- ಜರ್ಮನಿ ಒಪ್ಪಂದ

ಭಾರತದಲ್ಲಿ ಸುಸ್ಥಿರ ನಗರಾಭಿವೃದ್ಧಿ & ಸ್ಮಾರ್ಟ್ ಸಿಟಿ: ಭಾರತ- ಜರ್ಮನಿ ಒಪ್ಪಂದ

ಭಾರತ ಹಾಗೂ ಜರ್ಮನಿ ಭಾರತದಲ್ಲಿ ಸುಸ್ಥಿರ ನಗರಾಭಿವೃದ್ಧಿ & ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿವೆ.

ಕುರಿತ ಒಪ್ಪಂದಕ್ಕೆ ಭಾರತದ ಪರವಾಗಿ ಗೃಹ ನಿರ್ಮಾಣ & ನಗರ ವ್ಯವಹಾರಗಳ ಸಚಿವಾಲಯ (ಎಂಓಎಚ್ಯುಎ) ಹಾಗೂ ಜರ್ಮನಿ ಸರ್ಕಾರದ ಪರವಾಗಿ ಡಚ್ ಗೆಸೆಲ್ಲಕಫ್ಟ್ ಫರ್ ಇಂಟರ್ನ್ಯಾಷನಲ್ ಝುಸಾಮ್ಮೆನಬ್ರಿಟ್ (ಜಿಐಝೆಡ್), ಜಿಎಂಬಿಎಚ್, ಇಂಡಿಯಾ ಸಹಿ ಮಾಡಿವೆ.

ಪ್ರಮುಖ ಅಂಶಗಳು

ಯೋಜನೆಯ ಪ್ರಮುಖ ಉದ್ದೇಶವೆಂದರೆ, ಸುಸ್ಥಿರ ನಗರಾಭಿವೃದ್ಧಿಯ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅನ್ವಯಿಸುವುದು. ಅಂದರೆ ಇದಕ್ಕೆ ಪೂರಕವಾಗಿ ನಗರ ಮೂಲ ಸೌಕರ್ಯ ಸೇವೆಗಳು ಮತ್ತು ಗೃಹನಿರ್ಮಾಣವನ್ನು ಭಾರತದ ಆಯ್ದ ನಗರಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲಿ ಕೈಗೊಳ್ಳುವುದು. ಇದು ಸ್ಮಾರ್ಟ್ ಸಿಟಿಗಳಲ್ಲಿ ಸುಸ್ಥಿರ ನಗರಾಭಿವೃದ್ಧಿಯ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅನ್ವಯಿಸುವುದು. ಇದಕ್ಕೆ ಪೂರಕವಾಗಿ ನಗರ ಮೂಲ ಸೌಕರ್ಯ ಸೇವೆಗಳು ಮತ್ತು ಗೃಹನಿರ್ಮಾಣವನ್ನು ಕೂಡಾ ಕೈಗೊಳ್ಳಲಿದೆ. ಸ್ಮಾರ್ಟ್ ಸಿಟಿಗಳಿಗೆ ಅಗತ್ಯವಾದ ತಂತ್ರಜ್ಞಾನ ಸಹಕಾರ ನೀಡಿ, ಸಮಗ್ರ ಯೋಜನೆ, ಕೈಗೆಟುಕುವ ದರದ ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ಬೆಂಬಲ ನೀಡಲಿದೆ. ತಾಂತ್ರಿಕ ಸಹಕಾರ ಕ್ರಮಗಳು, ಸುಸ್ಥಿರ ನಗರಾಭಿವೃದ್ಧಿ ದೃಷ್ಟಿಕೋನವನ್ನು ಬೆಂಬಲಿಸಿದ್ದು, ಸಮಗ್ರ ಯೋಜನೆ, ಕೈಗೆಟುಕುವ ದರದ ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬೆಂಬಲ ನೀಡಲಿದೆ. ನೀರು, ತ್ಯಾಜ್ಯ ನೀರು ಮತ್ತು ಘನ ತ್ಯಾಜ್ಯ ನಿರ್ವಹಣೆ ಮತ್ತು ಚಲನೆ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹರಿಸಲಿದೆ.

ಸುಸ್ಥಿತ ನಗರಾಭಿವೃದ್ಧಿ ಯೋಜನೆ- ಭಾರತದಲ್ಲಿ ಸ್ಮಾರ್ಟ್ ಸಿಟಿ ಯೋಜನೆ

ಯೋಜನೆಗೆ ಜರ್ಮನ್ ಫೆಡರಲ್ ಮಿನಿಸ್ಟ್ರಿ ಆಫ್ ಎಕನಾಮಿಕ್ ಕೋ ಆಪರೇಷನ್ ಅಂಡ್ ಡೆವಲಪ್ಮೆಂಟ್ ನೆರವು ನೀಡಲಿದೆ. ಇದನ್ನು ನಗರಾಭಿವೃದ್ಧಿ ಮತ್ತು ಗೃಹನಿರ್ಮಾಣ ಸಚಿವಾಲಯ ಹಾಗೂ ಜಿಐಝೆಡ್ ಇಂಡಿಯಾ ಜಂಟಿಯಾಗಿ ಅನುಷ್ಟಾನಗೊಳಿಸಲಿವೆ. ಇದು ಭಾರತ ರಾಷ್ಟ್ರೀಯ ನಗರ ಮಿಷನ್, ಸ್ಮಾರ್ಟ್ ಸಿಟಿ ಮಿಷನ್ಗಳಂಥ ಯೋಜನೆಗಳಲ್ಲಿ ಸುಸ್ಥಿರ ನಗರ ಅಭಿವೃದ್ಧಿಪಡಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ನೆರವಾಗಲಿದೆ. ಇದು ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) 11ನೇ ಸಂಖ್ಯೆಯ ಗುರಿಗೆ ಸಂಬಂಧಿಸಿದೆ. ನಗರಗಳನ್ನು ಹೆಚ್ಚು ಸೇರ್ಪಡೆಯ, ಸುರಕ್ಷಿತ, ಚೇತೋಹಾರಿ ಮತ್ತು ಸುಸ್ಥಿರವಾಗಿ ರೂಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಯೋಜನೆಯು ಮೂರು ವರ್ಷಗಳ ಅವಧಿಗೆ ಮುಂದುವರಿಯುತ್ತದೆ. 2018ರಿಂದ 2020 ಡಿಸೆಂಬರ್ವರೆಗೂ ಇದರ ಅವಧಿ ಇದ್ದು, ಜರ್ಮನಿ 80 ಲಕ್ಷ ಯೂರೊ ನೆರವು ನೀಡಲಿದೆ.

Comment