IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭ್ರಷ್ಟರಾಷ್ಟ್ರ ಸೂಚ್ಯಂಕದಲ್ಲಿ ಭಾರತಕ್ಕೆ 81ನೇ ಸ್ಥಾನ

ಭ್ರಷ್ಟರಾಷ್ಟ್ರ ಸೂಚ್ಯಂಕದಲ್ಲಿ ಭಾರತಕ್ಕೆ 81ನೇ ಸ್ಥಾನ

ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಬಿಡುಗಡೆ ಮಾಡಿದ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ ವಿಶ್ವದ 180 ದೇಶಗಳ ಪೈಕಿ 81ನೇ ರ್ಯಾಂಕಿಂಗ್ ಪಡೆದಿದೆ. 2016 ಸೂಚ್ಯಂಕದಲ್ಲಿ 79ನೇ ಸ್ಥಾನದಲ್ಲಿದ್ದ ಭಾರತ ಎರಡು ರ್ಯಾಂಕ್ನಷ್ಟು ಕುಸಿತ ಕಂಡಿದೆ. ಭಾರತ ಒಟ್ಟು 40 ಅಂಕಗಳನ್ನು ಪಡೆದಿದೆ.

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಶೂನ್ಯದಿಂದ (ಕಡು ಭ್ರಷ್ಟ ದೇಶ) 100 (ತೀರಾ ಸ್ಪಚ್ಛ ದೇಶ) ಅಂಕವರೆಗೆ ಅಂಕಗಳನ್ನು ನೀಡಲಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಮನೆಮಾಡಿರುವ ಭ್ರಷ್ಟಾಚಾರಕ್ಕೆ ಅನುಗುಣವಾಗಿ ಅಂಕ ನೀಡಲಾಗುತ್ತದೆ. ಸೂಚ್ಯಂಕವನ್ನು ವಿಶ್ವಬ್ಯಾಂಕ್, ವಿಶ್ವ ಆರ್ಥಿಕ ವೇದಿಕೆ ಮತ್ತು ಇತರ ಸಂಸ್ಥೆಗಳ ಅಂಕಿ ಅಂಶಗಳನ್ನು ಆಧರಿಸಿ ಕ್ರೋಢೀಕರಿಸಲಾಗುತ್ತದೆ.

2017 ಸಿಪಿಐ ಮುಖ್ಯಾಂಶಗಳು

ನ್ಯೂಜಿಲೆಂಡ್ ಹಾಗೂ ಡೆನ್ಮಾರ್ಕ್ ಇಡೀ ವಿಶ್ವದಲ್ಲೇ ಅತ್ಯಂತ ಶುದ್ಧಹಸ್ತದ ದೇಶಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. 2017 ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ದೇಶಗಳು ಕ್ರಮವಾಗಿ 89 ಮತ್ತು 88 ಅಂಕಗಳನ್ನು ಪಡೆದಿವೆ. ಸಿರಿಯಾ, ಸೂಡಾನ್ ಮತ್ತು ಸೋಮಾಲಿಯಾ ಕಡುಭ್ರಷ್ಟ ರಾಷ್ಟ್ರಗಳು ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ, ಇವುಗಳ ಅಂಕಗಳು ಅನುಕ್ರಮವಾಗಿ 14, 12 ಮತ್ತು 9 ಆಗಿವೆ. ಪತ್ರಿಕೆಗಳಿಗೆ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಕನಿಷ್ಠ ರಕ್ಷಣೆ ಇರುವ ದೇಶಗಳನ್ನು ಸೂಚ್ಯಂಕದ ಕಟ್ಟಕಡೆಯ ರ್ಯಾಂಕಿಂಗ್ನಲ್ಲಿ ಇಡಲಾಗಿದೆ.

ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಭಾರತವನ್ನು ಅತ್ಯಂತ ಕೀಳು ಪ್ರಾದೇಶಿಕ ತಪ್ಪಿತಸ್ಥ ಎಂದು ವಿಭಾಗಿಸಲಾಗದೆ. ಪತ್ರಕರ್ತರು, ಹೋರಾಟಗಾರರು, ವಿರೋಧ ಪಕ್ಷಗಳ ಮುಖಂಡರು ಹಾಗೂ ಕಾನೂನು ಜಾರಿ ಇಲಾಖೆಯ ಅಧಿಕಾರಿಗಳು ಅಥವಾ ಕಾವಲು ಸಂಸ್ಥೆಗಳ ಸಿಬ್ಬಂದಿಯನ್ನು ಕೂಡಾ ಬೆದರಿಸಿ ಅಥವಾ ಹತ್ಯೆ ಮಾಡುವಂಥ ವಾತಾವರಣವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತ ವಿಚಾರದಲ್ಲಿ ಫಿಲಿಫೀನ್ಸ್ ಮತ್ತು ಮಾಲ್ಡೀವ್ಸ್ ದೇಶಗಳ ಜತೆಗಿದೆ. ಪಾಕಿಸ್ತಾನದ ಅಂಕ 32 ಆಗಿದ್ದು, ಚೀನಾ ಗಳಿಸಿರುವ ಅಂಕ 41. ಎರಡು ದೇಶಗಳು ಭಾರತಕ್ಕಿಂತಲೂ ಹೆಚ್ಚು ಭ್ರಷ್ಟ ರಾಷ್ಟ್ರಗಳು ಎಂದು ಪರಿಗಣಿಸಲಾಗಿದೆ.

ಬ್ರಿಕ್ಸ್ ದೇಶಗಳಲ್ಲಿ ರಷ್ಯಾ ಕಡುಭ್ರಷ್ಟ ದೇಶವಾಗಿದ್ದು, ಇತರ ಮೂರು ದೇಶಗಳಿಗಿಂತಲೂ ಹಿಂದಿದೆ. ರಷ್ಯಾದ ಅಂಕ 29. ದಕ್ಷಿಣ ಆಫ್ರಿಕಾ ಕಳೆದ ಬಾರಿಯ ಸಿಪಿಐಗೆ ಹೋಲಿಸಿದರೆ ಏಳು ಸ್ಥಾನಗಳಷ್ಟು ಕುಸಿತ ಕಂಡು 71ನೇ ಸ್ಥಾನದಲ್ಲಿದೆ.

ಐದು ಶುದ್ಧಹಸ್ತದ ದೇಶಗಳೆಂದರೆ  ನ್ಯೂಜಿಲೆಂಡ್ (89), ಡೆನ್ಮಾರ್ಕ್ (88), ಫಿನ್ಲೆಂಡ್ (85), ನಾರ್ವೆ (85) ಮತ್ತು ಸ್ವಿಡ್ಜರ್ಲೆಂಡ್ (85). ಕಳೆದ ವರ್ಷದ ಸೂಚ್ಯಂಕದಲ್ಲಿ ದೇಶಗಳು ಅನುಕ್ರಮವಾಗಿ 90, 90, 89, 85 ಮತ್ತು 86 ಅಂಕಗಳನ್ನು ಪಡೆದಿದ್ದವು.

ತಳಮಟ್ಟದಲ್ಲಿರುವ ಆರು ದೇಶಗಳೆಂದರೆ, ಸೂಡಾನ್ (16), ಯೆಮನ್ (16), ಅಪ್ಘಾನಿಸ್ತಾನ (15), ಸಿರಿಯಾ (14) ದಕ್ಷಿಣ ಸೂಡಾನ್ (12) ಮತ್ತು ಸೋಮಾಲಿಯಾ (9). ಕಳೆದ ಸೂಚ್ಯಂಕದಲ್ಲಿ ದೇಶಗಳು ಅನುಕ್ರಮವಾಗಿ 14, 14, 15, 14, 11 ಮತ್ತು 10 ಅಂಕ ಪಡೆದಿದ್ದವು.

ಭಾರತದ ನೆರೆಯ ದೇಶಗಳಲ್ಲಿ ಭೂತಾನ್ 67 ಅಂಕದೊಂದಿಗೆ 26ನೇ ಸ್ಥಾನದಲ್ಲಿದೆ. ಕಳೆದ ಬಾರಿ 65 ಅಂಕಗಳನ್ನು ಭೂತಾನ್ ಪಡೆದಿತ್ತು. ಕಳೆದ ಬಾರಿ 40 ಅಂಕಗಳನ್ನು ಪಡೆದಿದ್ದ ಚೀನಾ ಬಾರಿ ಒಂದು ಅಂಕ ಹೆಚ್ಚಿಸಿಕೊಂಡಿದ್ದು, 77ನೇ ರ್ಯಾಂಕಿಂಗ್ನಲ್ಲಿದೆ. ಭಾರತ ಕಳೆದ ಬಾರಿ ಹಾಗೂ ಬಾರಿ 40 ಅಂಕ ಪಡೆದಿದೆ. ಶ್ರೀಲಂಕಾ (38), ಪಾಕಿಸ್ತಾನ (32) ನೇಪಾಳ (31), ಮ್ಯಾನ್ಮಾರ್ (30) ಮತ್ತು ಬಾಂಗ್ಲಾದೇಶ (28) ಅಂಕಗಳನ್ನು ಪಡೆದು ಕ್ರಮವಾಗಿ 91, 117, 122, 130 ಹಾಗೂ 143ನೇ ಸ್ಥಾನದಲ್ಲಿವೆ. ದೇಶಗಳು 2016 ಸಿಪಿಐನಲ್ಲಿ ಅನುಕ್ರಮವಾಗಿ 36, 32, 29, 28 ಮತ್ತು 26 ಅಂಕಗಳನ್ನು ಪಡೆದಿದ್ದವು.

Comment