IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಧನುಷ್ ಕ್ಷಿಪಣಿ ಪ್ರಯೋಗ ಯಶಸ್ವಿ

ಧನುಷ್ ಕ್ಷಿಪಣಿ ಪ್ರಯೋಗ ಯಶಸ್ವಿ

ಅಣ್ವಸ್ತ್ರ ಸಾಮಥ್ರ್ಯದ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಸಿಡಿಸುವ ಧನುಷ್ ಸಿಡಿತಲೆ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಬಂಗಾಳಕೊಲ್ಲಿಯಲ್ಲಿ ಒಡಿಶಾ ರಾಜ್ಯದ ಪರದೀಪ್ ಸಮೀಪದಿಂದ ನೌಕಾಪಡೆ ಹಡಗಿನಿಂದ ಕ್ಷಿಪಣಿಯ ಪರೀಕ್ಷೆ ನಡೆಸಲಾಯಿತು. ಭಾರತದ ಅಣ್ವಸ್ತ್ರವನ್ನುನಿಯಂತ್ರಿಸುವ ಮತ್ತು ಅವುಗಳ ಸಹ ವಿತರಣಾ ವ್ಯವಸ್ಥೆ ಎನಿಸಿದ ಮೂರು ಸೇವೆಗಳ ಸೇನಾ ಪಡೆಯ ಆಯಕಟ್ಟಿನ ಬಲ ಪಡೆ (ಸ್ಟ್ರಾಟಜಿಕ್ ಫೋರ್ಸ್ ಕಮಾಂಡ್) ಪರೀಕ್ಷಾರ್ಥ ಪ್ರಯೋಗ ನಡೆಸಿತು.

ಧನುಷ್ ಕ್ಷಿಪಣಿ

ಧನುಷ್ ಕ್ಷಿಪಣಿಯನ್ನು ಪೃಥ್ವಿ-3 ಕ್ಷಿಪಣಿ ಎಂದೂ ಕರೆಯಲಾಗುತ್ತದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಪೃಥ್ವಿ-2 ಕ್ಷಿಪಣಿಯ ನೌಕಾ ಅವರತಣಿಕೆಯಾಗಿದೆ. ಇದರ ವಿನ್ಯಾಸದ ಲಕ್ಷಣಗಳು ಪೃಥ್ವಿ-2 ಪ್ಲಾಟ್ಫಾರಂಗೆ ಅನುಗುಣವಾಗಿ ರೂಪುಗೊಂಡಿದ್ದು, ಇದನ್ನು ಹಡಗಿನಿಂದ ಉಡಾಯಿಸಲು ಅವಕಾಶವಿದೆ. ಇದು ಅಲ್ಪದೂರ ಸಾಮಥ್ರ್ಯದ ಸಿಡಿತಲೆ ಕ್ಷಿಪಣಿಯಾಗಿದ್ದು, ಇದು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಸಿಡಿತಲೆಗಳನ್ನು ಪಯ್ಯುವ ಸಾಮಥ್ರ್ಯ ಹೊಂದಿದೆ.

ಧನುಷ್ ಕ್ಷಿಪಣಿಯ ಉದ್ದ 8.53 ಮೀಟರ್ಗಳಾಗಿದ್ದು, ಅಗಲ 0.9 ಮೀಟರ್ ಇದೆ. ಇದು 500 ಕೆಜಿ ವರೆಗಿನ ಪೇಲೋಡ್ ಒಯ್ಯುವ ಸಾಮಥ್ರ್ಯ ಹೊಂದಿದೆ. ಇದು ಭೂಮಿ ಮತ್ತು ನೌಕಾ ಗುರಿಗಳ ಮೇಲೆ ದಾಳಿ ಮಾಡಲು ಶಕ್ತವಾಗಿದೆ. ಇದನ್ನು ಹಡಗಿನಿಂದ ಹಡಗಿನ ದಾಳಿಗೆ ಅಥವಾ ಹಡಗಿನಿಂದ ಭೂಪ್ರದೇಶದ ಮೇಲಿನ ದಾಳಿಗೆ ಬಳಸಬಹುದಾಗಿದೆ. ಇದರ ದೂರಸಾಮಥ್ರ್ಯ 350 ಕಿಲೋಮೀಟರ್ ಎಂದು ಪ್ರಕಟಿಸಲಾಗಿದೆ.

ಧನುಷ್/ ಪೃಥ್ವಿ-3 ಸಿಡಿತಲೆ ಕ್ಷಿಪಣಿಯು ದೇಶೀಯವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) 1983ರಿಂದೀಚೆಗೆ ತಯಾರಿಸಲು ಮುಂದಾಗಿರುವ ಐದು ಕ್ಷಿಪಣಿ ಪ್ಲಾಟ್ಫಾರಂಗಳಲ್ಲಿ ಒಂದಾಗಿದೆ. ಇದು ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆ (ಐಜಿಎಂಡಿಪಿ) ಭಾಗವಾಗಿದೆ. ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆ (ಐಜಿಎಂಡಿಪಿ)ಯಡಿ ಅಭಿವೃದ್ಧಿಪಡಿಸಲಾದ ಇತರ ಕ್ಷಿಪಣಿಗಳೆಂದರೆ ಅಗ್ನಿ, ತ್ರಿಶೂಲ್, ಆಕಾಶ್ ಮತ್ತು ನಾಗ್. ಧನುಷ್ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗ 2000ನೇ ಇಸ್ವಿಯಲ್ಲಿ ನಡೆದಿತ್ತು. ಇದರ ಮೊಟ್ಟಮೊದಲ ಕಾರ್ಯಾಚರಣೆ ಪರೀಕ್ಷೆಯನ್ನು 2004ರಲ್ಲಿ ನಡೆಸಲಾಗಿತ್ತು. ಇದುವರೆಗೆ ಒಟ್ಟು ಏಳು ಬಾರಿ ವಿವಿಧ ಆಯಾಮಗಳಿಗಾಗಿ ಇದನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಕೊನೆಯ ಬಾರಿಗೆ ಧನುಷ್ ಪಪರೀಕ್ಷಾರ್ಥ ಪ್ರಯೋಗ 2015 ನವೆಂಬರ್ನಲ್ಲಿ ನಡೆದಿತ್ತು.

Comment