IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆರು ಒಪ್ಪಂದಗಳಿಗೆ ಭಾರತ- ಕೆನಡಾ ಸಹಿ

ಆರು ಒಪ್ಪಂದಗಳಿಗೆ ಭಾರತ- ಕೆನಡಾ ಸಹಿ

ಅಣುವಿಜ್ಞಾನ, ವಿದ್ಯುತ್ ಸಹಕಾರ, ಕ್ರೀಡೆ, ಶಿಕ್ಷಣ, ವಿಜ್ಞಾಣ ಮತ್ತು ತಂತ್ರಜ್ಞಾನ ಸಹಕಾರ ಮತ್ತು ಮಾಹಿತಿ ತಂತ್ರಜ್ಞಾನ ಸಹಕಾರಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಒಪ್ಪಂದಗಳಿಗೆ ಭಾರತ ಹಾಗೂ ಕೆನಡಾ ದೇಶಗಳು ಸಹಿ ಮಾಡಿವೆ.

ಪ್ರಧಾಣಿ ನರೇಂದ್ರ ಮೋದಿ ಹಾಗೂ ಭಾರತಕ್ಕೆ ಅಧಿಕೃತ ಭೇಟಿ ನಿಡಿರುವ ಕೆನಡಾ ಪ್ರಧಾನಿ ಜೆಸ್ಟಿನ್ ತ್ರುದೇವ್ ಅವರ ನಡುವೆ ನವದೆಹಲಿಯಲ್ಲಿ ನಿಯೋಗ ಮಾತುಕತೆ ನಡೆದ ಬಳಿಕ ಒಪ್ಪಂದಗಳಿಗೆ ಉಭಯ ಮುಖಂಡರು ಸಹಿ ಮಾಡಿದರು.

ಸಹಿ ಮಾಡಿದ ಒಪ್ಪಂದಗಳು

  • ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ
  • ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ
  • ಬೌದ್ಧಿಕ ಆಸ್ತಿ ಹಕ್ಕು ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ
  • ಭಾರತ- ಕೆನಡಾ ಸಚಿವಮಟ್ಟದ ವಿದ್ಯುತ್ ಸಂವಾದಕ್ಕೆ ಕಾರ್ಯಸೂಚಿ ಕುರಿತ ಒಪ್ಪಂದ
  • ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ
  • ಮಾಹಿತಿ ಸಂವಹನ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಉದ್ದೇಶಿಸುವ ಜಂಟಿ ಹೇಳಿಕೆ.

ಭಾರತ- ಕೆನಡಾ ಸಹಕಾರ

ಭಾರತ ಹಾಗೂ ಕೆನಡಾ ಪ್ರಜಾಪ್ರಭುತ್ವ ಮತ್ತು ಬಹುತ್ವದ ಮೌಲ್ಯಗಳ ಹಂಚಿಕೆಯ ಆಧಾರದದಲ್ಲಿ ಪ್ರಮುಖ ಪಾಲುದಾರಿಕೆ ಸಂಬಂಧವನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಗಣನೀಯ ಸುಧಾರಣೆಯಾಗಿದ್ದು, ಪರಸ್ಪರ ಆರ್ಥಿಕ ತೊಡಗಿಸಿಕೊಳ್ಳುವಿಕೆ ಹೆಚ್ಚಿದೆ. ಜತೆಗೆ ನಿರಂತರವಾದ ಉನ್ನತ ಮಟ್ಟದ ಸಂವಾದಗಳು ಹಾಗೂ ಧೀರ್ಘಾವಧಿಯಿಂದ ಬೆಳೆದುಬಂದಿರುವ ಜನ- ಜನತೆಯ ನಡುವಿನ ಸಂಬಂಧಗಳನ್ನು ಹೊಂದಿವೆ.

ಕೆನಡಾದಲ್ಲಿ ಭಾರತೀಯ ಮೂಲದ ಸುಮಾರು 12 ಲಕ್ಷ ಮಂದಿ ಇದ್ದು, ಇದು ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡ ಮೂರರಷ್ಟು. ಭಾರತ ಮೂಲಕ ಅತ್ಯುನ್ನತ ಶಿಕ್ಷಣ ಪಡೆದ, ಉನ್ನತ ವರ್ಗದ ಮತ್ತು ಕೈಗಾರಿಕೋದ್ಯಮಿಗಳು ಕೆನಡಾದ ಅತಿದೊಡ್ಡ ವಲಸೆ ಗುಂಪುಗಳಲ್ಲಿ ಒಂದಾಗಿದ್ದಾರೆ. ಇವರು ಮುಖ್ಯವಾಹಿನಿ ಜತೆಗೆ ಹೊಂದಿಕೊಂಡಿದ್ದು, ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ.

ಉಭಯ ದೇಶಗಳ ನಡುವಿನ ದ್ವಿಮುಖ ವ್ಯಾಪಾರ2010ರಲ್ಲಿ 3.21 ಶತಕೋಟಿ ಅಮೆರಿಕನ್ ಡಾಲರ್ ಇದ್ದುದು 2016ರಲ್ಲಿ 6.05 ಶತಕೋಟಿ ಡಾಲರ್ಗೆ ಹೆಚ್ಚಿದೆ. ಕೆನಡಾದ ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲು ಕೇವಲ ಶೇಕಡ 1.95ರಷ್ಟು. ಭಾರತದಿಂದ ಕೆನಡಾಗೆ ರಫ್ತಾಗುವ ಪ್ರಮುಖ ವಸ್ತುಗಳೆಂದರೆ, ಹರಳು, ಆಭರಣ ಮತ್ತು ಅಮೂಲ್ಯ ಕಲ್ಲುಗಳು, ಔಷಧ ಸಾಮಗ್ರಿ, ಸಿದ್ಧ ಉಡುಪು, ಜವಳಿ, ಸಾವಯವ ರಾಸಾಯನಿಕ, ಲಘು ಎಂಜಿನಿಯರಿಂಗ್ ಸರಕು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು. ಭಾರತ ಕೆನಡಾದಿಂದ ಬೇಳೆಕಾಳುಗಳು, ಮರಮುಟ್ಟು ಮತ್ತು ನ್ಯೂಸ್ಪ್ರಿಂಟ್ ಆಮದು ಮಾಡಿಕೊಳ್ಳುತ್ತಿದೆ.

Comment