IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕೆನಡಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ಜತೆಗೆ ಭಾರತ ಒಪ್ಪಂದ

ಕೆನಡಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ಜತೆಗೆ ಭಾರತ ಒಪ್ಪಂದ

ಕೆನಡಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ಜತೆಗೆ ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಸ್ತುತ ಹಾಗೂ ಭವಿಷ್ಯದ ಜಾಗತಿಕ ಹಾಗೂ ಸ್ಥಳೀಯ ಅಭಿವೃದ್ಧಿಗೆ ಸಂಬಂಧಿಸಿದ ಸವಾಲುಗಳನ್ನು ಎದರಿಸುವ ನಿಟ್ಟಿನಲ್ಲಿ ಯೋಜನೆ ಆಧರಿತ ಸಂಶೋಧನಾ ನೆರವನ್ನು ವಿನಿಮಯ ಮಾಡಿಕೊಳ್ಳಲು ಇದು ಅನುವು ಮಾಡಿಕೊಡಲಿದೆ. ಕೆನಡಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರ (ಐಆರ್ಡಿಸಿ) ಈಗಾಗಲೇ ಭಾರತ ಸರ್ಕಾರಕ್ಕೆ ಹಣಕಾಸು, ಉದ್ಯಮ, ಕೃಷಿ ಮತ್ತು ಆರೋಗ್ಯ ಸೇವಾ ಕ್ಷೇತ್ರಕ್ಕೆ ಗುಣಮಟ್ಟದ ಸಂಶೋಧನಾ ನೆರವನ್ನು ನೀಡುತ್ತಾ ಬಂದಿದೆ. 1972ರಿಂದೀಚೆಗೆ ಕೆನಡಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರ, 551 ಸಂಶೋಧನಾ ಚಟುವಟಿಕೆಗಳಿಗೆ ನೆರವು ನೀಡಿದ್ದು, ಇದರ ಅಂದಾಜು ಮೌಲ್ಯ 158 ದಶಲಕ್ಷ ಡಾಲರ್ ಆಗಿದೆ. ಭಾರತದ ಹಲವು ಸಂಘ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ವೈಯಕ್ತಿಕ ಸಂಶೋಧಕರು ನೆರವು ಪಡೆದಿದ್ದಾರೆ. 2016-17ರಲ್ಲಿ 96 ಸಂಶೋಧನಾ ಯೋಜನೆಗಳಿಗೆ ಕೆನಡಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರ ಭಾರತದಲ್ಲಿ ನೆರವು ನೀಡಿದ್ದು, ಇದರ ಒಟ್ಟು ಮೌಲ್ಯ 51 ದಶಲಕ್ಷ ಕೆನಡಿಯನ್ ಡಾಲರ್.

ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರ

ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರವು ಕೆನಡಾದ ಅತ್ಯುನ್ನತ ಸಂಶೋಧನಾ ಸಂಸ್ಥೆಯಾಗಿದ್ದು, ಇದು ಅಭಿವೃದ್ಧಿಶೀಲ ದೇಶಗಲಲ್ಲಿ ಜೀವನ ಹಾಗೂ ಜೀವನಾಧಾರವನ್ನು ಸುಧಾರಿಸುವ ನಿಟ್ಟಿನಲ್ಲಿ ಜ್ಞಾನ, ಅನುಶೋಧನೆ ಮತ್ತು ಪರಿಹಾರಗಳಿಗೆ ನೆರವು ನೀಡಯತ್ತಿದೆ. ಇದನ್ನು 1970ರಲ್ಲಿ ಕೆನಡಾದ ಪಾರ್ಲಿಮೆಂಟ್ ಆರಂಭಿಸಿದ್ದು, ಅಂತರರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರ ಕಾಯ್ದೆಯ ಅನ್ವಯ ಇದು ಸ್ಥಾಪನೆಯಾಗಿದೆ. ಇದು ಅಭಿವೃದ್ಧಿಶೀಲ ದೇಶಗಳ ಸಂಶೋಧಕರಿಗೆನೆರವು ನೀಡುತ್ತಿದ್ದು, ಇಂಥ ಸಂಶೋಧಕರು ತಮ್ಮದೇ ಸಂಸ್ಥೆಗಳಲ್ಲಿ ಮತ್ತು ತಮ್ಮದೇ ಪ್ರದೇಶಗಳಲ್ಲಿ ಸಂಶೋಧನೆ ಕೈಗೊಳ್ಳಲು ನೆರವಾಗುತ್ತದೆ.

ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ಅಭಿವೃದ್ಧಿ ಯೋಜನೆಯಡಿ ಜಾಗತಿಕವಾಗಿ ಆಹಾರ, ಉದ್ಯೋಗ, ಆರೋಗ್ಯ ಮತ್ತು ಪ್ರಗತಿಗಾಗಿ ತಂತ್ರಜ್ಞಾನದ ಲಭ್ಯತೆಯನ್ನು ಹೆಚ್ಚಿಸುವ ವಿನೂತನ ಪರಿಹಾರಗಳಿಗೆ ನೆರವು ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ಮೂರು ಯೋಜನಾ ಕ್ಷೇತ್ರಗಳು ಅನುಶೋಧನೆಗೆ ಉತ್ತೇಜನ ನೀಡುವುದು ಮತ್ತು ದೊಡ್ಡ ಪ್ರಮಾಣದ ಪರಿಣಾಮವನ್ನು ಕೃಷಿ ಹಾಗೂ ಪರಿಸರದ ಮೇಲೆ, ಎಲ್ಲರನ್ನೂ ಸೇರಿಸಿಕೊಂಡ ಆರ್ಥಿಕತೆ ಮತ್ತು ತಂತ್ರಜ್ಞಾನ ಹಾಗೂ ಅನುಶೋಧನೆಗೆ ನೆರವಾಗುತ್ತವೆ.

Comment