IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಈಶಾನ್ಯ ಭಾರತಕ್ಕೆ ಮೊಟ್ಟಮೊದಲ ಅಂತರ ಸಚಿವಾಲಯ ಸಮಿತಿ

ಈಶಾನ್ಯ ಭಾರತಕ್ಕೆ ಮೊಟ್ಟಮೊದಲ ಅಂತರ ಸಚಿವಾಲಯ ಸಮಿತಿ

ಈಶಾನ್ಯ ಭಾರತದ ವೈದ್ಯಕೀಯ ಮತ್ತು ಸುಗಂಧಿತ ಸಸ್ಯಗಳಿಗಾಗಿ ಇರುವ ಅಂತರ ಸಚಿವಾಲಯ ಸಮಿತಿಯ ಮೊಟ್ಟಮೊದಲ ಸಭೆ 2018 ಮಾರ್ಚ್ನಲ್ಲಿ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಆಯುಷ್ ಕಾರ್ಯದರ್ಶಿಗಳು ಜಂಟಿಯಾಗಿ ವಹಿಸುವರು. ಇದರಲ್ಲಿ ಹಲವು ಸಚಿವಾಲಯಗಳ, ಇಲಾಖೆಗಳ ಹಾಗೂ ಸರ್ಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಪ್ರಮುಖ ಅಂಶಗಳು

ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯವು ವೈದ್ಯಕೀಯ ಮತ್ತು ಸುಗಂಧಿತ ಸಸ್ಯಗಳ ಅಂತರ ಸಚಿವಾಲಯ ಸಮಿತಿಯ ಸಮನ್ವಯ ಕಾರ್ಯವನ್ನು ನಿರ್ವಹಿಸುತ್ತದೆ. ಅಂತರ ಸಚಿವಾಲಯ ಸಮಿತಿಯು ವೈದ್ಯಕೀಯ ಮತ್ತು ಸುಗಂಧಿತ ಸಸ್ಯಗಳನ್ನು ಬೆಳೆಯುವ ಮೂಲಕ ಜೀವನಾಧಾರವನ್ನು ಸೃಷ್ಟಿಸುವ ಮತ್ತು ಆರ್ಥಿಕ ವರ್ಗಾವಣೆಯನ್ನು ಸಾಧಿಸಲು ಅನುಕೂಲವಾಗುವ ಸಲಹೆ ಸೂಚನೆಗಳನ್ನು ನೀಡುತ್ತದೆ. ಈಶಾನ್ಯ ಭಾರತದಲ್ಲಿ ಇಂಥ ವೈದ್ಯಕೀಯ ಮತ್ತು ಸುಗಂಧಿತ ಸಸ್ಯಗಳು ಸಾಕಷ್ಟು ಇರುವ ಹಿನ್ನೆಲೆಯಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಬೆಳೆಯಲು ಅವಕಾಶಗಳಿವೆ.

ಅಂತರ ಸಚಿವಾಲಯ ಸಮಿತಿಯು ವೈದ್ಯಕೀಯ ಮತ್ತು ಸುಗಂಧಿತ ಸಸ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪ್ರಸ್ತುತ ಇರುವ ವ್ಯವಸ್ಥೆಯನ್ನು ಅಥವಾ ಸಾಂಸ್ಥಿಕ ವ್ಯವಸ್ಥೆಯನ್ನು ಪರಾಮರ್ಶಿಸಲಿದೆ. ಹಾಲಿ ಇರುವ ವ್ಯವಸ್ಥೆಯಲ್ಲಿನ ಮತ್ತು ಸಾಂಸ್ಥಿಕ ಸೌಲಭ್ಯಗಳ ಅಂತರವನ್ನು ಗುರುತಿಸಿ, ಅಗತ್ಯವಾದ ನೀತಿ ಹಸ್ತಕ್ಷೇಪವನ್ನು ಸಲಹೆ ಮಾಡಲಿದೆ. ಮೂಲಕ ಈಶಾನ್ಯ ಭಾರತದಲ್ಲಿ ವೈದ್ಯಕೀಯ ಮತ್ತು ಸುಗಂಧಿತ ಸಸ್ಯ ಸಂಪನ್ಮೂಲಗಳ ಬೆಳವಣಿಗೆಯ ವೇಗರ್ವಧನೆಗೆ ಇದು ಉತ್ತೇಜನ ನಿಡಲಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಸಚಿವಾಲಯಗಳು ಅಗತ್ಯ ಕಾರ್ಯಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೂಡಾ ಸಮಿತಿ ಸಲಹೆ ಸೂಚನೆಗಳನ್ನು ನೀಡಲಿದೆ. ಅಂತರ ಸಚಿವಾಲಯ ಸಮಿತಿಯು ವೈದ್ಯಕೀಯ ಮತ್ತು ಸುಗಂಧಿತ ಸಸ್ಯಗಳನ್ನು ಬೆಳೆಯುವ ಮೂಲಕ ಜೀವನಾಧಾರವನ್ನು ಸೃಷ್ಟಿಸುವ ಮತ್ತು ಆರ್ಥಿಕ ವರ್ಗಾವಣೆಯನ್ನು ಸಾಧಿಸಲು ಅನುಕೂಲವಾಗುವ ಕಾರ್ಯಸಾಧು ಎನಿಸಿದ ಸಲಹೆ ಸೂಚನೆಗಳನ್ನು ನೀಡುತ್ತದೆ.

ಹಿನ್ನೆಲೆ

ಈಶಾನ್ಯ ಪ್ರದೇಶದ ವೈದ್ಯಕೀಯ ಹಾಗೂ ಸುಗಂಧಿತ ಸಸ್ಯಗಳಿಗಾಗಿ ಇರುವ ಅಂತರ ಸಚಿವಾಲಯ ಸಮಿತಿಯನ್ನು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳ ನಡುವಿನ ಸಭೆಯ ಬಳಿಕ ರಚಿಸಲಾಗಿದೆ. ಇದು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಸಮನ್ವಯಗೊಳಿಸುವ ಉದ್ದೇಶವನ್ನು ಹೊಂದಿದ್ದು, ವೈದ್ಯಕೀಯ ಹಾಗೂ ಸುಗಂಧಿತ ಸಸ್ಯಗಳನ್ನು ಆಕರ್ಷಕ ಹಾಗೂ ಲಾಭದಾಯಕ ಸಂಪನ್ಮೂಲವಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ.

ವೈದ್ಯಕೀಯ & ಸುಗಂಧಿತ ಸಸ್ಯಗಳು (ಎಂಎಪಿ)

ವೈದ್ಯಕೀಯ & ಸುಗಂಧಿತ ಸಸ್ಯಗಳು (ಎಂಎಪಿ), ಸಸ್ಯಶಾಸ್ತ್ರೀಯ ಕಚ್ಚಾವಸ್ತುಗಳಾಗಿದುದ, ಆಯುರ್ವೇದ ಔಷಧಗಳಿಗೆ ಇದು ಬಳಕೆಯಾಗುತ್ತದೆ. ಪ್ರಮುಖವಾಗಿ ಆಯುರ್ವೇದ ಚಿಕಿತ್ಸೆ, ಸೌಂದರ್ಯವರ್ದಕ ಮತ್ತು ಇತರ  ಉದ್ದೇಶಗಳಿಗೆ ಇದು ಬಳಕೆಯಾಗುತ್ತದೆ. ಇದನ್ನು ಸೌಂದರ್ಯವರ್ದಕಗಳಲ್ಲಿ ಪ್ರಮುಖ ಅಂಶಗಳಾಗಿ ಬಳಕೆ ಮಾಡಲಾಗುತ್ತದೆ. ಜತೆಗೆ ವೈದ್ಯಕೀಯ ಉತ್ಪನ್ನಗಳು, ಆರೋಗ್ಯಕರ ಆಹಾರ ಮತ್ತು ನೈಸರ್ಗಿಕ ಆರೋಗ್ಯ ಉತ್ಪನ್ನಗಳಾಗಿ ಇವು ಬಳಕೆಯಾಗುತ್ತವೆ. ಇವು ನೈಸರ್ಗಿಕ ಅಂಶಗಳನ್ನು ಹೊಂದಿರುವ ಮೌಲ್ಯವರ್ಧಿತ ಉತ್ಪನ್ನಗಳ ಮೂಲವಸ್ತುಗಳಾಗಿಯೂ ಬಳಕೆಯಾಗುತ್ತವೆ. ಅಗತ್ಯ ತೈಲ, ಒಣ ಹಾಗೂ ದ್ರವ ಸಾರ ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲೂ ಇವು ಬಳಸಲ್ಪಡುತ್ತವೆ.

Comment