IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮಧ್ಯಪ್ರದೇಶದಲ್ಲಿ 44ನೇ ಖಜುರಾಹೊ ನೃತ್ಯಹಬ್ಬ

ಮಧ್ಯಪ್ರದೇಶದಲ್ಲಿ 44ನೇ ಖಜುರಾಹೊ ನೃತ್ಯಹಬ್ಬ

ಮಧ್ಯಪ್ರದೇಶದ ಛಾತ್ರಪುರ ಜಿಲ್ಲೆಯ ವಿಶ್ವವಿಖ್ಯಾತ ದೇಗುಲ ಸಂಕೀರ್ಣವಾದ ಖಜುರಾಹೋದಲ್ಲಿ 44ನೇ ಖಜುರಾಹೋ ನೃತ್ಯೋತ್ಸವ- 2018 ನಡೆಯಿತು. ಯುನೆಸ್ಕೊ ಪರಂಪರೆ ತಾಣವಾಗಿರುವ ಖಜುರಾಹೋ ದೇವಾಳಯ ಸಂಕೀರ್ಣದಲ್ಲಿ ನಡೆದ ಉತ್ಸವವನ್ನು ಮಧ್ಯಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಉದ್ಘಾಟಿಸಿದರು. ರಾಜ್ಯ ಸಂಸ್ಕøತಿ ಇಲಾಖೆ ಇದನ್ನು ಆಯೋಜಿಸಿತ್ತು.

ಖಜುರಾಹೊ ಉತ್ಸವ

ಖಜುರಾಹೊ ನೃತ್ಯೋತ್ಸವವು ವಾರ್ಷಿಕ ನೃತ್ಯ ಹಬ್ಬವಾಗಿದ್ದು, ವೈವಿಧ್ಯಮಯ ಭಾರತೀಯ ಶೈಲಿಯ ಶಾಸ್ತ್ರೀಯ ನೃತ್ಯಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಆರು ದಿನಗಳ ನೃತ್ಯ ಹಬ್ಬದಲ್ಲಿ ಪ್ರದರ್ಶನಗೊಳ್ಳುವ ವಿವಿಧ ಪ್ರಕಾರದ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಕಥಕ್, ಒಡಿಸ್ಸಿ, ಭರತನಾಟ್ಯಂ, ಕೂಚುಪುಡಿ, ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ ಸೇರುತ್ತವೆ. ನೃತ್ಯ ಹಬ್ಬದ ಅಂಗವಾಗಿ ಆರ್ಟ್ ಮಾರ್ಟ್ ಎಂಬ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಜರ್ಮನಿ, ಫ್ರಾನ್ಸ್ ಮತ್ತು ಚೀನಾ ಸೇರಿದಂತೆ ವಿಶ್ವದ ವಿವಿಧೆಡೆಗಳಿಂದ ಆಗಮಿಸಿದ ಖ್ಯಾತ ಕಲಾವಿದರ ಚಿತ್ರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ನೃತ್ಯೋತ್ಸವದ ಅವಧಿಯಲ್ಲಿ, ಬಯಲು ರಂಗಮಂದಿರದಲ್ಲಿ ನೃತ್ಯಗಳನ್ನು ಆಯೋಜಿಸಲಾಗುತ್ತದೆ. ಖ್ಯಾತ ಶಿವ ದೇವಸ್ಥಾನವಾದ ವಿಶ್ವನಾಥ ಮಂದಿರದ ಎದುರಲ್ಲಿ ನೃತ್ಯ ಪ್ರದರ್ಶನಗೊಳ್ಳುತ್ತದೆ. ಜತೆಗೆ ಸೂರ್ಯದೇವರ  ಚಿತ್ರಗುಪ್ತ ದೇವಾಲಯದಲ್ಲೂ ಉತ್ಸವದ ಅಂಗವಾಗಿ ನೃತ್ಯ ಪ್ರದರ್ಶನ ಇರುತ್ತದೆ.

ಖಜುರಾಹೊ ದೇವಾಲಯ

ಮಧ್ಯಪ್ರದೇಶದಲ್ಲಿ ನಿರ್ಮಾಣವಾದ ಹಿಂದೂ ಹಾಗೂ ಜೈನ ದೇಗುಲಗಳ ಸಂಕೀರ್ಣ ಇಲ್ಲಿದ್ದು, ಚಾಂಡೇಲ ರಾಜ್ಯಭಾರದ ಅವಧಿಯಲ್ಲಿ ಅಂದರೆ ಕ್ರಿಸ್ತಶಕ 950ರಿಂದ 1050 ಅವಧಿಯಲ್ಲಿ ಇವು ನಿರ್ಮಾಣವಾಗಿವೆ. ಇವು ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೇವಾಲಯಗಳು ನಾಗರ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದು, ಇಲ್ಲಿ ಒಟ್ಟು ಶಾಸನಗಳ ಶೇಕಡ 10ರಷ್ಟು ಶಾಸನಗಳು ಕೂಡಾ ಇರುವುದರಿಂದ ಶಾಸನಾತ್ಮಕವಾಗಿ ಕೂಡಾ ಇಲ್ಲಿಗೆ ಮನ್ನಣೆ ಇದೆ.

ಖಜುರಾಹೋ ದೇವಾಲಯಗಳನ್ನು ಮರಳುಶಿಲೆಯಿಂದ ನಿರ್ಮಿಸಲಾಗಿದೆ. ಖಜುರಾಹೋದಲ್ಲಿರುವ ಅತಿದೊಡ್ಡ ದೇಗುಲವೆಂದರೆ ಕಂದಾರಿಯಾ ಮಹಾದೇವ ದೇವಸ್ಥಾನ. ಗಾಂದಾ ರಾಜನ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯಗಳ ಗೋಪುರ ಅಥವಾ ಶಿಖರಗಳು ಅತಿ ಎತ್ತರದ್ದಾಗಿದ್ದು, ವಕ್ರ ಪಿರಮಿಡ್ ಶೈಲಿಯಲ್ಲಿ ಮೇಲಕ್ಕೆ ಚಾಚಿಕೊಂಡಿವೆ. ದೇಗುಲದ ಲಂಬಾಕಾರದ ರಚನೆ ಅಡ್ಡರೇಖೆಯ ರೂಪದಲ್ಲಿ ಪರ್ಯಾವಸಾನಗೊಳ್ಳುವ ವಿಶಿಷ್ಟ ಅಮಲಕ ಹಾಗೂ ಕಲಶ ಶೈಲಿಇಲ್ಲಿನ ವಿಶೇಷ. ದೇವಾಲಯಗಳಲ್ಲಿ ಕಂಡುಬರುವ ಅಸಂಖ್ಯಾತ ಶಾಸನಗಳು ಕೂಡಾ ಮಾನವ ಅನುಭವ, ಆಧ್ಯಾತ್ಮಿಕ ಚಿಂತನೆಗೆ ಹಿಡಿದ ಕನ್ನಡಿ ಎನಿಸಿದೆ.

Comment