IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮೊಟ್ಟಮೊದಲ ಚುನಾವಣಾ ಬಾಂಡ್ ಮಾರ್ಚ್ 1ರಂದು ಮಾರಾಟಕ್ಕೆ ಬಿಡುಗಡೆ

ಮೊಟ್ಟಮೊದಲ ಚುನಾವಣಾ ಬಾಂಡ್ ಮಾರ್ಚ್ 1ರಂದು ಮಾರಾಟಕ್ಕೆ ಬಿಡುಗಡೆ

ದೇಶದ ಮೊಟ್ಟಮೊದಲ ಚುನಾವಣಾ ಬಾಂಡ್ 2018 ಮಾರ್ಚ್ 1ರಂದು ಮಾರಾಟಕ್ಕೆ ಬಿಡುಗಡೆಯಾಗಲಿದೆ. 10 ದಿನಗಳ ಕಾಲ ಇದು ಮಾರಾಟಕ್ಕೆ ಮುಕ್ತವಾಗಿರುತ್ತದೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಮುಖ ನಾಲ್ಕು ಶಾಖೆಗಳಲ್ಲಿ ಅಂದರೆ ಮುಂಬೈ, ಚೆನ್ನೈ, ಕೊಲ್ಕತ್ತಾ ಹಾಗೂ ನವದೆಹಲಿಯಲ್ಲಿ ಇದು ಮಾರಾಟಕ್ಕೆ ಲಭ್ಯವಿರುತ್ತದೆ. ಬಾಂಡ್ ಜೀವಿತಾವಧಿ 15 ದಿನಗಳಾಗಿದ್ದು, ಭಾರತೀಯ ಪ್ರಜೆ ಅಥವಾ ನೋಂದಾಯಿತ ಸಂಸ್ಥೆ, ಕಾರ್ಪೊರೇಟ್ ಕಂಪನಿಗಳು ಇದನ್ನು ಖರೀದಿಸಬಹುದಾಗಿದೆ.

ಚುನಾವಣಾ ಬಾಂಡ್

ಚುನಾವಣಾ ಬಾಂಡ್ ಯೋಜನೆಯನ್ನು 2017 ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವುದು ಇದರ ಉದ್ದೇಶ. ಚುನಾವಣಾ ಬಾಂಡ್ ಚಾಲನೆಯೊಂದಿಗೆ ರಾಜಕೀಯ ದೇಣಿಗೆಗಳಿಗೆ ಇಂಥ ವ್ಯವಸ್ಥೆಯನ್ನು ಜಾರಿಗೊಳಿಸಿದ ಮೊಟ್ಟಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಬಾಂಡ್ಗಳು ಬ್ಯಾರರ್ ಸಾಧನವಾಗಿದ್ದು, ಪ್ರಾಮಿಸರಿ ನೋಟ್ ಸ್ವರೂಪದ್ದಾಗಿರುತ್ತದೆ. ಜತೆಗೆ ಇದು ಬಡ್ಡಿರಹಿತ ಬ್ಯಾಂಕಿಂಗ್ ಸಾಧನವಾಗಿದೆ. ಇದು ಹಾಲಿ ವ್ಯವಸ್ಥೆಯಲ್ಲಿರುವ ಅನಾಮಧೇಯ ನಗದು ದೇಣಿಗೆ ವ್ಯವಸ್ಥೆಯನ್ನು ಕೊನೆಗೊಳಿಸಿ, ಆರ್ಥಿಕತೆಯಲ್ಲಿ ಕಪ್ಪುಹಣದ ಸೃಷ್ಟಿಯನ್ನು ಕೊನೆಗೊಳಿಸುವಲ್ಲಿ ಪ್ರಮುಖ ಸಾಧನವಾಗಲಿದೆ.

ಪ್ರಮುಖ ಅಂಶಗಳು

ಚುನಾವಣಾ ಬಾಂಡ್ಗಳನ್ನು ಯಾವುದೇ ಮೌಲ್ಯಕ್ಕೆ ಖರೀದಿಸಬಹುದಾಗಿದ್ದು 1000 ರೂಪಾಯಿ, 10 ಸಾವಿರ ರೂಪಾಯಿ, 1 ಲಕ್ಷ ರೂಪಾಯಿ, 10 ಲಕ್ಷ ರೂಪಾಯಿ ಅಥವಾ 1 ಕೋಟಿ ರೂಪಾಯಿಯ ಗುಣಕಗಳಲ್ಲಿ ಖರೀದಿ ಮಾಡಬಹುದು. ಹಾಲಿ ಇರುವ ಕೆವೈಸಿ ನಮೂನೆಗಳನ್ನು ಭರ್ತಿ ಮಾಡಿ, ಅಗತ್ಯ ಹಣವನ್ನು ಬ್ಯಾಂಕ್ ಖಾತೆಯಿಂದಪಾವತಿಸಿ ಖರೀದಿಸಬಹುದಾಗಿದೆ. ಆದರೆ ಇದು ಪಾವತಿ ಮಾಡುವ ವ್ಯಕ್ತಿಯ ಅಥವಾ ಕಂಪನಿಯ ಹೆಸರನ್ನು ಒಳಗೊಂಡಿರುವುದಿಲ್ಲ.

ಯಾವುದೇ ರಾಜಕೀಯ ಪಕ್ಷ ಬಾಂಡ್ಗಳನ್ನು ತಮ್ಮ ಖಾತೆಗೆ ಠೇವಣಿ ಇಟ್ಟಾಗ ಮೊತ್ತವನ್ನು ಅವರ ಖಾತೆಗೆ ಅದೇ ದಿನ ವರ್ಗಾಯಿಸಲಾಗುತ್ತದೆ. ಆದರೆ ಇದರ ಮೌಲ್ಯದ ಅವಧಿ ಮುಗಿದ ಬಳಿಕ ಬ್ಯಾಂಕಿನಲ್ಲಿ ಠೇವಣಿ ಮಾಡಿದರೆ ಅದಕ್ಕೆ ಯಾವುದೇ ಪಾವತಿ ಮಾಡಲಾಗುವುದಿಲ್ಲ. ಇಂಥ ಬಾಂಡ್ಗಳನ್ನು ಆರಂಭಿಕ ಹಂತದಲ್ಲಿ ನಾಲ್ಕು ಅಧಿಕೃತ ಶಾಖೆಗಳಲ್ಲಿ ಮಾರಾಟ ಮಾಡಲು ಮತ್ತು ನಗದೀಕರಿಸಲು ಭಾರತೀಯ ಸ್ಟೇಟ್ಬ್ಯಾಂಕ್ (ಎಸ್ಬಿಐ)ಗೆ ಅವಕಾಶ ನೀಡಲಾಗಿದೆ.

ಅರ್ಹತೆ ಪಡೆದ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ಗಳನ್ನು ತಮ್ಮ ಖಾತೆಯ ಮೂಲಕ ನಗದೀಕರಿಸಬಬಹುದು. ಕೇವಲ ನೋಂದಾಯಿತ ರಾಜಕೀಯ ಪಕ್ಷಗಳು ಅಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಥವಾ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಚಲಾಯಿತ ಮತಗಳ ಪೈಕಿ ಶೇಕಡ ಒಂದರಷ್ಟು ಮತ ಪಡೆದ ಪಕ್ಷಗಳಿಗೆ ಮಾತ್ರ ಸೌಲಭ್ಯ ಇರುತ್ತದೆ.

ಹಿನ್ನೆಲೆ

ಚುನಾವಣಾ ಬಾಂಡ್ಗಳ ಮಾರಾಟ ಆರಂಭವಾಗಲು ಮುಖ್ಯ ಕಾರಣವೆಂದರೆ ಇಡೀ ವರ್ಷ  ಹಲವು ರಾಜ್ಯಗಳಲ್ಲಿ ಚುನಾವಣೆಗಳು ಇರುವುದು. ಕರ್ನಾಟಕದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮತದಾನ ನಡೆಯಲಿದ್ದು, ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ವರ್ಷದ ಅಂತ್ಯದ ಒಳಗಾಗಿ ಚುನಾವಣೆಗಳು ನಡೆಯಲಿವೆ.

Comment