IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಐಐಎಸ್‍ಸಿ ವಿಜ್ಞಾನಿಗಳಿಂದ ಮೊಟ್ಟಮೊದಲ ಸೂಪರ್ ಕ್ರಿಟಿಕಲ್ ಬ್ರೆಟಾನ್ ಟೆಸ್ಟ್‍ಲೂಪ್ ಸೌಲಭ್ಯ ಅಭಿವೃದ್ಧಿ

ಐಐಎಸ್‍ಸಿ ವಿಜ್ಞಾನಿಗಳಿಂದ ಮೊಟ್ಟಮೊದಲ ಸೂಪರ್ ಕ್ರಿಟಿಕಲ್ ಬ್ರೆಟಾನ್ ಟೆಸ್ಟ್‍ಲೂಪ್ ಸೌಲಭ್ಯ ಅಭಿವೃದ್ಧಿ

ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮೊಟ್ಟಮೊದಲ ಸೂಪರ್ ಕ್ರಿಟಿಕಲ್ ಬ್ರೆಟಾನ್ ಟೆಸ್ಟ್ಲೂಪ್ ಸೌಲಭ್ಯ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇಶೀಯವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ವ್ಯವಸ್ಥೆಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿ ಉದ್ಘಾಟಿಸಲಾಗಿದೆ. ಇದು ವಿಶ್ವದಲ್ಲೇ ಸೌರ ಶಾಖದ ಮೂಲವನ್ನು ಹೊಂದಿದ ಮೊಟ್ಟಮೊದಲ ಟೆಸ್ಟ್ ಲೂಪ್ ತಂತ್ರಜ್ಞಾನವಾಗಿದೆ. ನೂತನ ತಂತ್ರಜ್ಞಾನ ಸೌರ ಉಷ್ಣವಿದ್ಯುತ್ ಸೇರಿದಂತೆ ವಿದ್ಯುತ್ ಘಟಕಗಳಲ್ಲಿ ಸ್ವಚ್ಛ ವಿದ್ಯುತ್ ಉತ್ಪಾದಿಸುವಲ್ಲಿ ಸಹಕಾರಿಯಾಗಲಿದೆ.

ಪ್ರಮುಖ ಅಂಶಗಳು

ವಿನೂತನ ವ್ಯವಸ್ಥೆಯು ಇಂಡೋ- ಯುಎಸ್ ಒಕ್ಕೂಟವಾದ ಭಾರತ ಹಾಗೂ ಅಮೆರಿಕದ ಸೌರ ವಿದ್ಯುತ್ ಸಂಶೋಧನಾ ಸಂಸ್ಥೆ (ಎಸ್ಇಆರ್ಐಐಯುಎಸ್) ಭಾಗವಾಗಿರುತ್ತದೆ. ಇದನ್ನು ಇಂಟರ್ ಡಿಸಿಪ್ಲಿನರಿ ಸೆಂಟರ್ ಫಾರ್ ಎನರ್ಜಿ ರೀಸರ್ಚ್ ಆಫ್ ಐಐಎಸ್ಸಿಯ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದೆ. ಇದಕ್ಕೆ ಅಗತ್ಯ ಅನುದಾನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇಂಡೋ- ಯುಎಸ್ ಜಂಟಿ ಸ್ವಚ್ಛ ವಿದ್ಯುತ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಯೋಜನೆಯಡಿ ಬಿಡುಗಡೆ ಮಾಡಿದೆ.

ವಿನೂತನ ವ್ಯವಸ್ಥೆಯು ಸೂಪರ್ಕ್ರಿಟಿಕಲ್ ಇಂಗಾಲದ ಡೈ ಆಕ್ಸೈಡನ್ನು ಬಳಸಿಕೊಂಡು, ವಿದ್ಯುತ್ ಉತ್ಪಾದಿಸುತ್ತದೆ. ಹೆಚ್ಚು ವಿದ್ಯುತ್ ಉತ್ಪಾದಿಸಲು ಹಿಂದೆ ಬಳಸುತ್ತಿದ್ದ ಹಬೆಯ ಬದಲಾಗಿ ಸೂಪರ್ಕ್ರಿಟಿಕಲ್ ಇಂಗಾಲದ ಡೈ ಆಕ್ಸೈಡ್ ಬಳಕೆಯಾಗಲಿದೆ. ಸೂಪರ್ಕ್ರಿಟಿಕಲ್ ಇಂಗಾಲದ ಡೈ ಆಕ್ಸೈಡ್ ಎಂದರೆ 31 ಡಿಗ್ರಿ ಕ್ರಿಟಕಲ್ ಉಷ್ಣತೆ ಮತ್ತು 73 ಅಟ್ಮಾಸ್ಪಿಯರ್ ಕ್ರಿಟಿಕಲ್ ಒತ್ತಡವನ್ನು ಹೊಂದಿರುವ ಇಂಗಾಲದ ಡೈ ಆಕ್ಸೈಡ್ ಸ್ಥಿತಿಯಾಗಿದೆ. ಇದು ಹಬೆಯ ಸಾಂದ್ರತೆಗಿಂತ ದುಪ್ಪಟ್ಟು ಸಾಂದ್ರತೆ ಹೊಂದಿರುತ್ತದೆ. ಸೂಪರ್ಕ್ರಿಟಿಕಲ್ ಇಂಗಾಲದ ಡೈ ಆಕ್ಸೈಡನ್ನು ಮುಚ್ಚಿನ ಲೂಪ್ ಬ್ರೆಟಾನ್ ಸೈಕಲ್ನಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ ವಿದ್ಯುತ್ ಪರಿವರ್ತನೆಯನ್ನು ಶೇಕಡ 50ರಷ್ಟು ಹೆಚ್ಚಿಸಲು ಸಾಧ್ಯವಾಗುತ್ತದೆ.

ಮಹತ್ವ

ಮುಂದಿನ ಪೀಳಿಗೆಯಲ್ಲಿ ಹೆಚ್ಚು ಕ್ಷಮತೆಯ, ಸಮಗ್ರ, ಜಲರಹಿತ ಸೂಪರ್ ಕ್ರಿಟಿಕಲ್ ಇಂಗಾಲದ ಡೈ ಆಕ್ಸೈಡ್ ಬ್ರೆಟಾನ್ ಸೈಕಲ್ ಟೆಸ್ಟ್ ಲೂಪ್ಗಳನ್ನು ವಿದ್ಯುತ್ ಉತ್ಪಾದನೆಗೆ ಬಳಸುವುದು ದೇಶದ ಹೆಚ್ಚುವರಿ ವಿದ್ಯುತ್ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಪ್ರಸ್ತುತ ಬಳಕೆಯಲ್ಲಿರುವ ಹಬೆ ಆಧರಿತ ಅಣು ಹಾಗೂ ಉಷ್ಣವಿದ್ಯುತ್ ಘಟಕಗಳ ಬದಲಾಗಿ ಬಳಕೆಗೆ ಬರಲಿದೆ. ಮೂಲಕ ಇಂಗಾಲದ ಹೆಜ್ಜೆಗುರುತನ್ನು ಗಣನೀಯವಾಗಿ ಕಡಿಮೆ ಮಾಡುವುದು ಸಾಧ್ಯವಾಗಲಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾತ್ರವಲ್ಲದೇ, ಹೊಸ ತಂತ್ರಜ್ಞಾನದಿಂದ ವಿದ್ಯುತ್ ಘಟಕಗಳು ಅಗ್ಗದ ವಿದ್ಯುತ್ ಉತ್ಪಾದಿಸಲು ಮತ್ತು ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಇದು ಮುಂದಿನ ಪೀಳಿಗೆಯ ಸೌರ ಉಷ್ಣವಿದ್ಯುತ್ ಘಟಕಗಳನ್ನು ಸ್ಥಾಪಿಸುವ ದೇಶೀಯ ಯೋಜನೆಯಾಗಿದೆ. ತಂತ್ರಜ್ಞಾನದಲ್ಲಿ ವಿಶ್ವದ ಅಗ್ರಗಣ್ಯ ದೇಶವಾಗಿ ಹೊರಹೊಮ್ಮುವ ಅವಕಾಶ ಭಾರತಕ್ಕೆ ಲಭ್ಯವಾಗಲಿದೆ. ಜತೆಗೆ ನ್ಯಾಷನಲ್ ಸೋಲಾರ್ ಮಿಷನ್ ಪ್ರಮುಖ ಗುರಿಗಳನ್ನು ಸಾಧಿಸಲು ಸಾಧ್ಯವಾಗಲಿದ್ದು, ಇದರ ಅನ್ವಯ ದೇಶೀಯ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ.

Comment