IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸ್ವಜಲ ಯೋಜನೆ ಮತ್ತು ಗಂಗೋತ್ರಿ ಸ್ವಚ್ಛದ ಆಕರ್ಷಣೀಯ ಸ್ಥಳ ಯೋಜನೆಗೆ ಚಾಲನೆ

ಸ್ವಜಲ ಯೋಜನೆ ಮತ್ತು ಗಂಗೋತ್ರಿ ಸ್ವಚ್ಛದ ಆಕರ್ಷಣೀಯ ಸ್ಥಳ ಯೋಜನೆಗೆ ಚಾಲನೆ

ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಗಂಗೋತ್ರಿ ಸ್ವಚ್ಛ ಐಕಾನಿಕ್ ಪ್ಲೇಸ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಜತೆಗೆ ಸ್ವಜಲ ಎಂಬ ಹೆಸರಿನ ಸಮುದಾಯ ಮಾಲೀಕತ್ವದ ಕುಡಿಯುವ ನೀರಿನ ಯೋಜನೆಯನ್ನು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಆರಂಭಿಸಿದೆ.

ಎರಡೂ ಯೋಜನೆಗಳು ಸ್ವಚ್ಛತೆಯನ್ನು ನಿರ್ಮಿಸುವ ಜತೆಗೆ, ಗಂಗಾನದಿ ದಂಡೆಯ ಗ್ರಾಮಗಳ ಜನತೆಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡಲಿದೆ. ಇದು ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಗೋರಿ ಗಂಗಾ ಗ್ರಾಮ ಯೋಜನೆಯನ್ನು ಬಗೋರಿ ಗ್ರಾಮಕ್ಕಾಗಿ ಘೋಷಿಸಲಾಗಿದ್ದು, ಈಗಾಗಲೇ ಬಯಲುಶೌಚ ಮುಕ್ತ ಗ್ರಾಮ ಎಂದು ಗ್ರಾಮವನ್ನು ಗುರುತಿಸಲಾಗಿದೆ.

ಹೊಸ ಸ್ವಜಲ ಯೋಜನೆ

ಯೋಜನೆಯನ್ನು ಬಗೋರಿಯಲ್ಲಿ ಉದ್ಘಾಟಿಸಲಾಗಿದೆ. ಸಮುದಾಯ ಮಾಲೀಕತ್ವದ ಕುಡಿಯುವ ನೀರಿನ ಯೋಜನೆಯನ್ನು ಸುಸ್ಥಿರ ಕುಡಿಯುವ ನೀರು ಸರಬರಾಜಿನ ದೃಷ್ಟಿಯಿಂದ ರೂಪಿಸಿದೆ. ಇದಕ್ಕೆ 32 ಲಕ್ಷ ರೂಪಾಯಿಗಿಂತ ಅಧಿಕ ಬಜೆಟ್ ನೆರವು ಘೋಷಿಸಲಾಗಿದೆ.

ಗಂಗೋತ್ರಿ ಸ್ವಚ್ಛ ಆಕರ್ಷಕ ಸ್ಥಳ ಯೋಜನೆ

ಗಂಗೋತ್ರಿ ಸ್ವಚ್ಛ ಆಕರ್ಷಕ ಸ್ಥಳ ಯೋಜನೆಯ ಪ್ರಮುಖ ಉದ್ದೇಶವೆಂದರೆ, ಗಂಗೋತ್ರಿಯನ್ನು ಸ್ವಚ್ಛ ಹಾಗೂ ಅತ್ಯಾಕರ್ಷಕ ತಾಣವಾಗಿ ರೂಪಿಸುವುದು. ಇದಕ್ಕಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಯಮಿತದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧೀಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಮೂಲಕ ಗಂಗೊತ್ರಿಯಯನ್ನು ಸ್ವಚ್ಛ ಐಕಾನಿಕ್ ಸ್ಥಳವಾಗಿ ಪರಿವರ್ತಿಸಲಾಗುತ್ತದೆ. ಯೋಜನೆಯನ್ನು ಕುಡಿಯುವ ನೀರು & ನೈರ್ಮಲ್ಯ ಸಚಿವಾಲಯ (ಎಂಡಿಡಬ್ಲ್ಯುಎಸ್), ಇತರ ಸಚಿವಾಲಯಗಳಾದ ಗೃಹ ನಿರ್ಮಾಣ ಮತ್ತು ನಗರ ವ್ಯವಹಾರ, ಪ್ರವಾಸೋದ್ಯಮ, ಸಂಸ್ಕøತಿ, ರಾಜ್ಯ ಸರ್ಕಾರಗಳ ನೆರವನ್ನೂ ಪಡೆಯಲಿದೆ. ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಏಜೆನ್ಸಿಗಳನ್ನು ಇದು ಸಹಭಾಗಿತ್ವದಲ್ಲಿ ಸೇರಿಸಿಕೊಳ್ಳಲಿದೆ.

ಬಗೋರಿ ಗಂಗಾ ಗ್ರಾಮ ಯೋಜನೆ

ಬಗೋರಿ ಗಂಗಾ ಗ್ರಾಮ ಯೋಜನೆ ಎನ್ನುವುದು ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಯೋಜನೆಯಾಗಿದ್ದು, ಇದರ ಒಟ್ಟು ಅಂದಾಜು ವೆಚ್ಚ 11.88 ಲಕ್ಷ ರೂಪಾಯಿ. ಬಗೋರಿ ಯೋಜನೆಯು ಗಂಗಾ ಗ್ರಾಮಕ್ಕೆ ಆಯ್ಕೆಯಾದ ಪೈಲಟ್ ಗ್ರಾಮವಾಗಿದೆ. ಗ್ರಾಮವನ್ನು ಪ್ರಸಕ್ತ ವರ್ಷದ ಕೊನೆಯ ಒಳಗಾಗಿ ಗಂಗಾ ಗ್ರಾಮವಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ.

Comment