IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಇ-ನ್ಯಾಮ್ ಪ್ಲಾಟ್‍ಫಾರಂನಲ್ಲಿ ಆರು ಬಳಕೆದಾರ ಸ್ನೇಹಿ ಲಕ್ಷಣ

ಇ-ನ್ಯಾಮ್ ಪ್ಲಾಟ್‍ಫಾರಂನಲ್ಲಿ ಆರು ಬಳಕೆದಾರ ಸ್ನೇಹಿ ಲಕ್ಷಣ

ಕೇಂದ್ರದ ಕೃಷಿ & ರೈತರ ಕಲ್ಯಾಣ ಸಚಿವಾಲಯವು ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್ ಪ್ಲಾಟ್ಫಾರಂನಲ್ಲಿ (-ನ್ಯಾಮ್)ನಲ್ಲಿ ಆರು ಹೊಸ ಗುಣಲಕ್ಷಣಗಳನ್ನು ಸೇರಿಸಿದೆ. ಮೂಲಕ ಇದನ್ನು ಮತ್ತಷ್ಟು ಬಳಕೆದಾರ ಸ್ನೇಹಿ ಪ್ಲಾಟ್ಫಾರಂ ಆಗಿ ರೂಪಿಸುವುದು ಇದರ ಉದ್ದೇಶ.

ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್ ಪ್ಲಾಟ್ಫಾರಂನಲ್ಲಿ (-ನ್ಯಾಮ್) ಇರುವ ಆರು ಹೊಸ ಗುಣಲಕ್ಷಣಗಳೆಂದರೆ, ಭೀಮ್ ಪಾವತಿ ಸೌಲಭ್ಯ, -ನ್ಯಾಮ್ ಮೊಬೈಲ್ ಅಪ್ಲಿಕೇಶನ್, ಕಲಿಕ ಮಾದರಿ ಹೊಂದಿರುವ ಹೊಸ ಹಾಗೂ ಸುಧಾರಿತ ವೆಬ್ಸೈಟ್, ಎಂಐಎಸ್ ಡ್ಯಾಷ್ಬೋರ್ಡ್, ಮಂಡಿ ಕಾರ್ಯದರ್ಶಿಗಳಿಗಾಗಿ ದೂರು ಪರಿಹಾರ ನಿರ್ವಹಣೆ ವ್ಯವಸ್ಥೆ ಮತ್ತು ರೈತರ ಡಾಟಾಬೇಸ್ ಜತೆಗೆ ಸಮನ್ವಯಗೊಳಿಸುವಿಕೆ.

-ನ್ಯಾಮ್ ಪ್ಲಾಟ್ಫಾರಂ

-ನ್ಯಾಮ್ ಪ್ಲಾಟ್ಫಾರಂ, ಕೇಂದ್ರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಅನುಷ್ಠಾನಗೊಳಿಸಿದ ಪ್ರಮುಖ ಯೋಜನೆಯಾಗಿದೆ. ಇದರ ಮುಖ್ಯ ಉದ್ದೇಶವೆಂದರೆ, ರೈತರಿಗೆ ಸ್ಪರ್ಧಾತ್ಮಕ ಮತ್ತು ಸೂಕ್ತ ಬೆಲೆಯನ್ನು ತಮ್ಮ ಉತ್ಪನ್ನಗಳಿಗೆ ದೊರಕಿಸಿಕೊಡುವುದು. ಇದಕ್ಕಾಗಿ ಆನ್ಲೈನ್ ಸ್ಪರ್ಧಾತ್ಮಕ ಹಾಗೂ ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಲಾಗಿದೆ.

-ನ್ಯಾಮ್ ಪ್ಲಾಟ್ಫಾರಂ ಒಂದು ದೇಶವ್ಯಾಪಿ - ಮಾರಾಟ ಪ್ಲಾಟ್ಫಾರಂ ಆಗಿದೆ. ಇದು ಎಲ್ಲ ಕೃಷಿ ಸರಕುಗಳಿಗೆಎ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸುವ ಸಲುವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮುಖ್ಯ ಉದ್ದೇಶವೆಂದರೆ, ರೈತರಿಗೆ ಸ್ಪರ್ಧಾತ್ಮಕ ಮತ್ತು ಸೂಕ್ತ ಬೆಲೆಯನ್ನು ತಮ್ಮ ಉತ್ಪನ್ನಗಳಿಗೆ ದೊರಕಿಸಿಕೊಡುವುದು. ಇದಕ್ಕಾಗಿ ಆನ್ಲೈನ್ ಸ್ಪರ್ಧಾತ್ಮಕ ಹಾಗೂ ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಲಾಗಿದೆ.

ಇದು ಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಸರದಿ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಕೇಂದ್ರೀಯ ರೈತರ ಮಾಹಿತಿ ಕೋಶವನ್ನು ಸಮಗ್ರಗೊಳಿಸುತ್ತದೆ. ಇದನ್ನು 2016 ಏಪ್ರಿಲ್ನಲ್ಲಿ 21 ಮಂಡಿಗಳಲ್ಲಿ ಆರಂಭಿಸಲಾಗಿದೆ. ಇದು ಈಗ 479 ಮಂಡಿಗಳಲ್ಲಿ ವಿಸ್ತರಣೆಯಾಗಿದೆ. ಇದೀಗ 14 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರಸ್ತುತ ಇದು ಎಂಟು ಭಾಷೆಗಲಲ್ಲಿ ಲಭ್ಯ ಹಾಗೂ ವಿವಿಧ ಆರು ಭಾಷೆಗಳಲ್ಲಿ ಲೈವ್ ಟ್ರೇಡಿಂಗ್ ಸೌಲಭ್ಯ ಸಿಗುತ್ತದೆ.

ಇದನ್ನು ಬಳಸಿಕೊಂಡು ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಅತ್ಯಂತ ಸಮೀಪದ ಮಾರುಕಟ್ಟೆಗೆ ತೆರಳಿ ಆನ್ಲೈನ್ನಲ್ಲಿ ಪ್ರದರ್ಶಿಸಲು ಅವಕಾಶವಿದ್ದು, ವ್ಯಾಪಾರಿಗಳು ಎಲ್ಲಿಂದ ಬೇಕಾದರೂ ಇದಕ್ಕೆ ಬೆಲೆಯನ್ನು ಕೋಟ್ ಮಾಡಬಹುದು. ಇದು ವ್ಯಾಪಾರಿಗಳ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಿದ್ದು, ಮೂಲಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಇದು ಮುಕ್ತ ಬೆಲೆ ಸಂಶೋಧನೆ ಮತ್ತು ರೈತರಿಗೆ ಉತ್ತಮ ಪ್ರತಿಫಲದ ಖಾತ್ರಿಯನ್ನು ಒದಗಿಸುತ್ತದೆ.

Comment