IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸುಸ್ತಿ ಬಾಕಿ, ವಂಚನೆ ಪ್ರಕರಣಗಳ ತನಿಖೆಗೆ ಆರ್‍ಬಿಐ ಸಮಿತಿ

ಭಾರತದಲ್ಲಿ ಸುಸ್ತಿ ಸಾಲಗಳ ವರ್ಗೀಕರಣ, ಪರಿಣಾಮಕಾರಿ ಲೆಕ್ಕ ಪರಿಶೋಧನೆ ಮತ್ತು ಹೆಚ್ಚುತ್ತಿರುವ ವಂಚನೆ ಪ್ರಕರಣ ಬಗ್ಗೆ ತನಿಖೆ ನಡೆಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಜ್ಞರ ಸಮಿತಿಯನ್ನು ನೇಮಕ ಮಾಡಿದೆ. ಸಮಿತಿಯ ಅಧ್ಯಕ್ಷರಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರೀಯ ಮಂಡಳಿ ಮಾಜಿ ಸದಸ್ಯ ವೈ.ಎಚ್.ಮಲೇಗಾಂ ಕಾರ್ಯ ನಿರ್ವಹಿಸುವರು.

ಕಾರ್ಯಸೂಚಿ

ಸಮಿತಿಯು ಪ್ರಮುಖವಾಗಿ ಆಸ್ತಿ ವರ್ಗೀಕರಣದಲ್ಲಿ ಅಧಿಕ ವಿಕೇಂದ್ರೀಕರಣಕ್ಕ ಕಾರಣಗಳನ್ನು ಪತ್ತೆ ಮಾಡಲಿದೆ ಮತ್ತು ಬ್ಯಾಂಕುವಾರು ಆರ್ಬಿಐನ ಮೇಲುಸ್ತುವಾರಿ ಮೌಲ್ಯಮಾಪನ ಮಾಡಲು ಕೂಡಾ ಉನ್ನತ ಮಟ್ಟದ ಸಮಿತಿಗೆ ಅಧಿಕಾರ ಇರುತ್ತದೆ. ಬ್ಯಾಂಕುಗಳಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳನ್ನು ತಡೆಯಲು ಮಾರ್ಗೋಪಾಯಗಳ ಬಗ್ಗೆ ಕೂಡಾ ಸಮಿತಿ ಶಿಫಾರಸ್ಸು ಮಾಡಲಿದೆ. ಮಾಹಿತಿ ತಂತ್ರಜ್ಞಾನ ಹಸ್ತಕ್ಷೇಪ ಸೇರಿದಂತೆ ಇಂಥ ವಂಚನೆ ಪ್ರಕರಣಗಳನ್ನು ಕಡಿತಗೊಳಿಸಲು ಹಾಗೂ ತಡೆಯಲು ಅಗತ್ಯ ಕ್ರಮಗಳನ್ನೂ ಶಿಫಾರಸ್ಸು ಮಾಡಲಿದೆ. ಬ್ಯಾಂಕುಗಳಲ್ಲಿ ನಡೆಸಲಾಗುವ ವಿವಿಧ ಬಗೆಯ ಪರಿಶೋಧನೆಎಗಳ ಪಾತ್ರ ಮತ್ತು ಪರಿಣಾಮದ ಬಗ್ಗ ಕೂಡಾ ಇದು ಅಧ್ಯಯನ ನಡೆಸಲಿದೆ. ಮೂಲಕ ವಂಚನೆಗೆ ಕಾರಣವಾಗುವ ಅಂಶಗಳನ್ನು ಬಗೆಹರಿಸುವಂತೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶ.

ಹಿನ್ನೆಲೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ನಲ್ಲಿ ಸೊಸೈಟಿ ಫಾರ್ ವಲ್ರ್ಡ್ವೈಡ್ ಇಂಟರ್ನೆಟ್ ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಶನ್ಗೆ ಸಂಬಂಧಿಸಿದ 11400 ಕೋಟಿ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಮತ್ತು ಇಂಥ ವಂಚನೆಗಳನ್ನು ದೇಶದಲ್ಲಿ ತಡೆಯುವ ನಿಟ್ಟಿನಲ್ಲಿ ಮೇಲ್ವಿಚಾರಣೆ ಚೌಕಟ್ಟನ್ನು ಬಲಗೊಳಿಸುವ ಆರ್ಬಿಐ ಆಶಯಕ್ಕೆ ಅನುಗುಣವಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ಗೆ ಲೆಟರ್ ಆಫ್ ಅಂಡರ್ಟೇಕಿಂಗ್ಗೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲಿ ಇಂಥ ವಂಚನೆಯನ್ನು ಪತ್ತೆ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪ್ರಶ್ನಿಸಿದೆ. ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಪ್ರವರ್ತಕರಾಗಿರುವ ಕಂಪನಿಗಳ ಪರವಾಗಿ ವಿದೇಶಗಳಲ್ಲಿರುವ ಭಾರತೀಯ ಬ್ಯಾಂಕ್ ಶಾಕೆಗಳಿಗೆ ಇಂಥ ಲೆಟರ್ ಆಫ್ ಅಂಡರ್ಟೇಕಿಂಗ್ ನೀಡಲಾಗಿದೆಯೇ ಎಂಬ ಬಗ್ಗೆ ಕೂಡಾ ಪರಿಶೀಲಿಸುವಂತೆ ಭಾರತ ಸರ್ಕಾರ ರಿಸರ್ವ್ ಬ್ಯಾಂಕಿಗೆ ಸೂಚನೆ ನೀಡಿದೆ.

Comment